ರಾಹುಲ್ ಗಾಂಧಿಗೆ ಎರಡು ವರ್ಷ ಜೈಲು ಶಿಕ್ಷೆ, ತೀರ್ಪನ್ನು ಎತ್ತಿ ಹಿಡಿದ ಹೈಕೋರ್ಟ್ :-

New Delhi: ಮೋದಿಯವರ ಉಪನಾಮಕ್ಕೆ ಸಂಬಂಧಪಟ್ಟ ಪ್ರಕರಣದಲ್ಲಿ ಪ್ರಕಟವಾಗಿದ್ದ ಜೈಲು ಶಿಕ್ಷೆ ಹಾಗು ಸಂಸತ್ ಸದಸ್ಯತ್ವ ರದ್ದು ಮಾಡಿರುವುದಕ್ಕೆ ತಡೆ ನೀಡುವಂತೆ (Jail for Rahul Gandhi) ಕೋರಿ

ಸಲ್ಲಿಸಿದ್ದ ಅರ್ಜಿಯನ್ನು ಗುಜರಾತ್ ಹೈಕೋರ್ಟ್ ವಜಾ ಮಾಡಿದೆ ಹಾಗೂ ಜೊತೆಗೆ ಕೆಳ ನ್ಯಾಯಾಲಯ ನೀಡಿದ್ದ ತೀರ್ಪನ್ನು ಎತ್ತಿ ಹಿಡಿದಿದೆ. ಹಾಗಾಗಿ ಕಾಂಗ್ರೆಸ್ (Congress) ನಾಯಕರಾದ ರಾಹುಲ್ ಗಾಂಧಿಗೆ

(Jail for Rahul Gandhi) ಸದ್ಯಕ್ಕೆ ರಿಲೀಫ್ ಇಲ್ಲದಂತಾಗಿದೆ.

ರಾಹುಲ್ ಗಾಂಧಿಯವರ ಮುಂದಿನ ನಡೆ?
ರಾಹಲ್ ಗಾಂಧಿಯವರು ಕೋರ್ಟ್ ತೀರ್ಪಿನಿಂದ ಚುನಾವಣೆಗೆ ಸ್ಪರ್ಧೆ ಮಾಡಲು ಅವಕಾಶವಿಲ್ಲ. ಲೋಕಸಭಾ ಸದಸ್ಯ ಸ್ಥಾನದ ಅನರ್ಹತೆಯು ರದ್ಧಾಗಲ್ಲ ಹೈಕೋರ್ಟ್ ಆದೇಶದ ವಿರುದ್ಧ ರಾಹುಲ್ ಗಾಂಧಿ

ಸುಪ್ರೀಂ ಕೋರ್ಟ್ (Supreme Court) ಗೆ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ. JMFC ಕೋರ್ಟ್ ಶಿಕ್ಷೆ ವಿಧಿಸಿ ನೀಡಿರುವ ಆದೇಶ ಸೂಕ್ತವಾಗಿದೆ. ಮ್ಯಾಜಿಸ್ಟ್ರೇಟ್ ಕೋರ್ಟ್ (Magistrate Court)

ಆದೇಶದಲ್ಲಿ ಮಧ್ಯಪ್ರವೇಶಿಸುವ ಅಗತ್ಯವಿಲ್ಲ. ರಾಹುಲ್ ಗಾಂಧಿಯ ವಿರುದ್ಧ ಕನಿಷ್ಠ ಹತ್ತು ಕ್ರಿಮಿನಲ್ ಕೇಸ್ ದೇಶಾದ್ಯಂತ ಪೆಂಡಿಂಗ್ ಇವೆ ಎಂದು ಹೈಕೋರ್ಟ್ ಇದೇ ವೇಳೆ ಹೇಳಿದೆ.

