ಹೆಚ್ಚಿದ ಕೊರೊನಾ ಆತಂಕ: ಗಡಿಜಿಲ್ಲೆ ಚಾಮರಾಜನಗರ ಗಡಿಭಾಗದಲ್ಲಿ ಹೈಅಲರ್ಟ್ ಘೋಷಣೆ

ಚಾಮರಾಜನಗರ, ಮಾ. 23: ರಾಜ್ಯದಲ್ಲಿ ಕೊರೊನಾ ಅಟ್ಟಹಾಸ ಮಿತಿಮೀರುತ್ತಿದೆ . ಕಳೆದ 10 ದಿನಗಳಿಂದ ಪ್ರತಿನಿತ್ಯ ಪಾಸಿಟಿವ್ ಕೇಸ್ಗ ಸಂಖ್ಯೆ ಹೆಚ್ಚಾಗ್ತಿದ್ದು , ಜನರು ಭಯಭೀತರಾಗಿದ್ದಾರೆ , ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.

ನೆರೆಯ ರಾಜ್ಯ ಕೇರಳದಲ್ಲಿ ಕೊರೊನಾ ಸೋಂಕಿತರ ಹೆಚ್ಚಳ ಹಿನ್ನೆಲೆ ಗಡಿಯಲ್ಲಿ ತಪಾಸಣಾ ಕಾರ್ಯ ಚುರುಕುಗೊಂಡಿದೆ. ಎರಡು ಅಂತರಾಜ್ಯವನ್ನು ಗುಂಡ್ಲುಪೇಟೆ ತಾಲೂಕು ಹಂಚಿಕೊಂಡಿದ್ದು, ಬಂಡೀಪುರ ಅಭಯಾರಣ್ಯದ ಮೂಲೆಹೊಳೆ ಚೆಕ್ ಪೋಸ್ಟ್ ನಲ್ಲಿ ಅರಣ್ಯ ಹಾಗೂ ಆರೋಗ್ಯ ಇಲಾಖೆಯಿಂದ ಕಟ್ಟುನಿಟ್ಟಿನ ಕ್ರಮ ಜಾರಿ ಮಾಡಲಾಗಿದೆ.

ಪ್ರತಿನಿತ್ಯ ಸಾವಿರಾರು ವಾಹನಗಳು ಸಂಚರಿಸುವ ಹಿನ್ನೆಲೆಯಲ್ಲಿ ಸೋಂಕು ಪೀಡಿತ ಕೇರಳದಿಂದ ರಾಜ್ಯದಲ್ಲಿ ಮತ್ತೇ ಸೋಂಕಿತರು ಹೆಚ್ಚುವ ಆತಂಕ ಮನೆಮಾಡಿದ್ದು, ಆರೋಗ್ಯ ಇಲಾಖೆ ಮತ್ತು ಕಂದಾಯ ಇಲಾಖೆಯ ಸಿಬ್ಬಂದಿಗಳು ಎರಡು ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ವೇಳೆ ಕೋವಿಡ್ ನೆಗೆಟಿವ್ ವರದಿ ಇಲ್ಲದೆ ಯಾರಿಗೂ ರಾಜ್ಯಕ್ಕೆ ಪ್ರವೇಶ ನೀಡದೆ, ರಾಜ್ಯ ಪ್ರವೇಶಿಸುವವರಿಗೆ ಆರೋಗ್ಯ ಇಲಾಖೆ ಸಿಬ್ಬಂದಿಗಳು ಥರ್ಮಲ್ ಸ್ಕಾನಿಂಗ್ ಮಾಡುತ್ತಿದ್ದಾರೆ. ಗಡಿ ಪ್ರವೇಶಿಸೋ ಪ್ರತಿ ವಾಹನಗಳ ತಪಾಸಣೆ ನಡೆಯುತ್ತಿದೆ.

ಥರ್ಮಲ್ ಸ್ಕ್ರೀನಿಂಗ್ನಲ್ಲಿ ಟೆಂಪ್ರೇಚರ್ ಚೆಕ್ ಮಾಡಲಾಗ್ತಿದ್ದು , ಆರ್ಟಿಪಿಸಿಆರ್ ನೆಗೆಟಿವ್ ರಿಪೋರ್ಟ್ ಕಡ್ಡಾಯ ಮಾಡಲಾಗಿದೆ, ಮೂಲೆಹೊಳೆ ಚೆಕ್ ಪೋಸ್ಟ್ ನಲ್ಲಿ ಸಿಕ್ಕಾಪಟ್ಟೆ ಹೈ ಅಲರ್ಟ್ ಘೊಷಿಸಲಾಗಿದೆ . ಮೈಸೂರು ಭಾಗಕ್ಕೆ ಕೇರಳದಿಂದ ಹೆಚ್ಚು ಪ್ರವಾಸಿಗರು ಆಗಮಿಸೋ ಹಿನ್ನೆಲೆ ಆತಂಕ ಜಾಸ್ತಿ ಇದೆ. ಚಾಮರಾಜನಗರ ಜಿಲ್ಲೆಯ ಒಂದು ಮಾರ್ಗವಾಗಿ ಮೈಸೂರಿಗೆ ಆಗಮಿಸೋ ಬಹುದಾಗಿದ್ದು, ಹೀಗಾಗಿ ಮೈಸೂರು ಜಿಲ್ಲಾಡಳಿತ ಸಿಕ್ಕಾಪಟ್ಟೆ ಚುರುಕಾಗಿದೆ.

Exit mobile version