ಶಿಕ್ಷಣ ಇಲಾಖೆಯ ಹೊಸ ಮಾನದಂಡದ ಪ್ರಕಾರ ಯಾವ ಶಾಲೆಗಳು ಅನಧಿಕೃತ ಗೊತ್ತಾ? ; ಇಲ್ಲಿದೆ ಮಾಹಿತಿ ಓದಿ

education minister

ಬೆಂಗಳೂರು : ಶಿಕ್ಷಣ ಇಲಾಖೆ(Education Department) ಅನಧಿಕೃತ ಶಾಲೆಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದ್ದು, ಅದರ ಭಾಗವಾಗಿ ಕೆಲ ಮಾನದಂಡಗಳನ್ನು ಬಿಡುಗಡೆ ಮಾಡಿದೆ. ಸಾರ್ವಜನಿಕ ಶಿಕ್ಷಣ ಇಲಾಖೆ ನಿಗದಿ ಮಾಡಿರುವ ಮಾನದಂಡಗಳನ್ನು ಅನುಸರಿಸದ ಶಾಲೆಗಳನ್ನು ಮುಚ್ಚಲು ಶಿಕ್ಷಣ ಇಲಾಖೆ ಮುಂದಾಗಿದೆ.


ಇನ್ನು ಶಿಕ್ಷಣ ಇಲಾಖೆ ಅನಧಿಕೃತ ಖಾಸಗಿ ಶಾಲೆಗಳ ತೆರವಿಗಾಗಿ ಆಪರೇಷನ್ ಕ್ಲೀನ್ ಅಭಿಯಾನ ಪಾರ್ಟ್-2 ಶುರು ಮಾಡಿದೆ. ಹೀಗಾಗಿ ಅನಧಿಕೃತ ಶಾಲೆಗಳ ಮಾಹಿತಿ ಸಂಗ್ರಹಕ್ಕೆ ಬಿಇಓ, ಡಿಡಿಪಿಐಗಳಿಗೆ ಸೂಚನೆ ನೀಡಲಾಗಿದೆ. ಶಿಕ್ಷಣ ಇಲಾಖೆ ಬಿಡುಗಡೆ ಮಾಡಿರುವ ಮಾನದಂಡಗಳ ವಿವರ ಇಲ್ಲಿದೆ ನೋಡಿ.

https://youtu.be/oO6xPuat8yI

ಯಾವ ಶಾಲೆಗಳು ಅನಧಿಕೃತ? : ಕರ್ನಾಟಕ ಶಿಕ್ಷಣ ಕಾಯ್ದೆ 1983ರ ಕಲಂ 36, ಆರ್‌ಟಿಇ ಕಾಯ್ದೆ 2009 ಅಡಿಯ ಮಾನ್ಯತೆ ಪಡೆಯದ ಶಾಲೆಗಳು ಅನಧಿಕೃತ ಶಾಲೆಗಳಾಗುತ್ತವೆ. ಶಾಲಾ ಮಾನ್ಯತೆಯನ್ನು 1 ವರ್ಷಕ್ಕಿಂತ ಹೆಚ್ಚು ನವೀಕರಣ ಮಾಡದಿರುವುದು, ಅನುಮತಿ ಪಡೆಯದೇ ಬೇರೆ ಸ್ಥಳಕ್ಕೆ ಸ್ಥಳಾಂತರ ಮಾಡಿದ ಶಾಲೆಗಳು.


ಬೇರೆ ಪಠ್ಯಕ್ರಮದ ಅನುಮತಿ ಪಡೆದ ರಾಜ್ಯ ಪಠ್ಯಕ್ರಮ ಬೋಧನೆ ಮಾಡುವ ಶಾಲೆಗಳು. ಸರ್ಕಾರ ಅನುಮತಿ ನೀಡಿದ ಪಠ್ಯಕ್ರಮ ಬದಲಾಗಿ ಬೇರೆ ಪಠ್ಯ ಬೋಧನೆ ಮಾಡುವ ಶಾಲೆಗಳು, ಶಿಕ್ಷಣ ಇಲಾಖೆಯಿಂದ ನೋಂದಣಿ ಪಡೆಯದ ಉಪಶಾಲೆಗಳು, ಕರ್ನಾಟಕ ಶಿಕ್ಷಣ ಕಾಯ್ದೆ 1983ರ ಕಲಂ 30, 31 ಅಡಿ ನೋಂದಣಿ ಪಡೆಯದ ಶಾಲೆಗಳು.

ಇದನ್ನೂ ಓದಿ : https://vijayatimes.com/health-facts-of-betel-nut/


ಪೂರ್ವಾನುಮತಿ ಇಲ್ಲದೆ ಸ್ಥಳಾಂತರ ಮಾಡಿದ ಶಾಲೆಗಳು, ಮಾಹಿತಿ ನೀಡದೇ ಬೇರೆಯವರಿಗೆ ಹಸ್ತಾಂತರ ಮಾಡಿದ ಶಾಲೆಗಳು
ಹೆಚ್ಚುವರಿ ತರಗತಿಯನ್ನು ಅನುಮತಿ ಪಡೆಯದೇ ಪ್ರಾರಂಭಿಸಿರುವ ಶಾಲೆಗಳು. ಅನುಮತಿ ಪಡೆದ ನಂತರ ಮತ್ತೊಂದು ಮಾಧ್ಯಮದಲ್ಲಿ ಪಠ್ಯ ಬೋಧನೆ ಮಾಡುವುದು, ಶಿಕ್ಷಣ ಇಲಾಖೆಗೆ ನಿಯಮತವಾಗಿ ಮಾಹಿತಿ ನೀಡದ ಶಾಲೆಗಳು.

Exit mobile version