ಮತ್ಸ್ಯ ಕನ್ಯೆಯರು ನಿಜವಾ? ಈ ಬಗ್ಗೆ ಅಸಲಿ ಸಂಗತಿ ಇಲ್ಲಿದೆ ಓದಿ

mermaid

ನಾವು ಚಿಕ್ಕವರಿದ್ದಾಗ ಮತ್ಸ್ಯಕನ್ಯೆ(Mermaid), ನಾಗ ಕನ್ಯೆಯರ ಬಗೆಗಿನ ಕಥೆಗಳನ್ನು ಕೇಳಿಯೇ ಇರುತ್ತೇವೆ. ಇಂತಹ ವಿಚಿತ್ರ ಜೀವಿಗಳ ಬಗ್ಗೆ ಚಿಕ್ಕ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೂ ಬಹಳ ಕುತೂಹಲವಿರುತ್ತದೆ. ಹಾಗಾದರೆ ಮತ್ಸ್ಯಕನ್ಯೆಯರು ನಿಜವಾಗಿಯೂ ಇದ್ದಾರೆಯೇ, ಅವರನ್ನು ಯಾರಾದರೂ ನಿಜವಾಗಿ ನೋಡಿದ್ದಾರೆಯೇ? ಧಾರಾವಾಹಿಗಳಲ್ಲಿ, ಕೆಲವು ವಿಡಿಯೋಗಳಲ್ಲಿ ತೋರಿಸಿದ ಹಾಗೆ ನಿಜಕ್ಕೂ ಸುಂದರವಾಗಿದ್ದಾರೆಯೇ? ಎಂಬ ಕುತೂಹಲ ಪ್ರತಿಯೊಬ್ಬರಿಗೂ ಇದ್ದೇ ಇದೆ.

ಇದಕ್ಕೆ ಪೂರಕವೆಂಬಂತೆ ಆಗಾಗ ಮತ್ಸ್ಯಕನ್ಯೆಯರು ಸಿಕ್ಕಿದ್ದಾರೆ, ಸಮುದ್ರದ ದಡದಲ್ಲಿ ಪ್ರಜ್ಞಾಹೀನರಾಗಿ ಬಿದ್ದಿದ್ದಾರೆ ಎನ್ನುವಂತಹ ವೀಡಿಯೋಗಳು ಆಗಾಗ ಜಾಲತಾಣಗಳಲ್ಲಿ ಹರಿದಾಡುತ್ತಲೇ ಇರುತ್ತವೆ.
ಮತ್ಸ್ಯ ಕನ್ಯೆಯರು ಇದ್ದಾರೆ ಎಂಬುದು ಜನರ ನಂಬಿಕೆ. ಮತ್ಸ್ಯ ಕನ್ಯೆಯರು ಸಮುದ್ರದಲ್ಲಿ ಇದ್ದುಕೊಂಡು ಸಮುದ್ರವನ್ನು ಕಾಪಾಡುತ್ತಾರೆ ಎನ್ನುವ ನಂಬಿಕೆ ಹಲವರಲ್ಲಿ ಬಲವಾಗಿದೆ. ಇವರು ಕೇವಲ ನೀರಿನ ಅಡಿಯಲ್ಲಿ ಇರುತ್ತಾರೆ, ತಲೆಯಿಂದ ಸೊಂಟದವರೆಗೆ ಮನುಷ್ಯರ ಹಾಗೆ ಮೇಲ್ಮೈಯನ್ನು ಹೊಂದಿದ್ದು, ಸೊಂಟದ ಕೆಳಗೆ ಮೀನಿನ ಆಕಾರವನ್ನು ಹೊಂದಿರುತ್ತಾರೆ ಎನ್ನುವ ಕಲ್ಪನೆಯಿದೆ.

