ಕಮರ್ಷಿಯಲ್‌ ಕರೆಂಟ್ ಬಿಲ್ ಶೇ.30ರಷ್ಟು ಹೆಚ್ಚಳ : ಕೈಗಾರಿಕೆಗೆ ಬೀಗ ಹಾಕಿ ಕೀ ಕೊಡುತ್ತೇವೆ ನೀವೇ ನಡೆಸಿ; ಪೀಣ್ಯ ಕೈಗಾರಿಕೆ ಸಂಘದಿಂದ ಸರ್ಕಾರಕ್ಕೆ ಎಚ್ಚರಿಕೆ

Bangalore : ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆ ಒಂದೆಡೆ ಉಚಿತ ವಿದ್ಯುತ್ ಘೋಷಣೆ ಮಾಡಿ ಷರತ್ತುಗಳನ್ನು ವಿಧಿಸಿದೆ ಇನ್ನೊಂದೆಡೆ ಉಚಿತ ವಿದ್ಯುತ್ ಸಿಗುವ (Industries Warning to Government)

ಮುನ್ನವೇ ವಿದ್ಯುತ್ ದರ ಏರಿಕೆಯಿಂದ ಜನತೆ ಬೆಚ್ಚಿ ಬೀಳುವಂತಾಗಿದೆ. ಈ ಹಿಂದೆ 200 ರೂ ಇದ್ದ ವಿದ್ಯುತ್ ಬಿಲ್ ಈಗ ಜೂನ್ ನಲ್ಲಿ 600 ರೂ. ಆಗಿದೆ, 500 ರೂ.ಬರುತ್ತಿದ್ದ ಬಿಲ್ ಈಗ ಜೂನ್ ನಲ್ಲಿ

1,500-1,800 ರೂ.ವರೆಗೆ ಬರುತ್ತಿರುವುದನ್ನು ಕಂಡು ಜನ ಬೆಚ್ಚಿಬಿದ್ದಿದ್ದಾರೆ. ಇದು ಸಾಮಾನ್ಯ ಜನರಿಗೆ ತೊಂದರೆಯಾದರೆ, ವಿದ್ಯುತ್ ಬೆಲೆ ಏರಿಕೆಯಿಂದ ಸಣ್ಣ ಉದ್ಯಮವೂ ಕೂಡ ಆತಂಕಕ್ಕೆ ಒಳಗಾಗಿದೆ.

ಸಣ್ಣ ಕೈಗಾರಿಕೆಗಳು ವಿದ್ಯುತ್ ಬಿಲ್‌ಗಳ ಭೀತಿಯಿಂದ ಬೇಸತ್ತಿದ್ದು, ದೊಡ್ಡ ಮತ್ತು ಸಣ್ಣ ಕೈಗಾರಿಕೆಗಳು ಉದ್ಯಮಕ್ಕೆ ಬೀಗ ಹಾಕಲು ಮತ್ತು ಅದರ ಕಾರ್ಯನಿರ್ವಹಿಸಲು ಕೀಲಿಯನ್ನು ಸರ್ಕಾರಕ್ಕೆ ನೀಡಲು ಮುಂದೆ ಬಂದಿವೆ.

ಏಷ್ಯಾದಲ್ಲಿ ಸುಪ್ರಸಿದ್ದ, ಖ್ಯಾತಿ ಪಡೆದಿರುವ ಬೆಂಗಳೂರಿನ (Bengaluru) ಪೀಣ್ಯ (Peenya) ಕೈಗಾರಿಕೆಯು ಯಂತ್ರೋಪಕರಣಗಳು ಮತ್ತು ಗಾರ್ಮೆಂಟ್ಸ್ನಲ್ಲಿ ಸಣ್ಣ ಪ್ರಮಾಣದ ಕೈಗಾರಿಕೆಗಳಿಗೆ ಹೆಸರುವಾಸಿಯಾಗಿದೆ.

