Bengaluru : ರಾಜ್ಯದಲ್ಲಿ ಕಾಂಗ್ರೆಸ್ (Congress) ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮೊದಲ ಬಜೆಟ್ ಮಂಡಿಸಿರುವ ಸಿಎಂ ಸಿದ್ದರಾಮಯ್ಯ (Budget Top Six Highlights), ರಾಜ್ಯಾದ್ಯಂತ ಕ್ಷೇತ್ರವಾರು
ಅಭಿವೃದ್ಧಿಗೆ ಹಣ ಮೀಸಲಿಡುವುದು ಮತ್ತು ಖಾತರಿ ಯೋಜನೆಗಳಿಗೆ ಹಣ ಸಂಗ್ರಹಿಸುವ ಮೂಲಕ ಸಮತೋಲನ ಕಾಯ್ದುಕೊಳ್ಳಲು ಯತ್ನಿಸಿದ್ದಾರೆ. ಅದೇ ಸಮಯದಲ್ಲಿ, ಸಂಪನ್ಮೂಲ ಕ್ರೋಢೀಕರಣದ ವಿಷಯದಲ್ಲಿ
ವ್ಯಾಪಾರ ತೆರಿಗೆ ಇಲಾಖೆಯ ಗುರಿಗಳೂ ಹೆಚ್ಚಿವೆ. ಮದ್ಯ ಪ್ರಿಯರಿಗೆ ಸಹಜವಾಗಿಯೇ ಅಬಕಾರಿ ತೆರಿಗೆ ಏರಿರೋದು ಕಸಿವಿಸಿ ಮೂಡಿಸಲಿದೆ. ಬೆಂಗಳೂರು (Bengaluru) ನಗರದ ಅಭಿವೃದ್ಧಿಗೆ ಸರ್ಕಾರ
ಸಾಕಷ್ಟು ಆರ್ಥಿಕ ನೆರವು ನೀಡಿದೆ. ಆರೋಗ್ಯ, ಶಿಕ್ಷಣ ಮತ್ತು ಕೃಷಿ ಕ್ಷೇತ್ರಗಳಿಗೂ ಬಜೆಟ್ನಲ್ಲಿ (Budget 2023) ಸೂಕ್ತ ಆರ್ಥಿಕ ನೆರವು ಸಿಕ್ಕಿದೆ. ಸಿದ್ದರಾಮಯ್ಯ ಬಜೆಟ್ನ 6 ಮುಖ್ಯಾಂಶಗಳು ಇಲ್ಲಿವೆ:

1 – ಮದ್ಯದ ಬೆಲೆ ಏರಿಕೆ
ರಾಜ್ಯ ಸರ್ಕಾರ ಅಬಕಾರಿ(Excise) ತೆರಿಗೆ ಪ್ರಮಾಣವನ್ನು 20ರಷ್ಟು ಹೆಚ್ಚಿಸಿದೆ. ಬಿಯರ್ (Beer) ಮೇಲಿನ ಅಬಕಾರಿ ಸುಂಕ ಶೇ.10ರಷ್ಟು ಏರಿಕೆಯಾಗಿದೆ. ಇದು ನಿಸ್ಸಂದೇಹವಾಗಿ ಮದ್ಯ ಪ್ರಿಯರಿಗೆ
ದೊಡ್ಡ ಹೊಡೆತವಾಗಿದೆ. ಇದು ಎಲ್ಲಾ 18 ಘೋಷಿತ ಬೆಲೆಗಳ ಸ್ಲಾಟ್ಗಳಿಗೂ ಅನ್ವಯಿಸುತ್ತದೆ. ಚಾಲ್ತಿಯಲ್ಲಿರುವ ಜಿಎಸ್ಟಿ (GST) ದರಕ್ಕಿಂತ ಶೇ. 20ರಷ್ಟು ಹೆಚ್ಚಳವಾಗಿದೆ.ಎಲ್ಲಾ ರೀತಿಯ ಮದ್ಯಕ್ಕೂ
ಅಂದರೆ ರಮ್,ವಿಸ್ಕಿ, ಬ್ರಾಂದಿ, ವೋಡ್ಕಾ, ವೈನ್ ಸೇರಿದಂತೆ ಶೇ. 20ರಷ್ಟು ತೆರಿಗೆ ಏರಿಕೆ ಆಗಲಿದೆ. ಆದರೆ, ಬಿಯರ್ ಮೇಲಿನ ಅಬಕಾರಿ ಸುಂಕ ಶೇ. 10ರಷ್ಟು ಮಾತ್ರ ಹೆಚ್ಚಳ ಆಗಿದೆ.

