ಇಂದು ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಏಕದಿನ ಪಂದ್ಯ ; ಶಿಖರ್‌ ಧವನ್‌ನೇತೃತ್ವದ ಹೊಸ ತಂಡ ಕಣಕ್ಕೆ

Cricket

Lucknow : ಇಂದು ದಕ್ಷಿಣ ಆಫ್ರಿಕಾ ವಿರುದ್ದದ ಏಕದಿನ ಸರಣಿಯ (One Day Match) ಮೊದಲ ಪಂದ್ಯವು ಉತ್ತರಪ್ರದೇಶದ ಲಕ್ನೋದಲ್ಲಿ ನಡೆಯಲಿದೆ.

ಈಗಾಗಲೇ ದಕ್ಷಿಣ ಆಫ್ರಿಕಾ ವಿರುದ್ದ 2-1 ಅಂತರದಲ್ಲಿ ಟಿ-20 (T-20) ಸರಣಿಯನ್ನು ಗೆದ್ದು ಬೀಗಿರುವ ಭಾರತ ತಂಡ, ಏಕದಿನ ಸರಣಿಗಾಗಿ ಹೊಸ ತಂಡವನ್ನ ಕಣಕ್ಕಿಳಿಸಲಿದೆ.

ಟಿ-20 ಸರಣಿಯಲ್ಲಿ ಭಾಗಿಯಾಗಿರುವ ಬಹುತೇಕ ಎಲ್ಲ ಆಟಗಾರರು ವಿಶ್ವಕಪ್‌ಗಾಗಿ (India faces south africa in first ODI) ಆಸ್ಟ್ರೇಲಿಯಾಕ್ಕೆ ತೆರಳಲಿದ್ದು, ಶಿಖರ್‌ ಧವನ್‌ (Shikar Dhawan) ನೇತೃತ್ವದಲ್ಲಿ ಇಂದು ಹೊಸ ತಂಡ ಮೊದಲ ಏಕದಿನ ಪಂದ್ಯವನ್ನು ಆಡಲಿದೆ.

https://youtu.be/36CutYGBj-4

ದಕ್ಷಿಣ ಆಫ್ರಿಕಾ ತಂಡ : ಟೆಂಬಾ ಬವುಮಾ, ಕೇಶವ್ ಮಹಾರಾಜ್, ಕ್ವಿಂಟನ್ ಡಿ ಕಾಕ್, ಹೆನ್ರಿಚ್ ಕ್ಲಾಸೆನ್, ರೀಜಾ ಹೆಂಡ್ರಿಕ್ಸ್, ಜನ್ನೆಮನ್ ಮಲನ್, ಐಡೆನ್ ಮಾರ್ಕ್ರಾಮ್, ಡೇವಿಡ್ ಮಿಲ್ಲರ್, ಲುಂಗಿ ಎನ್ಗಿಡಿ, ಅನ್ರಿಚ್ ನಾರ್ಟ್ಜೆ, ವೇಯ್ನ್ ಪಾರ್ನೆಲ್, ಆಂಡಿಲ್ ಫೆಹ್ಲುಕ್ವಾಯೊ, ಪ್ರಿಟೋರಿಯಸ್, ಕಗಿಸೊ ರಬಾಡ, ತಬ್ರೈಜ್ ಶಮ್ಸಿ.

ಇದನ್ನೂ ಓದಿ : https://vijayatimes.com/congress-bharat-jodo-yatra/


ಭಾರತ ತಂಡ : ಶಿಖರ್ ಧವನ್, ಶ್ರೇಯಸ್ ಅಯ್ಯರ್, ಇಶಾನ್ ಕಿಶನ್, ಸಂಜು ಸ್ಯಾಮ್ಸನ್, ರುತುರಾಜ್ ಗಾಯಕ್ವಾಡ್, ಶುಭ್ಮನ್ ಗಿಲ್, ರಜತ್ ಪಾಟಿದಾರ್, ರಾಹುಲ್ ತ್ರಿಪಾಠಿ, ಶಹಬಾಜ್ ಅಹ್ಮದ್, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ರವಿ ಬಿಷ್ಣೋಯ್, ಮುಖೇಶ್ ಕುಮಾರ್ , ಅವೇಶ್ ಖಾನ್, ಮೊಹಮ್ಮದ್ ಸಿರಾಜ್, ದೀಪಕ್ ಚಾಹರ್.

ಇನ್ನು ಇಂದಿನ ಪಂದ್ಯವು ಉತ್ತರಪ್ರದೇಶದ ಲಕ್ನೋದಲ್ಲಿರುವ ಭಾರತ ರತ್ನ ಅಟಲ್‌ಬಿಹಾರಿ ವಾಜಪೇಯಿ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಪಂದ್ಯವು ಭಾರತೀಯ ಕಾಲಮಾನ 1:30ಕ್ಕೆ ಪ್ರಾರಂಭವಾಗಲಿದೆ.

ಪಂದ್ಯದ (India faces south africa in first ODI) ನೇರಪ್ರಸಾರವನ್ನು ಸ್ಟಾರ್‌ಸ್ಪೋರ್ಟ್ಸ್‌ನಲ್ಲಿ(Star Sports) ನೋಡಬಹುದು.

ಇನ್ನು ಮದ್ಯಪ್ರದೇಶದ ಯುವ ಬ್ಯಾಟರ್‌ರಜತ್ ಪಾಟಿದಾರ್ ಇಂದು ತಮ್ಮ ಮೊದಲ ಅಂತರಾಷ್ಟ್ರೀಯ ಪಂದ್ಯವನ್ನು ಆಡಲಿದ್ದು, ಅದ್ಭುತ ಫಾರ್ಮ್‌ನಲ್ಲಿರುವ ರಜತ್ ಪಾಟಿದಾರ್ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.

Exit mobile version