ಭಾರತದ ಅತಿ ಶ್ರೀಮಂತ ಶಾಸಕ ಡಿಕೆ ಶಿವಕುಮಾರ್ ; 20ರ ಪೈಲಿ 12 ಮಂದಿ ಕರ್ನಾಟಕದವರೇ

Bengaluru: ಜುಲೈ 20: ಜನಪ್ರತಿನಿಧಿಗಳನ್ನು ಕೇಂದ್ರೀಕರಿಸಿ ಎಡಿಆರ್ (Indias richest MLA DKShivakumar) ಮತ್ತು ಎನ್ಇಡಬ್ಲ್ಯೂ(NEW) ಪ್ರಕಟಿಸಿರುವ ಸಮಗ್ರ ವರದಿಯಲ್ಲಿ

ದೇಶದಲ್ಲಿರುವ ಶಾಸಕರ ಆಸ್ತಿ, ಸಾಲ, ಇತರೆ ಹಣಕಾಸು ಅಂಶಗಳ ಬಗ್ಗೆ ವಿವರವಾದ ಮಾಹಿತಿ ಅನಾವರಣಗೊಂಡಿದೆ. ಈ ವರದಿಯ ಪ್ರಕಾರ, ಸಚಿವ ಡಿಕೆ ಶಿವಕುಮಾರ್ (D.K Shiva Kumar)

ಅವರು ಭಾರತದ ಅತ್ಯಂತ ಶ್ರೀಮಂತ ಶಾಸಕ ಎಂಬ ಹೆಗ್ಗಳಿಕೆಗೆ (Indias richest MLA DKShivakumar) ಪಾತ್ರರಾಗಿದ್ದಾರೆ.

ಕುತೂಹಲಕಾರಿಯಾಗಿ, ಕರ್ನಾಟಕದಲ್ಲಿ ಗಣನೀಯ ಸಂಖ್ಯೆಯ ಶಾಸಕರು ಸಾಕಷ್ಟು ಶ್ರೀಮಂತರಾಗಿದ್ದಾರೆ. 100 ಕೋಟಿಗೂ ಅಧಿಕ ಆಸ್ತಿ ಹೊಂದಿರುವ ಶಾಸಕರ ಪಟ್ಟಿಯಲ್ಲಿ ಕರ್ನಾಟಕದಿಂದ

32 ಮಂದಿ ಇದ್ದಾರೆ. ಇಡೀ ದೇಶದ ಅಗ್ರ ಮೂರು ಶ್ರೀಮಂತ ಶಾಸಕರು ಕರ್ನಾಟಕದವರಾಗಿದ್ದಾರೆ. ಇನ್ನು ಟಾಪ್‌ 20 ಶ್ರೀಮಂತ ಶಾಸಕರಲ್ಲಿ 12 ಮಂದಿ ಕರ್ನಾಟಕದವರೇ(Karnataka) ಆಗಿದ್ದಾರೆ.

ಚುನಾವಣಾ(Election) ವೇಳೆ ಅಭ್ಯರ್ಥಿಗಳು ಆಯೋಗಕ್ಕೆ ಸಲ್ಲಿಸಿದ ಅಫಿಡವಿಟ್‌ಗಳಲ್ಲಿ ಬಹಿರಂಗಪಡಿಸಿದ ಮಾಹಿತಿಯ ಆಧಾರದ ಮೇಲೆ ADR ಮತ್ತು ಎನ್ಇಡಬ್ಲ್ಯೂ ಈ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಮೂವರು ಕನ್ನಡಿಗ ಶಾಸಕರ ಬಳಿ ಇದೆ ಸಾವಿರ ಕೋಟಿ ರೂಗೂ ಹೆಚ್ಚು ಆಸ್ತಿ

ದೇಶದ ಅತ್ಯಂತ ಶ್ರೀಮಂತ ಶಾಸಕರ ಪಟ್ಟಿಯಲ್ಲಿ ಮೊದಲ ಮೂರು ಸ್ಥಾನಗಳನ್ನು ಡಿಕೆ ಶಿವಕುಮಾರ್, ಕೆಎಚ್ ಪುಟ್ಟಸ್ವಾಮಿಗೌಡ (K.H Putta swamy), ಪ್ರಿಯಕೃಷ್ಣ(Priya Krishna) ಹಂಚಿಕೊಂಡಿದ್ದಾರೆ.

ವಿಶೇಷವೆಂದರೆ ಈ ಬಾರಿ ಎಲ್ಲರನ್ನೂ ಅಚ್ಚರಿಗೆ ದೂಡಿದ್ದು ಪುಟ್ಟಸ್ವಾಮಿಗೌಡ. ಪುಟ್ಟಸ್ವಾಮಿಗೌಡ ಅವರು ಗೌರಿಬಿದನೂರು(Gowri Bidanoor) ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಗೆದ್ದಿದ್ದರು ಒಟ್ಟು

1,267 ಕೋಟಿ ರೂ ಮೌಲ್ಯದ ಆಸ್ತಿ ಅವರ ಬಳಿ ಇದೆ ಎಂದು ಘೋಷಿಸಿಕೊಂಡಿದ್ದಾರೆ. 1,413 ಕೋಟಿ ರೂ ಘೋಷಿತ ಆದಾಯದೊಂದಿಗೆ ಡಿಕೆ ಶಿವಕುಮಾರ್ ಅಗ್ರಸ್ಥಾನ ಪಡೆದಿದ್ದಾರೆ.

