ಅತ್ತ ಸಂಸತ್‌ ಭವನ ಉದ್ಘಾಟನೆ, ಇತ್ತ ದೇಶಕ್ಕೆ ಕೀರ್ತಿ ತಂಡ ಕುಸ್ತಿಪಟುಗಳ ಬಂಧನ: ಹಾಡುಹಗಲೇ ಪೊಲೀಸ್‌ ಗೂಂಡಾಗಿರಿ

New Delhi : ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ರಾಷ್ಟ್ರ ರಾಜಧಾನಿಯಲ್ಲಿ ನೂತನ ಸಂಸತ್ ಭವನವನ್ನು ಉದ್ಘಾಟಿಸುತ್ತಿರುವಾಗಲೇ ಜಂತರ್-ಮಂತರ್ ನಲ್ಲಿ (Jantar-Mantar) ಗೊಂದಲದ ಸ್ಥಿತಿ ನಿರ್ಮಾಣವಾಗಿತ್ತು. ದೇಶಕ್ಕಾಗಿ ಪದಕಗಳನ್ನು ಗೆದ್ದಿರುವ ಭಜರಂಗ್ ಫೂನಿಯಾ, ವಿನೇಶ್ ಫೋಗಾಟ್, ಸಾಕ್ಷಿ ಮಲಿಕ್ ಸೇರಿದಂತೆ (Inauguration of Parliament) ಹಲವಾರು ಪ್ರತಿಭಟನಾ ನಿರತ ಕುಸ್ತಿಪಟುಗಳನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಈ ಬಗ್ಗೆ ಹಲವು ಕುಸ್ತಿಪಟುಗಳು ಸೇರಿದಂತೆ ದೇಶದದ್ಯಂತ ಅನೇಕರು ಆಕ್ರೋಶ ವ್ಯಕ್ತಪಡಿಸಿದರು.

ಭಾರತೀಯ ಜನತಾ ಪಕ್ಷದ (ಬಿಜೆಪಿ) ಸಂಸದ ಮತ್ತು ಭಾರತೀಯ ಕುಸ್ತಿ ಫೆಡರೇಶನ್ ಅಧ್ಯಕ್ಷ ಬ್ರಿಜ್‌ಭೂಷಣ್ ಶರಣ್ ಸಿಂಗ್ (Brijbhushan Sharan Singh) ಅವರ ಮೇಲೆ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದಾರೆ ಮತ್ತು ಅವರನ್ನು ತಕ್ಷಣ ಬಂಧಿಸಬೇಕೆಂದು ಒತ್ತಾಯಿಸಿದರು.

ಇದೇ ವೇಳೆ ನೂತನ ಸಂಸತ್ ಭವನದ ಎದುರು ‘ಮಹಾ ಪಂಚಾಯತ್‌’ (Maha Panchayat) ಹೆಸರಿನ ಬೃಹತ್ ಪ್ರತಿಭಟನೆ ನಡೆಸಲು ಕೂಡ ಯೋಜಿಸಿದ್ದರು.

ಕುಸ್ತಿಪಟುಗಳು ಸಂಸತ್ ಭವನದ ಉದ್ಘಾಟನೆಯ ಸಮಯದಲ್ಲಿ ಮುತ್ತಿಗೆ ಹಾಕಲು ಯೋಜನೆ ರೂಪಿಸಿದ್ದರು.ಆದರೆ ದೆಹಲಿ ಪೊಲೀಸರು ತಡೆದರು.


ಇನ್ನು ಪೊಲೀಸರ ವರ್ತನೆಯ ಬಗ್ಗೆ, ಕಾರ್ಯವೈಖರಿಗೆ ಆಕ್ರೋಶ ವ್ಯಕ್ತಪಡಿಸಿರುವ ವಿನೇಶ್ ಫೋಗಾಟ್ (Vinesh Phogat) , ಜಂತರ್-ಮಂತರ್‌ನಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ,

ಒಂದೆಡೆ ಪ್ರಧಾನಿ ಹೊಸ ಸಂಸತ್ ಭವನವನ್ನು ಉದ್ಘಾಟಿಸುತ್ತಿದ್ದರೆ, ಮತ್ತೊಂದೆಡೆ ನಮ್ಮವರನ್ನೇ ಬಂಧಿಸಲಾಗುತ್ತಿದೆ.