ಇದರ ಹಿಂದಿನ ಕಥೆ ಹೀಗಿದೆ. ಒಂದು ಕಾಲದಲ್ಲಿ ಸಿರಿಯಾ ದೇಶದ ರಾಣಿ ಅಟರ್ಗಟಿ ಒಬ್ಬ ಕುರುಬನನ್ನು ಪ್ರೀತಿಸುತ್ತಾಳೆ, ನಂತರ ಏನೋ ಬಲವಾದ ಕಾರಣಗಳಿಂದ ಆತನನ್ನು ಕೊಲೆ ಮಾಡ್ತಾಳೆ, ಬಳಿಕ ತಾನು ಮಾಡಿದ ಕೆಲಸದಿಂದ ಪಶ್ಚಾತ್ತಾಪವಾಗಿ ಸಮುದ್ರಕ್ಕೆ ಹಾರುತ್ತಾಳೆ, ಆದರೆ ಸಮುದ್ರದಲ್ಲಿ ಮುಳುಗಿ ಸಾಯದೇ ಮತ್ಸ್ಯಕನ್ಯೆಯಾಗಿ ಪರಿವರ್ತನೆಗೊಳ್ಳುತ್ತಾಳೆ ಎನ್ನುವ ದಂತಕಥೆಯಿದೆ. ಸಮುದ್ರದಲ್ಲಿರುವ ಮುತ್ತು, ರತ್ನ, ವೈಡೂರ್ಯ ಸಂಪತ್ತನ್ನು ಕಾಪಾಡಿಕೊಳ್ಳಲು ಈ ಜಲಕನ್ಯೆಯರು ಹುಟ್ಟಿರುತ್ತಾರೆ. ಇವರು ಸಮುದ್ರವನ್ನು ಹಾಳು ಮಾಡಲು ಬಿಡುವುದಿಲ್ಲ, ಇವರಿಗೆ ಅಪಾರ ಶಕ್ತಿ ಇರುತ್ತದೆ ಎನ್ನುವ ನಂಬಿಕೆಯಿದೆ.


ಕ್ರಿಸ್ತೋಫರ್ ಕೊಲಂಬಸ್(Christopher Colombus) ಜಲ ಪ್ರಯಾಣ ಮಾಡುತ್ತಿರುವಾಗ ಮೂವರು ಮತ್ಸ್ಯ ಕನ್ಯೆಯರನ್ನು ನೋಡಿದ್ದನಂತೆ. ಕೊಲಂಬಸ್ ನ ಪ್ರಕಾರ ಅವರು ನೋಡಲು ಎಲ್ಲರ ಕಲ್ಪನೆಯಷ್ಟು ಸುಂದರವಾಗಿಲ್ಲ. ನೋಡಲು ಅತ್ಯಂತ ವಿಚಿತ್ರವಾಗಿ ಕಾಣುತ್ತಾರೆ ಎಂದು ಹೇಳಿಕೊಂಡಿದ್ದಾನೆ. ಕೆಲವು ಕಡೆ ಜಲಾಶಯಗಳ ಕಾಮಗಾರಿ ನಡೆಯುವ ವೇಳೆ ಅಲ್ಲಿನ ಕೆಲಸದವರನ್ನು ಕೆಲಸ ಮಾಡದ ಹಾಗೆ ಜಲಕನ್ಯೆಯರು ತಡೆದ ಬಗ್ಗೆ ಕೂಡ ಮಾಹಿತಿಯಿದೆ. ಇದು ವಾಸ್ತವವೋ, ಕಲ್ಪನೆಯೋ ತಿಳಿದಿಲ್ಲ.

ಆದರೆ ಅದೇನೇ ಇರಲಿ ಜಲಕನ್ಯೆಯರು ಎನ್ನುವುದು ಪ್ರತಿಯೊಬ್ಬರಲ್ಲೂ ಕುತೂಹಲವನ್ನು ಕೆರಳಿಸುವ ವಿಷಯ ಎನ್ನುವುದಂತೂ ನಿಜ.

Exit mobile version