ಪ್ಯಾಲೆಸ್ಟೀನ್‌ ಹಮಾಸ್ ಉಗ್ರರಿಂದ ಇಸ್ರೇಲ್ ಮೇಲೆ 5000 ರಾಕೆಟ್ ದಾಳಿ: ಯುದ್ಧದ ಸ್ಥಿತಿ ಘೋಷಿಸಿದ ಇಸ್ರೇಲ್

Jerusalem: ಇಸ್ರೇಲ್ (Israel) ಮೇಲೆ ಪ್ಯಾಲೆಸ್ಟೀನ್‌ನಿಂದ ಹಮಾಸ್ ಬಂಡುಕೋರರು ಸುಮಾರು 5 ಸಾವಿರ ರಾಕೆಟ್ ದಾಳಿ (Israel declared State War) ನಡೆಸಿದ್ದಾರೆ. ಈ ಹಿಂಸಾಚಾರದ ಬಗ್ಗೆ

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು (Benjamin Netanyahu) ಭದ್ರತಾ ಮುಖ್ಯಸ್ಥರನ್ನು ಕರೆದು ಸಭೆ ನಡೆಸಿದ್ದು, ಯುದ್ಧ ಪರಿಸ್ಥಿತಿಯನ್ನು ಘೋಷಿಸಲಾಗಿದೆ. ಈ ದಾಳಿ ಮತ್ತೊಂದು ಯುದ್ಧದ

ಆತಂಕದ ವಾತಾವರಣ ನಿರ್ಮಿಸಿದ್ದು, ಗಾಜಾ ಪಟ್ಟಿಯಿಂದ ಬಂಡುಕೋರರು ರಾಕೆಟ್ ಉಡಾಯಿಸಿದ್ದಾರೆ. ಇದಕ್ಕೆ ಪ್ರತಿ ದಾಳಿ ನಡೆಸಲು ಇಸ್ರೇಲ್ ಸಿದ್ಧತೆ ನಡೆಸಿದೆ.

5,000 ರಾಕೆಟ್‌ಗಳನ್ನು (Rocket) ಆಪರೇಷನ್ ಅಲ್-ಅಕ್ಸಾ ಫ್ಲಡ್’ ಆರಂಭವಾದಾಗ ಹಾರಿಸಲಾಯಿತು ಎಂದು ಹಮಾಸ್ ಸಶಸ್ತ್ರ ವಿಭಾಗ ಹೇಳಿದೆ. ಇಸ್ರೇಲ್ ಡಿಫೆನ್ಸ್ ಫೋರ್ಸ್ (Israel Défense Force)

(ಐಡಿಎಫ್) ಯೋಧನನ್ನು ಅಪಹರಿಸಲಾಗಿದೆ. ದಕ್ಷಿಣ ಇಸ್ರೇಲ್‌ನಲ್ಲಿ ಒತ್ತೆಯಾಳಾಗಿಟ್ಟುಕೊಂಡ ಸನ್ನಿವೇಶಗಳು (Israel declared State War) ಕೂಡ ವರದಿಯಾಗಿವೆ.

ಶನಿವಾರ ಹಬ್ಬದ ರಜೆಯ ಸಂದರ್ಭದಲ್ಲಿ ಮುಂಜಾನೆ 5000ಕ್ಕೂ ಅಧಿಕ ರಾಕೆಟ್‌ಗಳನ್ನು ಇಸ್ರೇಲ್ ಕಡೆ ಬಂಡುಕೋರರು ಉಡಾಯಿಸಿದ್ದಾರೆ. ಇದು ತನ್ನ ಮೊದಲ ದಾಳಿ ಎಂದು ಹಮಾಸ್ (Hamas)

ಬಂಡುಕೋರರು ಹೇಳಿಕೊಂಡಿದ್ದಾರೆ. ಇಸ್ರೇಲ್‌ನಾದ್ಯಂತ ಎಚ್ಚರಿಕೆಯ ಸೈರನ್ ಮೊಳಗಿಸಲಾಗಿದೆ. ಈ ದಾಳಿಯಲ್ಲಿ ಪ್ಯಾರಾಗ್ಲೈಡರ್‌ಗಳನ್ನು (Paraglider) ಬಳಸಲಾಗಿದ್ದು, ಇಸ್ರೇಲ್‌ ಆ ದೃಶ್ಯದ

ತುಣುಕುಗಳನ್ನು ಬಿಡುಗಡೆ ಮಾಡಿದೆ.

