DAP ರಸಗೊಬ್ಬರ ಖರೀದಿ ಸಬ್ಸಿಡಿ 700 ರೂಪಾಯಿಗೆ ಹೆಚ್ಚಳ: ಕೇಂದ್ರ ತೀರ್ಮಾನ

ನವದೆಹಲಿ,ಜೂ.16: ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟವು ಮಹತ್ವದ ತೀರ್ಮಾನವೊಂದನ್ನು ತೆಗೆದುಕೊಂಡಿದ್ದು, DAP ರಸಗೊಬ್ಬರದ ಮೇಲೆ ರೈತರಿಗೆ ನೀಡುವ ಸಬ್ಸಿಡಿಯನ್ನು 700 ರೂಪಾಯಿಗೆ ಹೆಚ್ಚಿಸಲು ನಿರ್ಧರಿಸಿದೆ.

ಸಂಪುಟ ಸಭೆ ನಂತರ ಮಾತನಾಡಿದ ರಸಗೊಬ್ಬರ ಖಾತೆ ರಾಜ್ಯ ಸಚಿವ ಮನಸುಖ್ ಮಾಂಡವಿಯಾ ಅವರು ಈವರೆಗೆ DAP ರಸಗೊಬ್ಬರ ಖರೀದಿ ಮೇಲೆ ರೈತರಿಗೆ 500 ರೂಪಾಯಿ ಸಬ್ಸಿಡಿ ನೀಡಲಾಗುತ್ತಿತ್ತು. ಡಿಎಪಿಗೆ ಒಟ್ಟು 1200 ರೂಪಾಯಿ ಸಬ್ಸಿಡಿ ನೀಡಲು ನಿರ್ಧಾರವಾಗಿದೆ. ರೈತರಿಗೆ ಒಂದು ಮೂಟೆ ಡಿಎಪಿ 1,200 ರೂಪಾಯಿಗೆ ಸಿಗಲಿದೆ. ಮಾರ್ಕೆಟ್‌ನಲ್ಲಿ 1 ಮೂಟೆ ಡಿಎಪಿ ಬೆಲೆ 2,400 ರೂ. ಇದೆ. ಯೂರಿಯಾಗೆ 900 ರೂಪಾಯಿ ಸಬ್ಸಿಡಿ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

Exit mobile version