ಒಲಿಂಪಿಕ್ಸ್ ನಲ್ಲಿ ಭಾರತಕ್ಕೆ ಮೊದಲ ಪದಕ: ವೇಟ್ಲಫ್ಟಿಂಗ್​ನಲ್ಲಿ ಬೆಳ್ಳಿ ಪದಕ ಮುಡಿಗೇರಿಸಿಕೊಂಡ ಮೀರಾ ಬಾಯಿ ಚಾನು

ಜಪಾನ್, ಜು. 24: ಟೋಕಿಯೋ ಒಲಿಂಪಿಕ್ಸ್ 2020ರಲ್ಲಿ ಭಾರತ ದೇಶ ಉತ್ತಮ ಆರಂಭ ಪಡೆದುಕೊಂಡಿದ್ದು, ಚೊಚ್ಚಲ ಪದಕ ಮುಡಿಗೇರಿಸಿಕೊಂಡಿದೆ. 49 ಕೆಜಿ ವಿಭಾಗದ ಮಹಿಳಾ ವೇಟ್ಲಿಫ್ಟಿಂಗ್​ನಲ್ಲಿ ಮೀರಾ ಬಾಯಿ ಚಾನು ಬೆಳ್ಳಿ ಪದಕ ಗೆದ್ದಿದ್ದಾರೆ. ಈ ಮೂಲಕ ಭಾರತ ಟೋಕಿಯೋ ಒಲಿಂಪಿಕ್ಸ್ 2020ರಲ್ಲಿ ಪದಕದ ಬೇಟೆ ಶುರುಮಾಡಿದ್ದು, ಒಲಿಂಪಿಕ್ ಇತಿಹಾಸದಲ್ಲಿ ಭಾರತ ಪರ ವೇಟ್ಲಿಫ್ಟಿಂಗ್​ನಲ್ಲಿ ಪದಕ ಗೆದ್ದ ಎರಡನೇ ಕ್ರೀಡಾಪಟು ಮೀರಾ ಬಾಯಿ ಆಗಿದ್ದಾರೆ.

ಮೊದಲ ಪ್ರಯತ್ನದಲ್ಲೇ ಮೀರಾಬಾಯಿ ಚಾನು ಅವರು ಸ್ನ್ಯಾಚ್‌ ವಿಭಾಗದಲ್ಲಿ 84 ಕೆ.ಜಿ ಭಾರವನ್ನು ಲೀಲಾಜಾಲವಾಗಿ ಎತ್ತುವಲ್ಲಿ ಯಶಸ್ವಿಯಾದರು. ಇದಾದ ಬಳಿಕ 87 ಕೆ.ಜಿ. ವೇಟ್‌ ಲಿಫ್ಟ್‌ ಮಾಡುವ ಸ್ಯಾಚ್‌ ಲಿಫ್ಟ್‌ ವಿಭಾಗದಲ್ಲಿ ಎರಡನೇ ಸ್ಥಾನ ಪಡೆದರು. ಇನ್ನು ಚೀನಾದ ಹ್ಯೂ ಜಿಹೈ 94 ಕೆ.ಜಿ ವೇಟ್‌ಲಿಫ್ಟ್‌ ಮಾಡುವ ಮೂಲಕ ಒಲಿಂಪಿಕ್ಸ್ ದಾಖಲೆ ಬರೆದಿದ್ದಾರೆ.

ಮೀರಾಬಾಯಿ ಸಾಧನೆಗೆ ದೇಶಾದ್ಯಂತ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದ್ದು, ಪ್ರಧಾನಿ ನರೇಂದ್ರ ಮೋದಿ ಟ್ವೀಟ್‌ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.

Exit mobile version