ನಕಲಿ ನೋಟುಗಳನ್ನು ಪೂರೈಸುವ ಪಾಕ್‌ನ ISI ಏಜೆಂಟ್ ನೇಪಾಳದಲ್ಲಿ ಹತ್ಯೆ!

Kathmandu : ಪಾಕಿಸ್ತಾನದ(Pakistan) ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ನ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯನ್ನು ನೇಪಾಳದ(Nepal) ಕಠ್ಮಂಡುವಿನಲ್ಲಿ(Kathmandu) ಅವನ ಅಡಗುತಾಣದ ಹೊರಗೆ ಸೆಪ್ಟೆಂಬರ್ 19 ರಂದು ಗುಂಡಿಕ್ಕಿ ಕೊಲ್ಲಲಾಗಿದೆ.  

ಹತ್ಯೆಯಾದ ವ್ಯಕ್ತಿಯೂ ಭಾರತದಲ್ಲಿ ಐಎಸ್‌ಐನ(ISI) ನಕಲಿ ನೋಟುಗಳ(Fake Notes) ಅತಿದೊಡ್ಡ ಪೂರೈಕೆದಾರ ಎಂದು ಗುಪ್ತಚರ ಸಂಸ್ಥೆಗಳು ತಿಳಿಸಿವೆ. ಇನ್ನು ಈ ಘಟನೆಯು ಕ್ಯಾಮರಾದಲ್ಲಿ ಸೆರೆಯಾಗಿದ್ದು, ಅಪರಿಚಿತ  ವ್ಯಕ್ತಿಗಳಿಬ್ಬರು ಐಎಸ್ಐ ಏಜೆಂಟ್ ಮೇಲೆ ಗುಂಡು ಹಾರಿಸಿದ ಸಿಸಿಟಿವಿ ದೃಶ್ಯಗಳು(CCTV Footage) ಲಭ್ಯವಾಗಿವೆ. 

ಹತ್ಯೆಯಾದ ವ್ಯಕ್ತಿಯನ್ಜು ಐಎಸ್‌ಐ ಏಜೆಂಟ್ ಲಾಲ್ ಮೊಹಮ್ಮದ್ (55) ಅಲಿಯಾಸ್ ಮೊಹಮ್ಮದ್ ದರ್ಜಿ ಎಂದು ಗುರುತಿಸಲಾಗಿದೆ. ಇನ್ನು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐನ ಆಜ್ಞೆಯಂತೆ ಲಾಲ್ ಮೊಹಮ್ಮದ್ ಪಾಕಿಸ್ತಾನ ಮತ್ತು ಬಾಂಗ್ಲಾದೇಶದಿಂದ ನಕಲಿ ಭಾರತೀಯ ಕರೆನ್ಸಿಯನ್ನು ಪಡೆದು ಅಲ್ಲಿಂದ ನೇಪಾಳದ ಮೂಲಕ ಭಾರತಕ್ಕೆ ಸರಬರಾಜು ಮಾಡುತ್ತಿದ್ದ.

ಇದನ್ನೂ ಓದಿ : https://vijayatimes.com/operation-nia-new-delhi/

ಭಾರತೀಯ ಗುಪ್ತಚರ ಅಧಿಕಾರಿಗಳ ಪ್ರಕಾರ, ಲಾಲ್ ಮೊಹಮ್ಮದ್ ಐಎಸ್‌ಐಗೆ ಲಾಜಿಸ್ಟಿಕ್ಸ್ ಸಹಾಯ ಮಾಡುತ್ತಿದ್ದ ಮತ್ತು ಭೂಗತ ದರೋಡೆಕೋರ ದಾವೂದ್ ಇಬ್ರಾಹಿಂನ ಡಿ-ಗ್ಯಾಂಗ್‌ನೊಂದಿಗೆ ಸಂಪರ್ಕ ಹೊಂದಿದ್ದನು.

ಸಿಸಿಟಿವಿಯಲ್ಲಿ  ಏನಿದೆ? : ಕಠ್ಮಂಡುವಿನ ಗೊತಾಟರ್ ಪ್ರದೇಶದಲ್ಲಿ ಲಾಲ್ ಮೊಹಮ್ಮದ್ ತನ್ನ ಮನೆಯ ಹೊರಗೆ ಐಷಾರಾಮಿ ಕಾರಿನಿಂದ ಇಳಿದು ಬರುತ್ತಿರುವಾಗ, ಇಬ್ಬರು ದುಷ್ಕರ್ಮಿಗಳು ಅವನ ಮೇಲೆ ಗುಂಡು ಹಾರಿಸಿದರು. ಲಾಲ್ ಮೊಹಮ್ಮದ್ ತನ್ನ ಕಾರಿನ ಹಿಂದೆ ಅಡಗಿಕೊಳ್ಳಲು ಪ್ರಯತ್ನಿಸಿದ, ಆದರೆ ದಾಳಿಕೋರರು ಗುಂಡಿನ ದಾಳಿಯನ್ನು ಮುಂದುವರೆಸಿದರು.

ಈ ವೇಳೆ ಲಾಲ್ ಮೊಹಮ್ಮದ್ ಮಗಳು ತನ್ನ ತಂದೆಯನ್ನು ರಕ್ಷಿಸಲು ಮನೆಯ ಮೊದಲ ಮಹಡಿಯಿಂದ ಜಿಗಿದಿದ್ದಾಳೆ ಆದರೆ, ಆಕೆ ತನ್ನ ತಂದೆಯನ್ನು ತಲುಪುವಷ್ಟರಲ್ಲಿ ದುಷ್ಕರ್ಮಿಗಳು ಮೊಹಮ್ಮದ್‌ನನ್ನು ಕೊಂದು ಪರಾರಿಯಾಗಿದ್ದಾರೆ.

Exit mobile version