ಮನಮೋಹನ್ ಸಿಂಗ್ ಅದ್ಭುತ ವ್ಯಕ್ತಿಯಾಗಿದ್ದರೂ, UPA ಸರ್ಕಾರದ ನಿರ್ಧಾರಗಳು ವಿಳಂಬವಾಗುತ್ತಿತ್ತು : ನಾರಾಯಣ ಮೂರ್ತಿ

India : ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಅಹಮದಾಬಾದ್ ನಲ್ಲಿ (Ahemdabad) ಯುವ ಉದ್ಯಮಿಗಳು

ಮತ್ತು ವಿದ್ಯಾರ್ಥಿಗಳೊಂದಿಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಇನ್ಫೋಸಿಸ್‌ನ(Infosys) ಸಹ-ಸಂಸ್ಥಾಪಕ ಎನ್‌.ಆರ್ ನಾರಾಯಣ ಮೂರ್ತಿಯವರು (NR Naryana Murthy),

ಮಾಜಿ ಪ್ರಧಾನಮಂತ್ರಿ ಡಾ. ಮನಮೋಹನ್‌ ಸಿಂಗ್‌(Dr Manmohan Singh) ಅವರ ಬುದ್ದಿವಂತಿಕೆ ಹಾಗೂ ಕಾರ್ಯವೈಖರಿಯನ್ನು ಹೊಗಳಿದರು. ಆದರೆ, ಯುಪಿಎ ಸರ್ಕಾರ ಸೂಕ್ತ ಸಮಯದಲ್ಲಿ ಗಟ್ಟಿ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ವಿಫಲವಾಗಿತ್ತು.

ಹಾಗಾಗಿ ಡಾ. ಸಿಂಗ್‌ ಅವಧಿಯಲ್ಲಿ ದೇಶದ ಆರ್ಥಿಕತೆ ಸಂಪೂರ್ಣವಾಗಿ ಸ್ಥಗಿತಗೊಂಡಿತ್ತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಮಾತು ಮುಂದುವರಿಸಿದ ಅವರು,

“ಇಂದಿನ ದೇಶದ ಆರ್ಥಿಕತೆಗೂ, ಹಿಂದಿನ ಆರ್ಥಿಕತೆಗೂ ಹೋಲಿಕೆ ಮಾಡುವ ಸಂದರ್ಭದಲ್ಲಿ ನಿರ್ಧಾರ ತೆಗೆದುಕೊಳ್ಳುವಲ್ಲಿ ವಿಳಂಬವಾಗಿರುವುದರಿಂದ ದೇಶದ ಆರ್ಥಿಕತೆ ಬಳಲಿ ಹೋಗಿದೆ.

ಇದನ್ನೂ ಓದಿ : https://vijayatimes.com/bjp-mp-cleaning-toilet/

ದುರದೃಷ್ಟವಶಾತ್, ನಂತರ ಏನಾಯ್ತು ಎಂದು ನನಗೆ ಗೊತ್ತಿಲ್ಲ. ಮನಮೋಹನ್ ಸಿಂಗ್ ಒಬ್ಬ ಅದ್ವಿತೀಯ ಮನುಷ್ಯ, ಅವರ ಬಗ್ಗೆ ನನಗೆ ಬಹಳ ಗೌರವವಿದೆ. ಆದರೆ ದೇಶದ ಆರ್ಥಿಕತೆ ಕುಸಿದು ನಿಂತು ಹೋಗಿತ್ತು. ನಿರ್ಧಾರಗಳನ್ನು ಕ್ಷಿಪ್ರವಾಗಿ ತೆಗೆದುಕೊಳ್ಳುತ್ತಿರಲಿಲ್ಲ.

ಪ್ರತಿಯೊಂದು ವಿಳಂಬವಾಗುತ್ತಿದ್ದವು. ನಾನು 2008 ರಿಂದ 2012 ರವರೆಗೆ ಲಂಡನ್ ನ ಹೆಚ್ ಎಸ್ ಬಿಸಿ ಮಂಡಳಿಯಲ್ಲಿದ್ದೆ.

ಆರಂಭದ ಕೆಲ ವರ್ಷಗಳಲ್ಲಿ ಮಂಡಳಿಯಲ್ಲಿ ಚೀನಾದ ಹೆಸರು ಎರಡು-ಮೂರು ಬಾರಿ ಪ್ರಸ್ತಾಪವಾಗುತ್ತಿದ್ದರೆ, ಭಾರತದ ಹೆಸರು ಒಂದು ಬಾರಿ ಮಾತ್ರ ಪ್ರಸ್ತಾಪವಾಗಿತ್ತು ಎಂದು ಮೂರ್ತಿ ಹೇಳಿದ್ದಾರೆ.

