Bengaluru: ವಿಧಾನಸಭಾ ಚುನಾವಣೆಗೂ ಮುನ್ನ ಸುದ್ದಿ ಮಾಡಿದ್ದ ಚಿಲುಮೆ (investigation on Tushar Girinath) ಮತದಾರರ ಪ್ರಕರಣದ ಉರುಳು ಈಗ ಬಿಬಿಎಂಪಿ ಆಯುಕ್ತ ತುಷಾರ್
ಗಿರಿನಾಥ್ ಅವರಿಗೆ ಸುತ್ತಿಕೊಂಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಆಯುಕ್ತ ತುಷಾರ್ ಗಿರಿನಾಥ್ (Tushar Girinath) ವಿರುದ್ಧ
ತನಿಖೆಗೆ ರಾಜ್ಯ ಸರ್ಕಾರ ಮುಂದಾಗಿದೆ. ತನಿಖೆ ನಡೆಸಿ ವರದಿ ನೀಡುವಂತೆ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅವರು ಮುಖ್ಯ ಚುನಾವಣಾಧಿಕಾರಿಗಳಿಗೆ ಸೂಚಿಸಿದ್ದಾರೆ. ಸಿಎಂ
ನಿರ್ದೇಶನದ ಮೇರೆಗೆ ತನಿಖೆಗೆ (investigation on Tushar Girinath) ಆದೇಶಿಸಲಾಗಿದೆ.
ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ (Vanditha Sharma) ಅವರು, ಮಾಜಿ ವಿಧಾನ ಪರಿಷತ್ ಸದಸ್ಯ ಹಾಗೂ ಕಾಂಗ್ರೆಸ್ ಮುಖಂಡ ರಮೇಶ್ ಬಾಬು ಅವರು ಬರೆದಿರುವ
ಪತ್ರದ ಆಧಾರದ ಮೇಲೆ ಚಿಲುಮೆ ಪ್ರಕರಣದಲ್ಲಿ ಬಿಬಿಎಂಪಿ (BBMP) ಆಯುಕ್ತ ತುಷಾರ್ ಗಿರಿನಾಥ್ ವಿರುದ್ಧ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಮುಖ್ಯ ಚುನಾವಣಾಧಿಕಾರಿಗಳಿಗೆ ಸೂಚಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿರ್ದೇಶನದ ಮೇರೆಗೆ ತನಿಖೆಗೆ ಆದೇಶಿಸಲಾಗಿದೆ ಎಂದು ತಿಳಿದುಬಂದಿದೆ.
ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಅವರು ಮತದಾರರ ವೈಯಕ್ತಿಕ ವಿವರಗಳನ್ನು ಸಂಗ್ರಹಿಸಲು ಚಿಲುಮೆ ಎಂಬ ಖಾಸಗಿ ಕಂಪನಿಗೆ ಅನುಮತಿ ನೀಡಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ
(Siddaramaiah) ಅವರಿಗೆ ಬರೆದ ಪತ್ರದಲ್ಲಿ ರಮೇಶ್ ಬಾಬು ಅವರು ಆರೋಪಿಸಿದ್ದರು. ಇದು ಬೆಂಗಳೂರಿನಲ್ಲಿ 4 ರಿಂದ 5 ಕಾಂಗ್ರೆಸ್ ಅಭ್ಯರ್ಥಿಗಳ ಸೋಲಿಗೆ ಕಾರಣವಾಗಿದ್ದು, ಜಿಲ್ಲಾ
ಚುನಾವಣಾಧಿಕಾರಿಯೂ ಆಗಿರುವ ಬಿಬಿಎಂಪಿ ಆಯುಕ್ತರು ಕರ್ತವ್ಯ ಲೋಪ ಎಸಗಿರುವ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಪತ್ರದಲ್ಲಿ ಒತ್ತಾಯಿಸಲಾಗಿದೆ.
