ಅಂತರ್ಜಾತಿ ವಿವಾಹ : ಯುವತಿ ಮನೆಯವರಿಂದ ಯುವಕನ ಹತ್ಯೆ ಮಾಡಲಾಗಿದೆ ಎಂಬ ಶಂಕೆ!

Love marriage

ಮೇ 4, ಬುಧವಾರದಂದು ಹೈದರಾಬಾದ್‌ನ(Hyderabad) ಸರೂರ್‌ನಗರ(Saroornagar) ತಹಸೀಲ್ದಾರ್(Tahasildar) ಕಚೇರಿಯ ಮುಂಭಾಗದ ರಸ್ತೆಯಲ್ಲಿ ಹೋಗುತ್ತಿದ್ದ ವ್ಯಕ್ತಿಯನ್ನು ಬೈಕ್‌ನಲ್ಲಿ ಬಂದ ದುಷ್ಕರ್ಮಿಯೊಬ್ಬ ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲ ಶಂಕಿತರನ್ನು ಈಗಾಗಲೇ ಪೊಲೀಸರು ಬಂಧಿಸಿದ್ದಾರೆ. ಅಷ್ಟಕ್ಕೂ ಯುವಕನ ಮೇಲೆ ದುಷ್ಕರ್ಮಿಗಳು ಹತ್ಯೆ ಮಾಡಲು ಕಾರಣ ಅಂತರ್ಜಾತಿ ವಿವಾಹ! ಹತ್ಯೆಯಾದ ನಾಗರಾಜ್ ಹಿಂದೂ ಯುವಕ ಮತ್ತು ಸೈಯದ್ ಸುಲ್ತಾನನ್ ಮುಸ್ಲಿಂ ಯುವತಿಯಾಗಿದ್ದು, ಈ ಘಟನೆಗೆ ಮುಖ್ಯ ಕಾರಣವಾಗಿದೆ. ಬುಧವಾರ ರಾತ್ರಿ 9 ಗಂಟೆ ಸುಮಾರಿಗೆ ಸರೂರನಗರ ತಹಸೀಲ್ದಾರ್ ಕಚೇರಿಯ ಬಳಿ ಬೈಕ್‌ನಲ್ಲಿ ಬಂದ ಅಪರಿಚಿತ ವ್ಯಕ್ತಿಯೊಬ್ಬ ನಾಗರಾಜನನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ. ದಾಳಿಕೋರ ಸ್ಥಳದಿಂದ ಕೂಡಲೇ ಪರಾರಿಯಾಗಿದ್ದಾನೆ.

ದಾರಿಯಲ್ಲಿ ಹೋಗುತ್ತಿದ್ದ ಅನೇಕ ಮಂದಿ ಈ ಘಟನೆಯನ್ನು ತಮ್ಮ ಫೋನ್‌ಗಳಲ್ಲಿ ರೆಕಾರ್ಡ್ ಮಾಡಿದ್ದಾರೆ ಮತ್ತು ಕೆಲವರು ಮೃತದೇಹದ ಚಿತ್ರಗಳನ್ನು ಸಹ ಕ್ಲಿಕ್ ಮಾಡಿ ಸ್ಥಳೀಯ ಪೊಲೀಸರಿಗೆ ದಾಖಲೆಯಾಗಿ ಕೊಟ್ಟಿದ್ದಾರೆ. ಹತ್ಯೆ ಕುರಿತು ನಾಗರಾಜ್ ಸಂಬಂಧಿಕರು ಪ್ರತಿಭಟನೆ ನಡೆಸಿದ ನಂತರ ಈ ಘಟನೆಯು ಆ ಪ್ರದೇಶದಲ್ಲಿ ತೀವ್ರ ಉದ್ವಿಗ್ನತೆಯನ್ನು ಸೃಷ್ಟಿಸಿದೆ ಮತ್ತು ಕೊಲೆಯ ಹಿಂದೆ ಆತನ ಪತ್ನಿಯ ಕುಟುಂಬದವರ ಕೈವಾಡವಿದೆ ಎಂದು ಆರೋಪಿಸಿದ್ದಾರೆ. ನಾಗರಾಜ್ ಎರಡು ತಿಂಗಳ ಹಿಂದೆ ಜನವರಿ 31 ರಂದು 23 ವರ್ಷದ ಸೈಯದ್ ಅಶ್ರಿನ್ ಸುಲ್ತಾನಾ (ಅ. ಪಲ್ಲವಿ) ಅವರನ್ನು ವಿವಾಹವಾಗಿದ್ದರು.