ಆದರೆ, 1991ರ ಆರ್ಥಿಕ ಸುಧಾರಣೆಯ ಶ್ರೇಯಸ್ಸನ್ನು ನಾರಾಯಣ ಮೂರ್ತಿಯವರು ಮನಮೋಹನ್ ಸಿಂಗ್ ಅವರಿಗೆ ನೀಡಿದರು.

ನಂತರ ಮೇಕ್ ಇನ್ ಇಂಡಿಯಾ (Make In India) ಮತ್ತು ಸ್ಟಾರ್ಟಪ್ ಇಂಡಿಯಾ ಬಗ್ಗೆ ಮಾತನಾಡಿದ ನಾರಾಯಣ ಮೂರ್ತಿಯವರು,

“ಹೆಚ್ಚಿನ ಪಾಶ್ಚಿಮಾತ್ಯರು ಭಾರತವನ್ನು ಕೀಳಾಗಿ ಕಾಣುತ್ತಿದ್ದ ಕಾಲವಿತ್ತು, ಆದರೆ ಇಂದು ದೇಶದ ಬಗ್ಗೆ ಒಂದು ನಿರ್ದಿಷ್ಟ ಮಟ್ಟದ ಗೌರವವಿದೆ.

ಅದು ದೇಶ ಈಗ ಐದನೇ ಅತಿದೊಡ್ಡ ಆರ್ಥಿಕತೆಯಾಗಿದೆ. ಮನಮೋಹನ್ ಸಿಂಗ್ ಹಣಕಾಸು ಸಚಿವರಾಗಿದ್ದಾಗ 1991ರ ಆರ್ಥಿಕ

ಸುಧಾರಣೆಗಳು ಮತ್ತು ಪ್ರಸ್ತುತ ಭಾರತೀಯ ಜನತಾ ಪಕ್ಷದ ನೇತೃತ್ವದ ಎನ್‌ಡಿಎ ಸರ್ಕಾರದ ‘ಮೇಕ್ ಇನ್ ಇಂಡಿಯಾ’ ಮತ್ತು ‘ಸ್ಟಾರ್ಟಪ್ ಇಂಡಿಯಾ’ ಯೋಜನೆಗಳು ದೇಶವನ್ನು ಮುನ್ನಡೆಸಲು ಸಹಾಯ ಮಾಡಿದೆ” ಎಂದು ಹೇಳಿದರು.


ಇನ್ನು, ಭವಿಷ್ಯದಲ್ಲಿ ನೀವು ಭಾರತವನ್ನು ಯಾವ ಮಟ್ಟದಲ್ಲಿ ನೋಡುತ್ತೀರಿ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, “ಜನರು ಬೇರೆ ಯಾವುದೇ ದೇಶದ ಹೆಸರನ್ನು,

ವಿಶೇಷವಾಗಿ ಚೀನಾವನ್ನು ಉಲ್ಲೇಖಿಸಿದಾಗ ಭಾರತದ ಹೆಸರನ್ನು ನಮೂದಿಸುವಂತೆ ಮಾಡುವುದು ಯುವ ಪೀಳಿಗೆಯ ಜವಾಬ್ದಾರಿಯಾಗಿದೆ. ಯುವ ಪೀಳಿಗೆಗೆ ಅದು ಸಾಧ್ಯವಾಗುತ್ತದೆ” ಎಂಬ ವಿಶ್ವಾಸವನ್ನು ಹೊರಹಾಕಿದರು.

https://youtu.be/iPvRLTlmve8


ಚೀನಾದ(China) ಆರ್ಥಿಕತೆಯು ಭಾರತಕ್ಕಿಂತ 6 ಪಟ್ಟು ದೊಡ್ಡದಾಗಿದೆ ಎಂದು ಮೂರ್ತಿ ಹೇಳಿದರು. 1978 ಮತ್ತು 2022ರ ನಡುವಿನ ಈ 44 ವರ್ಷಗಳಲ್ಲಿ, ಚೀನಾವು ಭಾರತಕ್ಕಿಂತ ಹೆಚ್ಚಿನ ಸಾಧನೆ ಮಾಡಿದೆ.

ನೀವು ಕಷ್ಟಪಟ್ಟು ಕೆಲಸ ಮಾಡಿದರೆ ಇಂದು ಚೀನಾಕ್ಕೆ ಸಿಗುವ ಗೌರವ ಭಾರತಕ್ಕೂ ಸಿಗುತ್ತದೆ ಎಂದು ಯುವ ಜನಾಂಗಕ್ಕೆ ನಾರಾಯಣ ಮೂರ್ತಿ ಕಿವಿಮಾತು ಹೇಳಿದರು.
Exit mobile version