ಅಸ್ಸಾಂನಲ್ಲಿ ತೀವ್ರತೆಯ ಭೂಕಂಪ

ಗುವಾಹಟಿ,ಜೂ.19: ಶನಿವಾರ ಮುಂಜಾನೆ ಅಸ್ಸಾಂನಲ್ಲಿ 4.2 ತೀವ್ರತೆಯ ಭೂಕಂಪನ ಸಂಭವಿಸಿದ್ದು ಕಳೆದ 24 ಗಂಟೆಯಲ್ಲಿ ಈಶಾನ್ಯ ಭಾಗದಲ್ಲಿ  ಐದು ಬಾರಿ ಭೂಮಿ ಕಂಪಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶುಕ್ರವಾರ ತಡರಾತ್ರಿಯೇ ಸೋನಿತ್‌ಪುರ ಜಿಲ್ಲೆಯ ತೇಜಪುರದಲ್ಲಿ ಭೂಕಂಪ  ಸಂಭವಿಸಿದ್ದು 30 ಕಿ.ಲೋ ಮೀಟರ್‌ ಆಳದ ಕೇಂದ್ರ ಬಿಂದು ಪತ್ತೆಯಾಗಿದೆ. ಈ ಸಮಯದಲ್ಲಿ ಯಾವುದೇ ರೀತಿಯ ಸಾವು ನೋವು ಸಂಭವಿಸಿಲ್ಲ ಎಂದು ರಾಷ್ಟೀಯ ಭೂಕಂಪನಶಾಸ್ರವು (ಎನ್‌ಸಿಎಸ್‌) ಮಾಹಿತಿ ನೀಡಿದೆ. ಸೋನಿತ್‌ಪುರ ಜಿಲ್ಲೆಯಲ್ಲೆ ಶುಕ್ರವಾರ ಎರಡು ಬಾರಿ ಭೂಮಿ ಕಂಪಿಸಿದ್ದು ಇದರಲ್ಲಿ ಒಂದು ಭೂಕಂಪನ ತೀವ್ರತೆಯು 4.1ರಷ್ಟಿತ್ತು.

ಮಣಿಪುರದ ಚಾಂದೇಲ್‌ ಜಿಲ್ಲೆಯಲ್ಲಿ ಶುಕ್ರವಾರ ಭೂಮಿ ನಡುಗಿದೆ. ಹಾಗೂ ಮೇಘಲಯದ ಪಶ್ಚಿಮ ಖಾಸಿ ಹಿಲ್‌ ಜಿಲ್ಲೆಯಲ್ಲಿ ಮುಂಜಾನೆ 4.20ರ ವೇಳೆಯಲ್ಲಿ 2.6 ತೀವ್ರತೆಯ ಭೂಕಂಪನ ಸಂಭವಿಸಿದೆ.

Exit mobile version