ಇಂಧನ ಬೆಲೆ ಏರಿಕೆ, ಸರ್ಕಾರಿ ಅಧಿಕಾರಿಗಳ ಕಾರು, ಎಲೆಕ್ಟ್ರಿಕ್ ಕಾರುಗಳಾಗಿ ಮಾರ್ಪಾಡು

ನವದೆಹಲಿ, ಫೆ. 27: ಪೆಟ್ರೋಲ್, ಡಿಸೇಲ್ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು ಜನಸಾಮಾನ್ಯರು ದುಡಿಯುವ ಹಣದಲ್ಲಿ ಇಂಧನಕ್ಕೆ ಹೆಚ್ಚು ವ್ಯಯಿಸಬೇಕಾದ ಅನಿವಾರ್ಯ ಪರಿಸ್ಥಿತಿ ಉಂಟಾಗಿದೆ. ಈ ಹಿನ್ನಲೆಯಲ್ಲಿ ದೆಹಲಿ ಸರ್ಕಾರ, ಅಧಿಕಾರಿಗಳಿಗೆ ಎಲೆಕ್ಟ್ರಿಕ್ ಕಾರುಗಳನ್ನು ಉಪಯೋಗಿಸಲು ಸೂಚನೆ ನೀಡಿದೆ.

ದೆಹಲಿ ಸರ್ಕಾರ ಹೊರಡಿಸಿರುವ ಈ ಸುತ್ತೋಲೆಯಲ್ಲಿ ಮುಂದಿನ ಆರು ತಿಂಗಳಲ್ಲಿ ಎಲ್ಲಾ ಸರ್ಕಾರಿ ಅಧಿಕಾರಿಗಳ ಡಿಸೇಲ್ ಕಾರುಗಳನ್ನು ಎಲೆಕ್ಟ್ರಿಕ್ ಕಾರುಗಳಾಗಿ  ಬದಲಾಯಿಸಲಾಗುವುದು ಎಂದು ಮನೀಶ್ ಸಿಸೋಡಿಯಾ ಟ್ವೀಟ್ ಮಾಡಿದ್ದಾರೆ.

ದೆಹಲಿಯನ್ನು ಎಲೆಕ್ಟ್ರಿಕ್ ವಾಹನಗಳ ಕೇಂದ್ರವನ್ನಾಗಿ ಮಾಡಲು ದೆಹಲಿ ಸರ್ಕಾರವು ಅಧಿಕೃತವಾಗಿ ಸುಮಾರು 2 ಸಾವಿರ ಕಾರುಗಳನ್ನು ಬಳಸುತ್ತಿದೆ. ಈ ಎಲ್ಲಾ ಕಾರುಗಳನ್ನು ಎಲೆಕ್ಟ್ರಿಕ್ ಕಾರುಗಳಾಗಿ ಬದಲಾಯಿಸಲಾಗುತ್ತದೆ. ಈ ಕ್ರಮ ಇತರೆ ರಾಜ್ಯಗಳಿಗೆ ಕೂಡಾ ಮಾದರಿಯಾಗಲಿ ಎಂದು ತಿಳಿಸಿದ್ದಾರೆ.

Exit mobile version