ಸಿದ್ದರಾಮಯ್ಯ ಪಶ್ಚಾತಾಪ, ಪ್ರಾಯಶ್ಚಿತ ಎಲ್ಲವೂ ಪ್ರಯೋಜನ ಪಡೆಯಲು : ಬಿಜೆಪಿ

State BJP tweets over congress

ಧರ್ಮ ವಿಭಜನೆಗೆ ಸಂಬಂಧಿಸಿದಂತೆ ಸಿದ್ದರಾಮಯ್ಯ(Siddaramaiah) ಅವರ ಪಶ್ಚಾತಾಪ, ಪ್ರಾಯಶ್ಚಿಕತೆಯಲ್ಲ, ಪ್ರಯೋಜನ ಪಡೆಯಲು ಮಾಡಿದ ಸಂಕಲ್ಪ. ಚುನಾವಣೆ(Election) ಸನಿಹದಲ್ಲಿರುವಾಗ ಧರ್ಮ ವಿಭಜನೆಯ ಸೂತ್ರದಾರ ಪಶ್ಚಾತಾಪ ಪಟ್ಟಿರುವುದರಲ್ಲಿ ರಾಜಕೀಯವಿದೆಯೇ ಹೊರತು ಯಾವುದೇ ವಿಷಾದವಿಲ್ಲ ಎಂದು ರಾಜ್ಯ ಬಿಜೆಪಿ(State BJP) ಸಿದ್ದರಾಮಯ್ಯ ನಡೆಯನ್ನು ಟೀಕಿಸಿದೆ.

“ಮತ ಪಶ್ಚತಾಪ” ಎಂಬ ಹ್ಯಾಷ್‌ಟ್ಯಾಗ್‌(Hashtag) ಬಳಸಿ ಸಿದ್ದರಾಮಯ್ಯ ವಿರುದ್ದ ಸರಣಿ ವಾಗ್ದಾಳಿ ನಡೆಸಿರುವ ಬಿಜೆಪಿ, ವೀರಶೈವ ಲಿಂಗಾಯತ ಸಮುದಾಯಕ್ಕೆ ಕಾಂಗ್ರೆಸ್( ಹಲವು ವರ್ಷಗಳಿಂದ ಅಪಮಾನ ಮಾಡುತ್ತಲೇ ಬಂದಿದೆ. ನಿಜಲಿಂಗಪ್ಪ, ವೀರೇಂದ್ರ ಪಾಟೀಲರಿಗೆ ರಾಜಕೀಯವಾಗಿ ಅನ್ಯಾಯ ಮಾಡಿದ್ದ ಕಾಂಗ್ರೆಸ್,

ಧರ್ಮದ ವಿಚಾರದಲ್ಲಿ ವೀರಶೈವ-ಲಿಂಗಾಯತ ಸಮುದಾಯದ ಭಾವನೆ ಕೆಣಕುತ್ತಿದೆ. ಬಸವಣ್ಣನ ಹಾದಿಯಲ್ಲಿ ನಡೆಯುತ್ತಿದ್ದೇವೆ ಎನ್ನುವವರು ಮಾಡುತ್ತಿರುವುದೇನು? ಎಂದು ಪ್ರಶ್ನಿಸಿದೆ. ಧರ್ಮ ವಿಭಜನೆಗೆ ಕೈ ಹಾಕಿದ್ದು ತಪ್ಪು ಎಂದು ಈ ಹಿಂದೆ ಡಿ.ಕೆ.ಶಿವಕುಮಾರ್‌(DK Shivkumar) ಹೇಳಿದ್ದರು.

ಈಗ ಅದೇ ಹಾದಿಯನ್ನು ಸಿದ್ದರಾಮಯ್ಯ ತುಳಿದಿದ್ದಾರೆ. ಚುನಾವಣೆಯ ಸಾಲಿನಲ್ಲಿ ಪಶ್ಚತಾಪದ ಮಾತಗಳನ್ನಾಡುತ್ತಿರುವುದು ಮತ ಗಳಿಕೆಯ ಭಾಗವೇ? ಸಿದ್ದರಾಮಯ್ಯ ಅವರ ಅವಕಾಶವಾದಿ ರಾಜಕಾರಣವನ್ನು ಕರ್ನಾಟಕ ಎಂದಿಗೂ ಕ್ಷಮಿಸದು. ವೀರಶೈವ ಲಿಂಗಾಯತ ಧರ್ಮ ವಿಭಜನೆ ವಿಚಾರದಲ್ಲಿ “ನನ್ನನ್ನು ದಾರಿ ತಪ್ಪಿಸಿದರು” ಎಂದು ಧರ್ಮ ವಿಭಜಕ ಸಿದ್ದರಾಮಯ್ಯ ಹೇಳಿದ್ದಾರೆ.

ಸಿದ್ದರಾಮಯ್ಯನವರೇ, ನಿಮ್ಮ ದಾರಿ ತಪ್ಪಿಸಿದವರು ನಿಮ್ಮ ಜೊತೆಯಲ್ಲೇ ಇದ್ದುಕೊಂಡು ಪ್ರಚಾರ ಸಮಿತಿ ಅಧ್ಯಕ್ಷರಾಗಿದ್ದಾರೆ. ಅವರಿಂದ ರಾಜೀನಾಮೆ ಪಡೆಯುತ್ತೀರಾ? ಎಂದು ಪ್ರಶ್ನಿಸಿದ್ದಾರೆ. ಇದಕ್ಕೂ ಮುನ್ನ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು, ರಂಭಾಪುರಿ ಶ್ರೀಗಳನ್ನು ಭೇಟಿ ಮಾಡಿ, ಆರ್ಶೀವಾದ ಪಡೆಯುವ ವೇಳೆ, ಲಿಂಗಾಯತ ಧರ್ಮ ಒಡೆಯುವ ಉದ್ದೇಶ ನನಗಿರಲಿಲ್ಲ, ನನಗೆ ಪಶ್ಚಾತಾಪವಾಗಿದೆ ಎಂದಿದ್ದರು.

Exit mobile version