ಮೋಡದ ಕಿರೀಟ ಹೊಂದಿರುವ ಮಾಂತ್ರಿಕ ದ್ವೀಪ ‘ಲಿಟ್ಲಾ ಡಿಮುನ್’

Litla Dimun

ಲಿಟ್ಲಾ ಡಿಮುನ್’(Litla Dimun) ಎನ್ನುವುದು ಜನವಸತಿ ಇಲ್ಲದ ದ್ವೀಪವಾಗಿದ್ದು(Island), ಫರೋ ದ್ವೀಪಗಳಲ್ಲಿನ ಸುರೊಯ್ ಮತ್ತು ಸ್ಟೋರಾ ಡಿಮುನ್ ದ್ವೀಪಗಳ ನಡುವೆ ಇದೆ. `ಲಿಟ್ಲಾ ಡಿಮುನ್’ ಫಾರೋ ದ್ವೀಪ ಸಮೂಹದ ಅತ್ಯಂತ ಚಿಕ್ಕ ದ್ವೀಪಗಳಲ್ಲಿ ಒಂದಾಗಿದೆ. ಸ್ಕಾಟ್ಲೆಂಡ್(Scotland) ಮತ್ತು ಐಸ್ಲ್ಯಾಂಡ್(Island) ನಡುವೆ ಇರುವ ಈ ದ್ವೀಪದ ವಿಸ್ತೀರ್ಣ 0.8 ಚದರ ಕಿಲೋಮೀಟರ್, ಮತ್ತು ಎತ್ತರ 414 ಮೀ ಎಂದರೆ 1,358 ಅಡಿ. ಈ ದ್ವೀಪವು ಸಿಲಿಂಡರ್ ಕೋನ್‌ನ ಆಕಾರವನ್ನು ಹೊಂದಿದ್ದು, ಭೂಮಿಯ ದಕ್ಷಿಣ ಭಾಗವು ಸಂಪೂರ್ಣ ಬಂಡೆಗಳಿಂದ ಆವೃತವಾಗಿದೆ.

ಲೆಂಟಿಕ್ಯುಲರ್ ಮೋಡಗಳೆಂದು ಕರೆಯಲ್ಪಡುವ ಅದರ ಮೇಲ್ಭಾಗವು ಯಾವಾಗಲೂ ಮೋಡದಿಂದ ಆವೃತವಾಗಿರುವುದರಿಂದ ಇದು “ಲಿಟಲ್ ಡಿಮುನ್” ಎಂಬ ಖ್ಯಾತಿಯನ್ನು ಗಳಿಸಿದೆ. ಈ ದ್ವೀಪವನ್ನು ಪ್ರವೇಶಿಸಲಾಗದಿರುವುದು ಬಹುಶಃ ಈ ಸ್ಥಳದಲ್ಲಿ ಎಂದಿಗೂ ಜನರು ವಾಸಿಸದಿರಲು ಮುಖ್ಯ ಕಾರಣ ಎಂದು ಅಂದಾಜಿಸಲಾಗಿದೆ. ಈ ದ್ವೀಪ ಉತ್ತರ ಅಟ್ಲಾಂಟಿಕ್ ಸಾಗರ ಪ್ರದೇಶದಲ್ಲಿ ಸಾಕಷ್ಟು ವಿಶಿಷ್ಟತೆಗಳಿಂದ ಕೂಡಿದೆ. ನವಶಿಲಾಯುಗದಲ್ಲಿ ಕುರಿಗಳು ಇಲ್ಲಿ ಮೇಯುತ್ತಿದ್ದವು ಎಂಬುದಕ್ಕೆ ಅವುಗಳ ಪ್ರಾಚೀನ ಅವಶೇಷಗಳು ಸಾಕ್ಷಿಯಾಗಿವೆ.


ಶರತ್ಕಾಲದಲ್ಲಿ, ಸ್ಥಳೀಯ ರೈತರು ಕಾಡು ಕುರಿಗಳನ್ನು ಭೇಟೆಯಾಡಲು ಲಿಟ್ಲಾ-ಡಿಮುನ್‌ಗೆ ಹೋಗುತ್ತಾರೆ. ಆಹಾರಕ್ಕಾಗಿ ಅಗತ್ಯವಿರುವಷ್ಟು ಸಂಖ್ಯೆಯ ಕುರಿಗಳನ್ನು ಕೊಂದು ತೆಗೆದುಕೊಂಡು ಬರುತ್ತಾರೆ ಮತ್ತು ಅವುಗಳಲ್ಲಿ ಕೆಲವು ಕುರಿಗಳ ಉಣ್ಣೆಯನ್ನು ತೆಗೆದು ಮಾರಾಟ ಮಾಡುತ್ತಾರೆ. ಚಳಿಗಾಲದಲ್ಲಿ ಉಪಯೋಗಿಸಲು ಕುರಿಗಳನ್ನು ತೆಗೆದುಕೊಂಡು ಬಂದು ಕೊಟ್ಟಿಗೆಗಳಲ್ಲಿಟ್ಟು ಬೀಗ ಹಾಕಲಾಗುತ್ತದೆ, ಇದರಿಂದ ಆಯ್ದ ಕುರಿಗಳು ವರ್ಷದ ಕಠಿಣ ಸಮಯದಲ್ಲಿ ಸುರಕ್ಷಿತ ಪರಿಸ್ಥಿತಿಯಲ್ಲಿ ಬದುಕುತ್ತವೆ.

Exit mobile version