ಕುಸ್ತಿಪಟುಗಳು ಮತ್ತು ಹೋರಾಟಗಾರರು ಜಂತರ್-ಮಂತರ್‌ನಲ್ಲಿ ವಾಸ್ತವ್ಯ ಹೂಡಲು ಮಾಡಿಕೊಂಡಿದ್ದ ವಸ್ತುಗಳನ್ನು ಕೂಡ ಪೊಲೀಸರು (Inauguration of Parliament) ಜಪ್ತಿ ಮಾಡಿದ್ದಾರೆ.

ಇದು ಗೂಂಡಾಗಿರಿಯ ಕೃತ್ಯವಾಗಿದೆ ಎಂದು ರಿಯೋ ಒಲಿಂಪಿಕ್ (Rio Olympics) ಕಂಚಿನ ಪದಕ ವಿಜೇತೆ ಸಾಕ್ಷಿ ಮಲಿಕ್ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

https://youtube.com/shorts/v_467g-UD_E?feature=share


ನೂತನ ಸಂಸತ್ ಭವನಕ್ಕೆ ಕುಸ್ತಿಪಟುಗಳು ಮುತ್ತಿಗೆ ಹಾಕಲಿದ್ದಾರೆ ಎನ್ನುವ ಸುಳಿವು ಸಿಗುತ್ತಿದ್ದಂತೆಯೇ ಬಿಗಿ ಬಂದೋಬಸ್ತ್

ಅನ್ನು ನೂತನ ಪಾರ್ಲಿಮೆಂಟ್ (Parliament) ಸುತ್ತ ಮಾಡಲಾಗಿದೆ.ಘಾಜಿಪುರ್,(Ghazipur) ಸಿಂಘು,ಟಿಕ್ರಿ ಮೊದಲಾದ ದೆಹಲಿಯ ಬಾರ್ಡರ್‌ಗಳಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ.

ಅಲ್ಲದೆ ಸೂಕ್ಷ್ಮ ಪ್ರದೇಶಗಳಲ್ಲಿ,ದೆಹಲಿಯ ಗಡಿ ಭಾಗಗಳಲ್ಲಿ ಪೆಟ್ರೋಲಿಂಗ್ ವಾಹನಗಳು ಹದ್ದಿನ ಕಣ್ಣಿಟ್ಟಿದೆ.


ಆದ್ರೆ ಪೊಲೀಸರ ಈ ಕೃತ್ಯಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ. ವಿಶ್ವದ ಅತೀ ದೊಡ್ಡ ಪ್ರಜಾಪ್ರಭುತ್ವ ರಾಷ್ಟದಲ್ಲಿ ಹೆಣ್ಣು ಮಕ್ಕಳು ನ್ಯಾಯಕ್ಕಾಗಿ ಪ್ರತಿಭಟನೆ ಮಾಡುತ್ತಿದ್ರೆ ಅವರ ವಿರುದ್ಧ ಪೊಲೀಸ್‌ ಗೂಂಡಾಗಿರಿ ಮಾಡಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಪದಕ ತಂದುಕೊಟ್ಟ ಮಹಿಳಾ ಕುಸ್ತಿಪಟುಗಳ ಅಳಲು ಕೇಳದೇ ಇರದಿರವುದು ಈ ದೇಶದ ದೊಡ್ಡ ದುರಂತ ಅಂತ ಜನರು ವ್ಯಾಪಕವಾಗಿ ಟೀಕಿಸುತ್ತಿದ್ದಾರೆ.

ರಶ್ಮಿತಾ ಅನೀಶ್

Exit mobile version