ಇದನ್ನೂ ಓದಿ : ಗೃಹ ಜ್ಯೋತಿ ಯೋಜನೆ ಅರ್ಜಿ ಸಲ್ಲಿಕೆ ದಿನಾಂಕ ಮುಂದೂಡಿಕೆ : ನೋಂದಣಿ ಪ್ರಕ್ರಿಯೆ ಯಾವಾಗದಿಂದ ಪ್ರಾರಂಭ?

ಆದರೆ ಈಗ ಯೂನಿಟ್ (Unit) ಬೆಲೆ ಮತ್ತು ಸ್ಥಿರ ವೆಚ್ಚದ ಹೆಚ್ಚಳದಿಂದಾಗಿ ಉದ್ಯಮದ ಕಾರ್ಯಾಚರಣೆಯಲ್ಲಿ ಭಾರಿ ಸಮಸ್ಯೆಗಳಿವೆ.ಪೀಣ್ಯ ಕೈಗಾರಿಕೆ ವಲಯದಲ್ಲಿ ಪ್ರಾಥಮಿಕ ಉದ್ಯಮದಲ್ಲಿ 12,000 ಸಣ್ಣ ಕೈಗಾರಿಕೆಗಳಿವೆ.

ಬಿಡಿಭಾಗಗಳನ್ನು ತಯಾರಿಸುವ 5,000 ಸಣ್ಣ ಯಂತ್ರೋಪಕರಣಗಳ ಕೈಗಾರಿಕೆಗಳಿವೆ. ಇವೆಲ್ಲವೂ ಪ್ರಸ್ತುತ ಕರೆಂಟ್ ಮೇಲೆ (Industries Warning to Government) ಅವಲಂಬಿತವಾಗಿವೆ.

ಶೇ.30ರಷ್ಟು ಕಮರ್ಷಿಯಲ್‌(Commercial) ಕರೆಂಟ್ ಬಿಲ್ ಹೆಚ್ಚಳವಾಗಿದೆ.ಈ ಮೊದಲು 6.75 ರೂ ಪ್ರತಿ ಯೂನಿಟ್ ಗೆ ಇತ್ತು ಆದರೆ ಇದೀಗ ಪ್ರತಿ ಯೂನಿಟ್ ಬೆಲೆ 8.50 ರೂ. ಹೆಚ್ಚಳ ಮಾಡಿದ್ದಾರೆ.ಶೇ. 40-60ರಷ್ಟು ನಿಗಧಿತ ಶುಲ್ಕವೂ ಹೆಚ್ಚಳವಾಗಿದೆ.

ಸಾಧ್ಯವಾದರೆ ಸಣ್ಣ ಕೈಗಾರಿಕೆಗಳಿಗೆ ಉತ್ತೇಜನ ಕೊಡಿ ಅದರ ಬದಲು ಈ ರೀತಿಯೆಲ್ಲಾ ಕರೆಂಟ್‌ ಶಾಕ್‌ ಕೊಡಬೇಡಿ. 4 ಸಾವಿರಕ್ಕೂ ಅಧಿಕ ಮೆಕಾನಿಕಲ್ ಸಣ್ಣ ಕೈಗಾರಿಕೆಗಳಿಗೆ ಈಗಾಗಲೇ ಆರ್ಥಿಕವಾಗಿ ಸಂಕಷ್ಟ ಎದುರಾಗಿದೆ.

ಈ ಪರಿಸ್ಥಿತಿಯು ಹೀಗೆ ಮುಂದುವರಿದರೆ ಕೈಗಾರಿಕೆ ಬೀಗ ಹಾಕಿ ಅದರ ಕೀಯನ್ನು ಸಹ ನಿಮಗೆ ಕೊಡುತ್ತೇವೆ ನೀವೇ ನಡೆಸಿಕೊಂಡು ಹೋಗಿ ಎಂದು ಪೀಣ್ಯ ಕೈಗಾರಿಕೆ ಸಂಘದ

ಕಡೆಯಿಂದ ರಾಜ್ಯ ಸರ್ಕಾರಕ್ಕೆ (Government) ಎಚ್ಚರಿಕೆ ನೀಡಿದ್ದಾರೆ.

ರಶ್ಮಿತಾ ಅನೀಶ್

Exit mobile version