ಕಾಲೇಜು ದಿನಗಳಿಂದಲೂ ಇವರಿಬ್ಬರೂ ಒಬ್ಬರನ್ನೊಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಎರಡು ತಿಂಗಳ ಹಿಂದೆ ಹಳೆನಗರದ ಆರ್ಯ ಸಮಾಜ ಮಂದಿರದಲ್ಲಿ ಕುಟುಂಬಗಳ ವಿರೋಧದ ಮಧ್ಯೆ ವಿವಾಹವಾಗಿದ್ದರು. ಬೇರೆ ಬೇರೆ ಧರ್ಮದವರಾಗಿದ್ದರಿಂದ ಆಕೆಯ ಮನೆಯವರು ದ್ವೇಷದಿಂದ ಕೊಂದಿದ್ದಾರೆ ಎಂದು ನಾಗರಾಜನ ಸಂಬಂಧಿಕರೊಬ್ಬರು ಆರೋಪಿಸಿದ್ದಾರೆ. ಬಿಲ್ಲಾಪುರಂ ನಾಗರಾಜು (25) ಸಿಕಂದರಾಬಾದ್‌ನ ಮರ್ರೆಡ್‌ಪಲ್ಲಿ ನಿವಾಸಿಯಾಗಿದ್ದು, ಓಲ್ಡ್ ಸಿಟಿಯ ಮಲಕ್‌ಪೇಟ್‌ನಲ್ಲಿರುವ ಜನಪ್ರಿಯ ಕಾರ್ ಶೋ ರೂಂನಲ್ಲಿ ಸೇಲ್ಸ್‌ಮ್ಯಾನ್ ಆಗಿ ಕೆಲಸ ನಿರ್ವಹಿಸುತ್ತಿದ್ದ.

ತೆಲಂಗಾಣ ಬಿಜೆಪಿ ಶಾಸಕ ರಾಜಾ ಸಿಂಗ್ ಹತ್ಯೆಯ ಯೋಜನೆ ಮತ್ತು ಕಾರ್ಯಗತಗೊಳಿಸುವಿಕೆಯಲ್ಲಿ ಭಾಗಿಯಾಗಿರುವ ಪ್ರತಿಯೊಬ್ಬರನ್ನು ಬಂಧಿಸಬೇಕು ಎಂದು ಕರೆ ನೀಡುವ ಮೂಲಕ ಪ್ರತಿಭಟನೆಗೆ ಚಾಲನೆ ನೀಡಿದರು. ಇದು ಕುಟುಂಬ ಸದಸ್ಯರೇ ಅಥವಾ ಕೆಲವು ಧಾರ್ಮಿಕ ಗುಂಪುಗಳು ಕುಟುಂಬಕ್ಕೆ ಸಲಹೆ ನೀಡಿವೆಯೇ? ಕೆಲವು ಗುಂಪು ಅವರಿಗೆ ಆರ್ಥಿಕ ಸಹಾಯದ ಭರವಸೆ ನೀಡಿದೆಯೇ? ಈ ಕೊಲೆಯ ಪೂರ್ಣ ಪ್ರಮಾಣದ ತನಿಖೆಯಾಗಬೇಕು ಎಂದು ಆಗ್ರಹಿಸಿದರು.

ಈ ಕುರಿತು ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನಾವಾಲಾ ಟ್ವಿಟರ್‌ನಲ್ಲಿ ಪ್ರತಿಕ್ರಿಯೆ ನೀಡಿ, ಇದೇ ಹಿಂದೂ ಪತಿಯ ಕುಟುಂಬದವರು ಮುಸ್ಲಿಂ ಯುವತಿಯನ್ನು ಕೊಂದಿದ್ದರೆ ಏನಾಗಬಹುದು ಎಂಬುದು ನಮಗೆ ತಿಳಿದಿದೆ! ಕಾಂಗ್ರೆಸ್, ಎಎಪಿ, ಟಿಎಂಸಿ, ಎಸ್‌ಪಿ ಇಸ್ಲಾಮೋಫೋಬಿಯಾವನ್ನು ಆರೋಪಿಸಿ ವಿಶ್ವಸಂಸ್ಥೆಯನ್ನು ತಲುಪುತ್ತಿದ್ದವು. ಆದ್ರೆ ಇದು ಹಾಗೆ ಆಗೋದಿಲ್ಲ ಕಾರಣ ಹಿಂದೂ ಹತ್ಯೆ ಮತ್ತು ಹೈದರಾಬಾದ್‌ನಲ್ಲಿ ಅಪರಾಧ ಜಾತ್ಯತೀತವೇ? ಎಂದು ಹೇಳಿದ್ದಾರೆ.


ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿ ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಇವರಿಬ್ಬರ ಪ್ರೇಮ ವಿವಾಹವೇ ಹತ್ಯೆಗೆ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ ಎಂದು ಸಹಾಯಕ ಪೊಲೀಸ್ ಆಯುಕ್ತ ಶ್ರೀಧರ್ ರೆಡ್ಡಿ ಮಾಹಿತಿ ನೀಡಿದ್ದಾರೆ.

Exit mobile version