ಇದನ್ನು ಓದಿ: ಸಿದ್ದರಾಮಯ್ಯ ಬಜೆಟ್‌ ಟಾಪ್ ಆರು ಹೈಲೈಟ್ಸ್

ಏನಿದು ಪ್ರಕರಣ .?
ರಾಹುಲ್ ಗಾಂಧಿಯವರಿಗೆ ಕೋರ್ಟ್ ಬೆನ್ನಲ್ಲೇ ಅವರ ಸಂಸದ ಸ್ಥಾನದ ಅನರ್ಹತೆಯು ಮುಂದುವರಿಯಲಿದೆ.2019ರ ಲೋಕಸಭೆ ಚುನಾವಣಾ ಸಂಧರ್ಭದಲ್ಲಿ ರಾಹುಲ್ ಗಾಂಧಿ ಕರ್ನಾಟಕದ ಕೋಲಾರದಲ್ಲಿ ಪ್ರಧಾನಿ

ನರೇಂದ್ರ ಮೋದಿ (Narendra Modi) ವಿರುದ್ಧ ಮಾತನಾಡಿದ್ದರು “ಎಲ್ಲಾ ಕಳ್ಳರ ಉಪನಾಮ ಮೋದಿ ಎಂದು ಹೇಗೆ ಬರುತ್ತದೆ. ಅಂತಾ ಪ್ರಶ್ನೆ ಮಾಡಿದ್ದರು. ರಾಹುಲ್ ಗಾಂಧಿಯಾ ಈ ಹೇಳಿಕೆ ವಿರುದ್ಧ ಕ್ರಿಮಿನಲ್

(Criminal) ಮಾನನಷ್ಟ ಮೊಕದ್ದಮೆ ಕೇಸ್ ದಾಖಲಿಸಲಾಗಿತ್ತು.

ಈ ವಿಚಾರವಾಗಿ ವಿಚಾರಣೆ ನಡೆಸಿದ್ಧ ಸೂರತ್ ನ CJM (Surat Chief Judicial Magistrate ) ಕೋರ್ಟ್ ರಾಹುಲ್ ಗಾಂಧಿಗೆ ಮಾರ್ಚ್ 23 ರಂದು ಎರಡು ವರ್ಷ ಜೈಲು ಶಿಕ್ಷೆಯನ್ನು ಪ್ರಕಟಿಸಿ ದಂಡ ಕೂಡ ವಿಧಿಸಿತ್ತು.

ಈ ತೀರ್ಪಿನ ಬೆನ್ನಲ್ಲೆ ರಾಹುಲ್ ಗಾಂಧಿಯ ಲೋಕಸಭಾ ಸದಸ್ಯತ್ವವು ರದ್ಧಾಗಿತ್ತು. CJM ಕೋರ್ಟ್ ನ ತೀರ್ಪನ್ನು ರಾಹುಲ್ ಗಾಂಧಿ ಸೂರತ್ ಸೇಷನ್ಸ್ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು. ಕೋರ್ಟ್ ತೀರ್ಪನ್ನು ಪರೀಶೀಲಿಸಿ

ಜೈಲ್ ಶಿಕ್ಷೆಗೆ ತಡೆ ನೀಡುವಂತೆ ಕೋರಿ ಅರ್ಜಿ ಸಲ್ಲಿಸಿದರು ಆದರೆ ಅಲ್ಲಿ ಯಾವುದೇ ಪರಿಹಾರ ಸಿಗದ ಕಾರಣ ರಾಹುಲ್ ಗಾಂಧಿ ಏಪ್ರಿಲ್ 25ರಂದು ಹೈಕೋರ್ಟ್ ಮೆಟ್ಟಿಲೇರಿದ್ದರು. ಆದರೆ ವಿಚಾರಣೆ ನಡೆಸಿದ್ದ ಗುಜರಾತ್

(Gujurat) ಹೈಕೋರ್ಟ್ ಇಂದು 2 ವರ್ಷ ಜೈಲು ಶಿಕ್ಷೆಯ ತೀರ್ಪನ್ನು ಪ್ರಕಟಿಸಿದೆ.

ಭವ್ಯಶ್ರೀ ಆರ್. ಜೆ

Exit mobile version