ಇಸ್ರೇಲ್ ಅಧ್ಯಕ್ಷರಾಗಿ ಹಿರಿಯ ರಾಜಕಾರಣಿ ಐಸಾಕ್ ಹರ್ಜಾಗ್ ಆಯ್ಕೆ

ಜೆರುಸಲೇಮ್, ಜೂ. 02: ಹಿರಿಯ ರಾಜಕಾರಣಿ ಐಸಾಕ್ ಹರ್ಜಾಗ್ ಅವರು ಇಸ್ರೇಲ್‌ನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

120 ಸದಸ್ಯ ಬಲದ ಇಸ್ರೇಲ್‌ ಸಂಸತ್‌ನಲ್ಲಿ ಗುಪ್ತ ಮತದಾನದ ಮೂಲಕ ಈ ಆಯ್ಕೆ ನಡೆಯಿತು. ಪ್ರಸ್ತುತ ಅಧ್ಯಕ್ಷರಾಗಿರುವ ರೆವೆನ್ ರಿವ್ಲಿನ್ ಅವರ ಅಧಿಕಾರಾವಧಿ ಮುಂದಿನ ತಿಂಗಳು ಕೊನೆಗೊಳ್ಳಲಿದೆ.

60 ವರ್ಷದ ಹರ್ಜಾಗ್ ಅವರು ಇಸ್ರೇಲ್‌ನ ಪ್ರತಿಷ್ಠಿತ ಜಿಯೋನಿಸ್ಟ್ ಕುಟುಂಬಕ್ಕೆ ಸೇರಿದವರು. ಅವರ ತಂದೆ ಚೇಮ್ ಹರ್ಜಾಗ್ ಅವರು ವಿಶ್ವಸಂಸ್ಥೆಯಲ್ಲಿ ಇಸ್ರೇಲ್‌ನ ರಾಯಭಾರಿಯಾಗಿ, ನಂತರ ಇಸ್ರೇಲ್‌ನ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು.

Exit mobile version