ಇಂಡಿಯನ್‌ ಆಯಿಲ್ ಪೈಪ್‌ಲೈನ್‌ಗೇ ಕನ್ನ: ಕಳ್ಳರ ಕೈಚಳಕಕ್ಕೆ ಬೆಚ್ಚಿ ಬಿದ್ದ ಪೊಲೀಸ್‌ !

New Delhi : ಇಂಧನ ಕಳ್ಳರ ಕೈಚಳಕಕ್ಕೆ ಪೊಲೀಸರೇ ಬೆಚ್ಚಿಬಿದ್ದಿದ್ದಾರೆ.(Indian Oil Pipeline stolen) ಈ ಕಳ್ಳರು ಅತ್ಯಧಿಕ ಸುರಕ್ಷತೆ ಹೊಂದಿರುವ ಪೆಟ್ರೋಲ್‌ ಉತ್ಪನ್ನ ಸಾಗಿರುವ ಇಂಡಿಯನ್ ಆಯಿಲ್ ಕಾರ್ಪೊರೇಷನ್‌ನ

(Indian oil Corporation) ಪೈಪ್‌ಲೈನ್‌ಗೇ ಕನ್ನ ಹಾಕಿ ಸಾವಿರಾರು ಲೀಟರ್‌ ತೈಲ ಕದ್ದಿದ್ದಾರೆ. ಆದ್ರೆ ಸುರಂಗ ತೋಡಿ ಪೈಪ್‌ಲೈನ್‌ನಿಂದ ತೈಲ ಕಳ್ಳತನ ಮಾಡುತ್ತಿದ್ದ ಐವರನ್ನು ಬಂಧಿಸುವ ಮೂಲಕ

ಕುರುಕ್ಷೇತ್ರ(Kurukshethra) ಪೊಲೀಸರು ಅಂತಾರಾಜ್ಯ ಗ್ಯಾಂಗ್ ಅನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳನ್ನು ನವದೆಹಲಿಯ ಸ್ವರಣ್ ಸಿಂಗ್, ಉತ್ತರ ಪ್ರದೇಶದ ಗಾಜಿಯಾಬಾದ್‌ನ ಅಬಿದ್, ನಫೀಸ್

ಮತ್ತು ರಶೀದ್ ಖಾನ್ ಮತ್ತು ಸೋನೆಪತ್‌ನ ಸೋಂಪಾಲ್ ಎಂದು ಗುರುತಿಸಲಾಗಿದೆ.

ಅಧಿಕ ಜನಸಂದಣಿ ಇರುವ ಪಾಣಿಪತ್-ಅಂಬಾಲಾ-ಜಲಂಧರ್ ಪೈಪ್‌ಲೈನ್‌ನಿಂದ ತೈಲ ಕಳ್ಳತನವಾಗಿದೆ ಎಂದು ಆರೋಪಿಸಿ ಐಒಸಿ ಅಂಬಾಲಾ ಅಧಿಕಾರಿಗಳು ಡಿಸೆಂಬರ್ 7 ರಂದು ಪೊಲೀಸರಿಗೆ ದೂರು ದಾಖಲಿಸಿದ್ದಾರೆ

ಎಂದು ಕುರುಕ್ಷೇತ್ರ ಪೊಲೀಸ್ ವರಿಷ್ಠಾಧಿಕಾರಿ ಸುರೇಂದರ್ ಸಿಂಗ್ ಭೋರಿಯಾ(Surendar singh bhoriya) ಹೇಳಿದ್ದಾರೆ. ಕುರುಕ್ಷೇತ್ರ ಜಿಲ್ಲೆಯ ಶಹಬಾದ್ ಮಾರ್ಕಂಡ ಪಟ್ಟಣದ ಜಾಗೀರ್ ವಿಹಾರ್ ಕಾಲೋನಿಯಲ್ಲಿ,

ಡಿಸೆಂಬರ್ 14 ಮತ್ತು 15 ರಂದು ಪೈಪ್‌ಲೈನ್‌ನಿಂದ ಸುಮಾರು 13,000 ಲೀಟರ್ ಡೀಸೆಲ್ ಕಳ್ಳತನ ಪತ್ತೆಯಾಗಿದೆ ಎಂದು ಭೋರಿಯಾ ತಿಳಿಸಿದ್ದಾರೆ. ಖದೀಮರ ಕೈಚಳಕ ಕಂಡು ಪೊಲೀಸ್‌ ತಂಡವೇ ಬೆಚ್ಚಿಬಿದ್ದಿದೆ!