ಸಿಎಂ ಸಿದ್ದರಾಮಯ್ಯ ಅವರು ಕಾಂಗ್ರೆಸ್ (Congress) ನಾಯಕ ನೀಡಿರುವ ದೂರು ಆಧರಿಸಿ ಈ ಬಗ್ಗೆ ಕೂಲಂಕುಷವಾಗಿ ತನಿಖೆ ನಡೆಸಿ ವರದಿ ನೀಡುವಂತೆ ಮುಖ್ಯ ಕಾರ್ಯದರ್ಶಿಗಳಿಗೆ ಸೂಚಿಸಿದ್ದಾರೆ.
ತನಿಖೆಗೆ ಆದೇಶಿರುವ ಸುದ್ದಿ ಈಗ ಬೆಳಕಿಗೆ ಬಂದಿದ್ದು, ಸಿಎಂ ನಿರ್ದೇಶನಕ್ಕೆ ಬದ್ಧರಾಗಿ, ಆಗಸ್ಟ್ 14 ರಂದು ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅವರು ಕರ್ನಾಟಕ (Karnataka) ಮುಖ್ಯ
ಚುನಾವಣಾಧಿಕಾರಿಗೆ ಈ ಬಗ್ಗೆ ತನಿಖೆ ನಡೆಸುವಂತೆ ಪತ್ರ ಬರೆದಿದ್ದಾರೆ.
ಚಿಲುಮೆ ಪ್ರಕರಣ:
ಬೆಂಗಳೂರಿನ (Bengaluru) ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ (BJP) ಸರ್ಕಾರವೂ ಮತದಾರರ ವೈಯಕ್ತಿಕ ವಿವರಗಳನ್ನು ಸಂಗ್ರಹಿಸಲು ಚಿಲುಮೆ ಎಂಬ ಎನ್ಜಿಒಗೆ (NGO) ಅವಕಾಶ
ನೀಡಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ.ಕೆ ಶಿವಕುಮಾರ್ (D.K Shivakumar) ಆರೋಪಿಸಿದ್ದರು. ಖಾಸಗಿ ಸಂಸ್ಥೆಗೆ ಬಿಜೆಪಿ ಅಭ್ಯರ್ಥಿಗಳು ಸಹಾಯ ಮಾಡಲು
ಮತದಾರರ ಅಂಕಿ ಅಂಶಗಳನ್ನು ಅಕ್ರಮವಾಗಿ ಸಂಗ್ರಹಿಸಲು ಅಧಿಕಾರಿಗಳು ಅನುಮತಿ ನೀಡಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿತ್ತು.
ಚಿಲುಮೆ ಸಂಸ್ಥೆಯ ಮೇಲೆ ಮತದಾರರಲ್ಲಿ ಬೂತ್ (Booth) ಮಟ್ಟದ ಅಧಿಕಾರಿಗಳ (ಬಿಎಲ್ಒ) ನಕಲಿ ಮತದಾರರ ಗುರುತಿನ ಚೀಟಿ ಸೃಷ್ಟಿಸಿ ಜಾಗೃತಿ ಮೂಡಿಸುವ ನೆಪದಲ್ಲಿ ಮಾಹಿತಿ ಸಂಗ್ರಹಿಸುತ್ತಿದ್ದ
ಆರೋಪವಿತ್ತು. ಈ ಬಗ್ಗೆ ಹಲಸೂರು (Halsuru) ಗೇಟ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಚಿಲುಮೆ ಮುಖಂಡ ರವಿಕುಮಾರ್ ಕೃಷ್ಣಪ್ಪ (Ravikumar Krishnappa) ಸೇರಿ ಹಲವರನ್ನು ಬಂಧಿಸಿದ್ದರು.
ಇದನ್ನು ಓದಿ: ಕಣ್ಣಿನ ತೊಂದರೆಯಿಂದ ಬಳಲುತ್ತಿರುವಿರಾ? ಹಾಗಾದ್ರೆ ಕಣ್ಣಿನ ಆರೋಗ್ಯಕ್ಕೆ ಈ ಆಹಾರಗಳನ್ನು ಸೇವಿಸಿ
- ಭವ್ಯಶ್ರೀ ಆರ್.ಜೆ