ರಾಜ್ಯದಲ್ಲಿ ಕೊರೊನಾ 2ನೇ ಅಲೆ ಆರಂಭವಾಗಲು ಸರ್ಕಾರದ ತಪ್ಪುಗಳೇ ಕಾರಣ: ಸಿದ್ಧರಾಮಯ್ಯ

ಕೊಪ್ಪಳ, ಏ. 12: ಸರ್ಕಾರ ಹಣ ಹೊಡೆಯುವುದರಲ್ಲಿ ಮುಳುಗಿದೆ ಹೊರತು ಕೊರೊನಾ ನಿಯಂತ್ರಣಕ್ಕೆ ಯಾವುದೇ ಬಿಗಿ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ ಎಂದು ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಕೊಪ್ಪಳದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕೊರೊನಾ 2ನೇ ಅಲೆ ಆರಂಭವಾಗಲು ಸರ್ಕಾರದ ತಪ್ಪುಗಳೇ ಕಾರಣ. ಕೋವಿಡ್ ಪ್ರಕರಣ ಹೆಚ್ಚಿರುವ ಮಹಾರಾಷ್ಟ್ರ, ಕೇರಳದಿಂದ ಜನರು ಬರುತ್ತಿದ್ದಾರೆ. ಅವರನ್ನು ಟೆಸ್ಟ್ ಮಾಡುತ್ತಿಲ್ಲ. ಇತ್ತ ಹೊರ ದೇಶಗಳಿಂದ ಜನರು ರಾಜ್ಯಕ್ಕೆ ಬರುತ್ತಿದ್ದಾರೆ. ಅವರನ್ನೂ ಪರಿಕ್ಷೆಗೊಳಪಡಿಸುತ್ತಿಲ್ಲ. ಹೀಗಾಗಿ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ ಎಂದರು.

ಇನ್ನು ಲಾಕ್ ಡೌನ್ ಮಾಡುವುದೆ ಸಮಸ್ಯೆಗೆ ಪರಿಹಾರವಲ್ಲ. ಕಳೆದ ಬಾರಿ ಕೊರೊನಾ ಬಂದಾಗ ಲಾಕ್ ಡೌನ್ ಮಾಡಿದರು. ಯಾವಾಗ? ಕೊರೊನಾ ಸಂಖ್ಯೆ ಕಡಿಮೆಯಿದ್ದಾಗ ಲಾಕ್ ಡೌನ್ ಮಾಡಿ ನಂತರ ಬಿಟ್ಟರು. ಇದರಿಂದ ಪರಿಸ್ಥಿತಿ ಕೈಮೀರಿತು. ಆರಂಭದಲ್ಲಿ ಸೋಂಕು ನಿಯಂತ್ರಕ್ಕೆ ಸರ್ಕಾರ ಸಮರ್ಪಕವಾಗಿ ಕಟ್ಟು ನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು. ಪರಿಸ್ಥಿತಿ ಕೈಮೀರಿದಾಗ ಮಾತ್ರ ಲಾಕ್ ಡೌನ್ ಮಾಡಬೇಕು ಎಂದು ಹೇಳಿದರು.

Exit mobile version