ಇತ್ತೀಚಿನ ವರ್ಷಗಳಲ್ಲಿ ಉಕ್ರೇನ್ (Ukraine) ಮೇಲೆ ರಷ್ಯಾದ ಆಕ್ರಮಣದ ನಂತರ ಸಂಭವಿಸಿದ 2ನೇ ದೊಡ್ಡ ಯುದ್ಧವಾಗಿದ್ದು, ಗಾಜಾ ಪಟ್ಟಿಯಿಂದ ಹಲವಾರು ಭಯೋತ್ಪಾದಕರು ಇಸ್ರೇಲ್

ಪ್ರದೇಶದೊಳಗೆ ನುಸುಳಿದ್ದಾರೆ. ಈ ಸುತ್ತಮುತ್ತಲಿನ ಪ್ರದೇಶದ ನಿವಾಸಿಗಳಿಗೆ ತಮ್ಮ ಮನೆಗಳಲ್ಲಿಯೇ ಉಳಿಯಲು ಸೂಚಿಸಲಾಗಿದೆ ಎಂದು ಇಸ್ರೇಲ್ ರಕ್ಷಣಾ ಪಡೆಗಳು ಮಾಹಿತಿ ನೀಡಿವೆ.

ರಾಕೆಟ್‌ಗಳು ನುಗ್ಗುವ ಸದ್ದುಗಳು, ಟೆಲ್ ಅವಿವ್‌ನಲ್ಲಿ ಸೈರನ್‌ಗಳ ಸದ್ದು ಗಾಜಾದ ವಾಯು ಭಾಗದಲ್ಲಿ ಕೇಳಿಬಂದಿದೆ. ಸುಮಾರು 30 ನಿಮಿಷಗಳ ಕಾಲ ಈ ಶಬ್ಧ ತೀವ್ರವಾಗಿತ್ತು. ಕಟ್ಟಡವೊಂದಕ್ಕೆ ದಕ್ಷಿಣ

ಇಸ್ರೇಲ್‌ನಲ್ಲಿ ರಾಕೆಟ್ ಅಪ್ಪಳಿಸಿದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ 70 ವರ್ಷದ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ರಾಕೆಟ್‌ನ ಭಾಗವೊಂದು ತಗುಲಿ 20 ವರ್ಷದ ಯುವಕನಿಗೆ ಗಾಯವಾಗಿದೆ

ಎಂದು ಇಸ್ರೇಲ್‌ನ ಮಾಗೆನ್ ಡೇವಿಡ್ ಆಡೊಮ್ ರಕ್ಷಣಾ ಸಂಸ್ಥೆ ತಿಳಿಸಿದೆ.

ಪವಿತ್ರ ನಗರವಾದ ಜೆರುಸಲೇಮ್ ಮತ್ತು ಇಸ್ರೇಲ್‌ನಾದ್ಯಂತ ಸೈರನ್‌ಗಳು (Siren) ಮೊಳಗುತ್ತಿದ್ದು, ಇಸ್ರೇಲ್ ಪ್ರಧಾನಿ ಈ ಹಿಂಸಾಚಾರದ ಬಗ್ಗೆ ಬೆಂಜಮಿನ್ ನೆತನ್ಯಾಹು ಭದ್ರತಾ ಮುಖ್ಯಸ್ಥರನ್ನು ಕರೆದು

ಸಭೆ ನಡೆಸಿದ್ದಾರೆ ಮತ್ತು ಯುದ್ಧ ಪರಿಸ್ಥಿತಿಯನ್ನು ಘೋಷಿಸಲಾಗಿದೆ.

ಇದನ್ನು ಓದಿ: ಪಳ ಪಳ ಹೊಳೆಯುವ ಹಲ್ಲುಗಳಿಗಾಗಿ ಮನೆಯಲ್ಲೇ ತಯಾರಿಸಿ ಆರೋಗ್ಯವಾದ ಟೂತ್ ಪೌಡರ್: ಇದರ ಉಪಯೋಗಗಳೇನು?

Exit mobile version