ಟಿಪ್ಪು ಸಿಂಹಾಸನದ ಕಳಸ 15 ಕೋಟಿಗೆ ಹರಾಜು

ಲಂಡನ್ ನ 17 :  ದಶಕಗಳ ಹಿಂದೆ ಭಾರತದಿಂದ ಲೂಟಿ ಹೊಡೆಯಲಾಗಿದ್ದ ಟಿಪ್ಪು ಸುಲ್ತಾನ್ ಸಿಂಹಾಸನನದ ಕಳಸವೊಂದನ್ನು ಬ್ರಿಟನ್ ಸರ್ಕಾರ ಹರಾಜಿಗೆ ಇಟ್ಟಿದೆ.

ಮೈಸೂರು ಹುಲಿ ಟಿಪ್ಪು ಸುಲ್ತಾನ್ ಸಿಂಹಾಸನದಲ್ಲಿ ಅಳವಡಿಸಿದ್ದ, ದಶಕಗಳ ಹಿಂದೆ ಭಾರತದಿಂದ ಲೂಟಿ ಹೊಡೆಯಲಾಗಿದ್ದ ಸಿಂಹಾಸನದ ಕಳಸವೊಂದನ್ನು ಬ್ರಿಟನ್ ಸರ್ಕಾರ ಹರಾಜಿಗೆ ಇಟ್ಟಿದೆ.

ಹುಲಿಯ ತಲೆಯುಳ್ಳ ಈ ಐತಿಹಾಸಿಕ ಕಳಸಕ್ಕೆ 15 ಕೋಟಿ ರೂಪಾಯಿ ಬೆಲೆ ನಿಗದಿ ಪಡಿಸಲಾಗಿದೆ. ಬ್ರಿಟನ್ ಸಂಸ್ಕೃತಿ ಇಲಾಖೆ ಇದನ್ನು ಹರಾಜಿಗೆ ಇಟ್ಟಿದೆಯಾದರೂ ಇದರ ರಫ್ತಿಗೆ ತಾತ್ಕಾಲಿಕ ನಿಷೇಧ ಇರುವುದರಿಂದ ಬ್ರಿಟನ್ ಖರೀದಿದಾರರನ್ನೇ ಹುಡುಕಲಾಗಿದೆ. ಈ ಮೂಲಕವಾಗಿ ಕಳಸವನ್ನು ಬ್ರಿಟನ್‍ನಲ್ಲೇ ಉಳಿಸಿಕೊಳ್ಳುವ ಯತ್ನವನ್ನು ಸರ್ಕಾರ ಮಾಡಿದೆ.

18ನೇ ಶತಮಾನದಲ್ಲಿ ಮೈಸೂರು (mysuru) ರಾಜ್ಯವನ್ನು ಆಳುತ್ತಿದ್ದ ವೇಳೆ ಟಿಪ್ಪು ಸುಲ್ತಾನ್ ಬಳಸುತ್ತಿದ್ದ ಸಿಂಹಾಸನದಲ್ಲಿ ಒಟ್ಟು 9 ಕಳಸಗಳಿದ್ದವು. ಆ ಪೈಕಿ ಇದು ಕೂಡಾ ಒಂದು.

Exit mobile version