ಇರಾನ್‌ನ ಹಿಜಾಬ್ ವಿರೋಧಿ ಪ್ರತಿಭಟನೆಯಲ್ಲಿ 75 ಸಾವು ; ಮೊಳಗಿತು  ‘ಸರ್ವಾಧಿಕಾರಿಗೆ ಸಾವು’ ಘೋಷಣೆ

Tehran: 22 ವರ್ಷದ ಮಹಾಸಾ ಅಮಿನಿಯ (Mahasa Amini) ಸಾವಿನ ನಂತರ ಮಧ್ಯಪ್ರಾಚ್ಯ ದೇಶ ಇರಾನ್‌ನಾದ್ಯಂತ (Iran)10 ದಿನಗಳಿಂದ ಪ್ರತಿಭಟನೆಗಳು ನಡೆಯುತ್ತಿದ್ದು,

ಭದ್ರತಾ ಪಡೆಗಳೊಂದಿಗಿನ ಘರ್ಷಣೆಯಲ್ಲಿ ಸುಮಾರು 75 ಕ್ಕೂ ಹೆಚ್ಚು  ಮಹಿಳಾ ಪ್ರತಿಭಟನಾಕಾರರು (Protest) ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ಇನ್ನೊಂದೆಡೆ ರಾಜಧಾನಿ ಟೆಹ್ರಾನ್‌ನಲ್ಲಿ ಜನಸಮೂಹವು ‘ಸರ್ವಾಧಿಕಾರಿಗೆ ಮರಣ’ ಎಂದು ಘೋಷಣೆ ಕೂಗಿ, ಇರಾನ್‌ನ (Iran anti-hijab protest) ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಮೂರು ದಶಕಗಳ ಆಡಳಿತವನ್ನು ಕೊನೆಗೊಳಿಸುವಂತೆ  ಕರೆ ನೀಡಿದ್ದಾರೆ.

ಮಹಾಸಾ ಅಮಿನಿಯ ಸಾವಿನ ನಂತರ ನಡೆಯುತ್ತಿರುವ ಪ್ರತಿಭಟನೆ ಇರಾನಿನ ಅನೇಕ ನಗರಗಳು, ಪಟ್ಟಣಗಳು ​​ಮತ್ತು ಹಳ್ಳಿಗಳಲ್ಲಿ ಹರಡಿದೆ.

https://vijayatimes.com/category/health-tips/

ಸೆಪ್ಟೆಂಬರ್ 17ರಂದು ಪ್ರತಿಭಟನೆ ಪ್ರಾರಂಭವಾದಾಗಿನಿಂದ ಕನಿಷ್ಠ 41 ಪ್ರತಿಭಟನಾಕಾರರು (Iran anti-hijab protest) ಮತ್ತು ಪೊಲೀಸರು ಸಾವನ್ನಪ್ಪಿದ್ದು, 1,200ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ಬಂಧಿಸಲಾಗಿದೆ ಎಂದು ಇರಾನ್‌ನ  ಸ್ಥಳೀಯ ಮಾದ್ಯಮಗಳು  ವರದಿ ಮಾಡಿದೆ.

ಇನ್ನೊಂದೆಡೆ ಇರಾನ್ ಸರ್ಕಾರವು ಇತ್ತೀಚಿನ ಪ್ರತಿಭಟನೆಗಳನ್ನು “ವಿದೇಶಿ ಕಥಾವಸ್ತು” ಎಂದು ತಳ್ಳಿಹಾಕಿದ್ದು, ಟೆಹ್ರಾನ್ ಮತ್ತು ಇತರ ನಗರಗಳಲ್ಲಿ ಸರ್ಕಾರದ ಪರ ಮೆರವಣಿಗೆಗಳು  ಕೂಡಾ ನಡೆದಿವೆ.

https://vijayatimes.com/araga-jnanendra-statement/

ಈ ವೇಳೆ  “ಅಮೆರಿಕನ್ ಕೂಲಿ ಸೈನಿಕರು ಧರ್ಮದ ವಿರುದ್ಧ ಹೋರಾಡುತ್ತಿದ್ದಾರೆ” ಎಂದು ಘೋಷಣೆ ಕೂಗಿದ್ದಾರೆ.

ಇನ್ನು ಭದ್ರತಾ ಪಡೆಗಳು ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸುವುದು, ಮಹಿಳೆಯರು ಧೈರ್ಯದಿಂದ ತಮ್ಮ ಕೂದಲನ್ನು ಕತ್ತರಿಸುವುದು, ಹಿಜಾಬ್‌ಗಳನ್ನು ಸುಡುವ  ವಿಡಿಯೋಗಳು ಇದೀಗ ವಿಶ್ವದಾದ್ಯಂತ  ವೈರಲ್‌ಆಗಿವೆ.

ಅದೇ ರೀತಿ ಇರಾನ್‌ನ ಪ್ಯಾರಾಮಿಲಿಟರಿ ರೆವಲ್ಯೂಷನರಿ ಗಾರ್ಡ್‌ನೊಂದಿಗೆ ಮೋಟಾರ್‌ಸೈಕಲ್ ಸವಾರಿ ಸ್ವಯಂಸೇವಕರು ಸೇರಿದಂತೆ ಭದ್ರತಾ ಪಡೆಗಳು ಶಾಂತಿಯುತ ಪ್ರದರ್ಶನಕಾರರ ಮೇಲೆ ದಾಳಿ ನಡೆಸುತ್ತಿರುವ ವಿಡಿಯೋಗಳು ಕೂಡಾ ವೈರಲ್‌ಆಗಿವೆ.

-ಮಹೇಶ್.ಪಿ.ಎಚ್

Exit mobile version