ಕಾಂಗ್ರೆಸ್ ಪಕ್ಷದ ಗೋವಿಂದರಾಜನಗರ (Govindaraja Nagar) ಶಾಸಕ ಪ್ರಿಯಾಕೃಷ್ಣ ಅವರ ಘೋಷಿತ ಆಸ್ತಿ 1,156 ಕೋಟಿ ರೂ ಇದೆ.

ದೇಶದ ಟಾಪ್20 ಶ್ರೀಮಂತ ಶಾಸಕರಲ್ಲಿ ಕರ್ನಾಟಕದವರು ಮತ್ತು ಅವರ ಘೋಷಿತ ಆಸ್ತಿಮೌಲ್ಯ
ಡಿಕೆ ಶಿವಕುಮಾರ್, ಕಾಂಗ್ರೆಸ್: 1,413ಕೋಟಿ ರೂ
ಕೆಎಚ್ ಪುಟ್ಟಸ್ವಾಮಿಗೌಡ, ಪಕ್ಷೇತರ: 1,267 ಕೋಟಿ ರೂ
ಪ್ರಿಯಾಕೃಷ್ಣ, ಕಾಂಗ್ರೆಸ್: 1,156 ಕೋಟಿ ರೂ
ಬಿಎಸ್ ಸುರೇಶ, ಕಾಂಗ್ರೆಸ್: 648 ಕೋಟಿ ರೂ
ಎನ್.ಎ. ಹ್ಯಾರಿಸ್, ಕಾಂಗ್ರೆಸ್: 439 ಕೋಟಿ ರೂ
ಎಚ್.ಕೆ. ಸುರೇಶ್, ಬಿಜೆಪಿ: 435 ಕೋಟಿ ರೂ
ಆರ್.ವಿ. ದೇಶಪಾಂಡೆ, ಕಾಂಗ್ರೆಸ್: 363 ಕೋಟಿ ರೂ
ಎಂಆರ್ ಮಂಜುನಾಥ್, ಜೆಡಿಎಸ್: 316 ಕೋಟಿ ರೂ
ಎಸ್.ಎನ್. ಸುಬ್ಬಾರೆಡ್ಡಿ, ಕಾಂಗ್ರೆಸ್: 313 ಕೋಟಿ ರೂ
ಶಾಮನೂರು ಶಿವಶಂಕರಪ್ಪ, ಕಾಂಗ್ರೆಸ್: 312 ಕೋಟಿ ರೂ
ಎಂ ಕೃಷ್ಣಪ್ಪ, ಕಾಂಗ್ರೆಸ್: 296 ಕೋಟಿ ರೂ
ಮುನಿರತ್ನ, ಬಿಜೆಪಿ: 293 ಕೋಟಿ ರೂ

ಅತಿಹೆಚ್ಚು ಬಿಲಿಯನೇರ್ ಶಾಸಕರು ಇರುವ ರಾಜ್ಯಗಳ ಪಟ್ಟಿ ಇಲ್ಲಿದೆ
ಒಟ್ಟು 4001 ಶಾಸಕರ ಘೋಷಿತ ಆಸ್ತಿವಿವರಗಳನ್ನು ಎಡಿಆರ್ ಅವಲೋಕಿಸಿದ್ದು ಒಟ್ಟು 88 ಶಾಸಕರು ನೂರು ಕೋಟಿ ರೂಗೂ ಹೆಚ್ಚು ಮೊತ್ತದ ಆಸ್ತಿಗಳನ್ನು ಹೊಂದಿರುವ ಸಂಗತಿಯನ್ನ

ಬೆಳಕಿಗೆ ತಂದಿದೆ.ಇದರಲ್ಲಿ ವಿಶೇಷ ಏನೆಂದರೆ ಇದರಲ್ಲಿ ಹೆಚ್ಚಿನವರು ಕರ್ನಾಟಕದವರೇ.

ಎಷ್ಟೆಷ್ಟು ಬಿಲಿಯನೇರ್ಗಳು ಯಾವ ಯಾವ ರಾಜ್ಯದಲ್ಲಿ ಇದ್ದಾರೆ, ಇಲ್ಲಿದೆ ಪಟ್ಟಿ:
ಕರ್ನಾಟಕ: 32
ಮಹಾರಾಷ್ಟ್ರ: 12
ಆಂಧ್ರಪ್ರದೇಶ: 10
ಮಧ್ಯಪ್ರದೇಶ: 6
ಗುಜರಾತ್: 5
ತಮಿಳುನಾಡು: 4
ಅರುಣಾಚಲಪ್ರದೇಶ: 4
ರಾಜಸ್ಥಾನ: 3
ಪಂಜಾಬ್: 2
ಹಿಮಾಚಲಪ್ರದೇಶ: 2
ಉತ್ತರಪ್ರದೇಶ: 1
ಮೇಘಾಲಯ: 1
ನಾಗಾಲ್ಯಾಂಡ್: 1
ದೆಹಲಿ: 1
ಹರ್ಯಾಣ: 1
ಛತ್ತೀಸ್ಗಡ: 1
ತೆಲಂಗಾಣ: 1
ಅಸ್ಸಾಂ: 1

ರಶ್ಮಿತಾ ಅನೀಶ್

Exit mobile version