2 – ಗ್ಯಾರಂಟಿಗಳಿಗೆ ಹಣ
ಕರ್ನಾಟಕ ಸರ್ಕಾರವು ಚುನಾವಣಾ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಘೋಷಿಸಿದ 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ಇದೀಗ ಈ ಐದು ಯೋಜನೆಗಳಿಗೆ ಸಿಎಂ ಸಿದ್ದರಾಮಯ್ಯ ಬಜೆಟ್ ನಲ್ಲಿ
5.2 ಕೋಟಿ ರೂ. ಹಣ ಇಡಲಾಗಿದೆ. ಅನ್ನ ಭಾಗ್ಯ(Anna Bhagya), ಗೃಹ ಜ್ಯೋತಿ(Gruha Jyoti), ಗೃಹ ಲಕ್ಷ್ಮಿ(Gruha Lakshmi), ಗೃಹ ಶಕ್ತಿ(Gruha Shakti) ಮತ್ತು ಯುವ ನಿಧಿ(Yuva Nidhi)
ಸೇರಿದಂತೆ 5 ಭರವಸೆ ಯೋಜನೆಗಳಿಗೆ ವಾರ್ಷಿಕ 55,000 ರಿಂದ 60 ಸಾವಿರ ಕೋಟಿ ರೂ. ಅನುದಾನದ ಅಗತ್ಯವಿದೆ ಎಂದು ಅಂದಾಜಿಸಲಾಗಿದೆ. ಆರ್ಥಿಕ ವರ್ಷಕ್ಕೆ ಎಂಟು ತಿಂಗಳು ಮಾತ್ರ ಬಾಕಿ
ಉಳಿದಿದ್ದು, ಸರಕಾರಕ್ಕೆ 52 ಸಾವಿರ ಕೋಟಿ (Budget Top Six Highlights) ರೂ. ಮೀಸಲಿಡಲಾಗಿದೆ.

3 – ಮೆಟ್ರೋ, ಸಬರ್ಬನ್ ರೈಲು, ರಸ್ತೆಗೆ ಅನುದಾನ
ಸಂಚಾರ ದಟ್ಟಣೆ ನಿವಾರಣೆಗಾಗಿ ಬೆಂಗಳೂರು ನಗರದಲ್ಲಿ ನಮ್ಮ ಮೆಟ್ರೋ (Namma Metro) ಹಾಗೂ ಬೆಂಗಳೂರು ಉಪನಗರ ರೈಲು ಯೋಜನೆ ಜಾರಿಗೊಳಿಸಲು 30,000 ಕೋಟಿ ರೂ.ಗಳಿಗೂ ಹೆಚ್ಚಿನ
ಅಂದಾಜು ವೆಚ್ಚದಲ್ಲಿ (Budget Top Six Highlights) ತೀರ್ಮಾನಿಸಲಾಗಿದೆ.
- 2024ರ ಅಂತ್ಯದ ವೇಳೆಗೆ ಕೆಂಗೇರಿಯಿಂದ (Kengeri) ಚಲ್ಲಘಟ್ಟದವರೆಗೆ, ಬೈಯಪ್ಪನಹಳ್ಳಿಯಿಂದ ಕೃಷ್ಣರಾಜಪುರದವರೆಗೆ (K.R Puram), ಆರ್.ವಿ ರಸ್ತೆಯಿಂದ (R.V Road) ಬೊಮ್ಮಸಂದ್ರದವರೆಗೆ ಮತ್ತು ನಾಗಸಂದ್ರದಿಂದ ಮಾದಾವರದವರೆಗೆ, ಒಟ್ಟು 27 ಕಿ.ಮೀ.ಗಳ ನೂತನ ಮೆಟ್ರೋ ರೈಲು ಮಾರ್ಗ ಪ್ರಾರಂಭ ಮಾಡಲು ತೀರ್ಮಾನಿಸಲಾಗಿದೆ.
- 2026ರಲ್ಲಿ ಏರ್ಪೋರ್ಟ್ (Airport) ಲೈನ್ ಕಾರ್ಯಾರಂಭ ಆಗುವ ಸಾಧ್ಯತೆ ಇದೆ.
- ಬೆಂಗಳೂರು ಉಪನಗರ ರೈಲು ಯೋಜನೆಗೆ ರಾಜ್ಯ ಸರ್ಕಾರದಿಂದ 1,000 ಕೋಟಿ ರೂ. ಪ್ರಸ್ತುತ ಸಾಲಿನಲ್ಲಿ ಬಿಡುಗಡೆ ಮಾಡಲು ತೀರ್ಮಾನಿಸಲಾಗಿದೆ.
- ಸರ್. ಎಂ. ವಿಶ್ವೇಶ್ವರಯ್ಯ ಟರ್ಮಿನಲ್ (Sir M Vishweshwaraiah) ತಲುಪಲು ಹೊಸ ಮೇಲೇತುವೆ ನಿರ್ಮಾಣವನ್ನು ಬೈಯ್ಯಪ್ಪನಹಳ್ಳಿ ಪ್ರದೇಶದಲ್ಲಿ ಆಗಲಿದೆ
- ಬೆಂಗಳೂರು ನಗರದಲ್ಲಿ 100 ಕಿ.ಮೀ. ಉದ್ದದ ಮುಖ್ಯ ರಸ್ತೆಗಳನ್ನು 800 ಕೋಟಿ ರೂ. ವೆಚ್ಚದಲ್ಲಿ ವೈಟ್ ಟಾಪ್ ರಸ್ತೆಗಳಾಗಿ ಅಭಿವೃದ್ಧಿ ಮಾಡಲು ತೀರ್ಮಾನಿಸಲಾಗಿದೆ.