ಆರೋಪಿಗಳು ಪೈಪ್‌ಲೈನ್ ದಾಟುವ ಪ್ರದೇಶದ ವಿವರಗಳನ್ನು ಮುಂಚಿತವಾಗಿಯೇ ಸಂಗ್ರಹಿಸಿದ್ದಾರೆ. ನಂತರ ಅವರು ಪೈಪ್‌ಲೈನ್ ಬಳಿ ಮನೆಗಳನ್ನು ಖರೀದಿಸಿದ್ದಾರೆ ಎಂದು ಭೋರಿಯಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಡ್ರಿಲ್ ಯಂತ್ರಗಳ ಸಹಾಯದಿಂದ ಪೈಪ್‌ಲೈನ್‌ನಲ್ಲಿ ವಾಲ್ವ್ (Indian Oil Pipeline stolen)ಅಳವಡಿಸಿ ತೈಲವನ್ನು ಕದ್ದಿದ್ದಾರೆ. ಖದೀಮರ ಗ್ಯಾಂಗ್‌ ಬಳಿಯಿಂದ 4 ಲಕ್ಷ ರೂ. ನಗದು, 65 ಲೀಟರ್ ಡೀಸೆಲ್, ಸುರಕ್ಷತಾ ಟ್ಯಾಂಕ್, 4 ಮೊಬೈಲ್ ಫೋನ್‌ಗಳು ಮತ್ತು ಒಂದು ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಇದನ್ನೂ ಓದಿ: https://vijayatimes.com/urfi-javed-statement/

ಪಂಜಾಬ್(Punjab), ಹರಿಯಾಣ(Haryana) ಮತ್ತು ರಾಜಸ್ಥಾನದಲ್ಲಿ(Rajasthan) ತೈಲ ಕಳ್ಳತನದ ಹಲವಾರು ಪ್ರಕರಣಗಳಲ್ಲಿ ಸ್ವರಣ್ ಸಿಂಗ್ ಭಾಗಿಯಾಗಿದ್ದಾನೆ ಎಂದು ಎಸ್ಪಿ ಹೇಳಿದ್ದಾರೆ.

2015 ರಲ್ಲಿ ಕುರುಕ್ಷೇತ್ರ ಜಿಲ್ಲಾ ನ್ಯಾಯಾಲಯದಿಂದ ಘೋಷಿತ ಅಪರಾಧಿ ಎಂದು ಘೋಷಿಸಲಾಗಿದೆ. ಸದ್ಯ ಈ ಪ್ರಕರಣದ ತನಿಖೆಯನ್ನು ಪೊಲೀಸರ ತಂಡ ಮತ್ತಷ್ಟು ಚುರುಕುಗೊಳಿಸಿದ್ದು, ಆರೋಪಿಗಳ ಗ್ಯಾಂಗ್‌ ಅನ್ಯ ತಂಡಗಳ ಸಂಪರ್ಕದಲ್ಲಿದೆಯಾ? ಎಂಬ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.

ಖದೀಮರ ಗ್ಯಾಂಗ್‌ನ ಕ್ರಿಮಿನಲ್‌ ಹೆಜ್ಜೆಗೆ ಜನಸಾಮಾನ್ಯರು ಕೂಡ ಅಚ್ಚರಿಗೊಂಡಿದ್ದು, ಇಂಥ ಕಿರಾತಕ ಗುಂಪುಗಳಿಗೆ ಬ್ರೇಕ್‌ ಬೀಳಬೇಕು! ಆರೋಪಿಗಳಿಗೆ ಸೂಕ್ತ ಶಿಕ್ಷೆ ವಿಧಿಸಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

Exit mobile version