ಕೋವಿಡ್ ಪ್ರಕರಣಗಳ ಹೆಚ್ಚಳ ಹಿನ್ನೆಲೆ: ಅಣ್ಣಮ್ಮನ ಮೊರೆ ಹೋದ ಮುಖ್ಯಮಂತ್ರಿ ಯಡಿಯೂರಪ್ಪ

ಬೆಂಗಳೂರು, ಮೇ. 07: ರಾಜ್ಯದಲ್ಲಿ ದಿನೇ ದಿನೆ ಕೋವಿಡ್‌ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು, ಜನಜೀವನ ಬಿಗಡಾಯಿಸುತ್ತಿದೆ. ಇದರ ಮಧ್ಯೆಯೇ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಅಣ್ಣಮ್ಮ ದೇವರ ಮೊರೆ ಹೋಗಿದ್ದಾರೆ.

ಬೆಂಗಳೂರಿನ ಮೆಜೆಸ್ಟಿಕ್ ನಲ್ಲಿರುವ ಅಣ್ಣಮ ದೇವಸ್ಥಾನಕ್ಕೆ ಭೇಟಿ ನೀಡಿದ ಅವರು, ರಾಜ್ಯದಲ್ಲಿ ಕೊರೊನಾ ನಿಯಂತ್ರಣ ಆಗುವಂತೆ ದೇವರ ಮುಂದೆ ಸಿಎಂ ಶುಕ್ರವಾರ ಪ್ರಾರ್ಥನೆ ಸಲ್ಲಿಸಿದರು. ನಂತರ
ಈ ಕುರಿತು ಮಾತನಾಡಿದ ಅವರು, ಬೆಳಗ್ಗೆಯೇ ದರ್ಶನ ಪಡೆಯಲು ಬಂದೆ. ಕೊರೊನಾ ದೂರ ಆಗುವ ವಿಶ್ವಾಸ ನನಗೆ ಬಂದಿದೆ. ಕೊರೊನಾ ಹೋಗಲಿ ಅಂತ ಪ್ರಾರ್ಥಿಸಿದ್ದೇನೆ ಎಂದು ತಿಳಿಸಿದ್ದಾರೆ.

ದಿನೇ ದಿನೇ ಪ್ರಕರಣಗಳು ಹೆಚ್ಚಾಗುತ್ತಿದ್ದು, ನಾಳೆ ಮಹತ್ವದ ಸಭೆ ನಡೆಯಲಿದೆ. ಕೋವಿಡ್‌ ನಿಯಂತ್ರಣಕ್ಕೆ ಬರಬೇಕಷ್ಟೆ. ಅದಕ್ಕಾಗಿ ಬಿಗಿ ಕ್ರಮ ಅನಿವಾರ್ಯ. ಜನತಾ ಕರ್ಫ್ಯೂ ಯಾರು ಸರಿಯಾಗಿ ಪಾಲನೆ ಮಾಡುತ್ತಿಲ್ಲ. ಹೀಗಾಗಿ, ಲಾಕ್ಡೌನ್ ಅನಿವಾರ್ಯ ಆಗಬಹುದು ಎಂದು ಹೇಳಿದ್ದಾರೆ.

ಜನರ ಪರವಾಗಿ ನಾವು ಇದ್ದೇವೆ. ಬೆಡ್ ಸಿಗಲಿಲ್ಲ ಅಂತ ಸಿಎಂ ಮನೆ ಬಳಿ, ವಿಧಾನಸೌಧದ ಬಳಿ ಬರುವುದು ಸರಿ ಅಲ್ಲ. ಈ ರೀತಿ ಬರುವುದು ಬೇಡ. ಅಧಿಕಾರಿಗಳ ಗಮನಕ್ಕೆ ತಂದು ಬೆಡ್ ಕೊಡಿಸಲು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಭರವಸೆ ನೀಡಿದ್ದಾರೆ.

Exit mobile version