4 – ಬೆಂಗಳೂರಿಗೆ ಭರಪೂರ ಅನುದಾನ
ಬೆಂಗಳೂರು ನಗರದ ಮೂಲಸೌಕರ್ಯ ಅಭಿವೃದ್ಧಿಗೆ ಅಮೃತ ನಗರೋತ್ಥಾನ, ಹೈ ಡೆನ್ಸಿಟಿ ಕಾರಿಡಾರ್, ವೈಟ್ ಟಾಪ್ ರಸ್ತೆ, ತ್ಯಾಜ್ಯ ನಿರ್ವಹಣೆ, ರಾಜ ಕಾಲುವೆ(Raja Kaluve) ಸ್ವಚ್ಛತೆ ಮತ್ತು ಮರುಸ್ಥಾಪನೆ,
ರಸ್ತೆ ಗುಂಡಿ ಮುಚ್ಚುವಿಕೆ ಸೇರಿದಂತೆ ಹಲವು ಯೋಜನೆಗಳಿಗೆ 12,000 ಕೋಟಿ ರೂ. ಹಣವನ್ನು ಖರ್ಚು ಮಾಡಲು ನಿರ್ಧರಿಸಿದೆ. ಬರ್ಹತ್ ಬೆಂಗಳೂರು ಮಹಾನಗರ ವ್ಯಾಪ್ತಿಯಲ್ಲಿ(BBMP) 20 ತ್ಯಾಜ್ಯ
ಇದನ್ನು ಓದಿ: ಮೇಕೆದಾಟು ಯೋಜನೆಗೆ ಅವಕಾಶ ನೀಡುವುದಿಲ್ಲ, ಮತ್ತೆ ಕ್ಯಾತೆ ತೆಗೆದ ತಮಿಳುನಾಡು:
ನೀರು ಸಂಸ್ಕರಣಾ ಘಟಕಗಳನ್ನು ನವೀಕರಿಸಲು 1,411 ಕೋಟಿ ರೂ.ಮೊತ್ತದ ಯೋಜನೆಗಳಿಗೆ BWSSB ಸಂಪನ್ಮೂಲಗಳಿಂದ ಕಾರ್ಯಗತಗೊಳಿಸಲು ಹಲವಾರು ಯೋಜನೆಗಳನ್ನು ಅನುಮೋದಿಸಲಾಗಿದೆ.
ರಾಜ ಕಾಲುವೆ ಒತ್ತುವರಿಗಳನ್ನು ಆದ್ಯತೆ ಮೇಲೆ ತೆರವು ಮಾಡಲು ತೀರ್ಮಾನಿಸಲಾಗಿದೆ. 97 ಲಕ್ಷ ಟನ್ನಷ್ಟು ಬೆಂಗಳೂರು ನಗರದ ಹಳೆ ತ್ಯಾಜ್ಯವನ್ನು ಸಂಸ್ಕರಣೆ ಮಾಡಿ ಈ ಭೂಮಿಯನ್ನು
ಉದ್ಯಾನವನಗಳಾಗಿ ಪರಿವರ್ತನೆ ಮಾಡಲು (Budget Top Six Highlights) ತೀರ್ಮಾನಿಸಲಾಗಿದೆ.

- ಆರೋಗ್ಯ ಕ್ಷೇತ್ರಕ್ಕೆ ಜಿಲ್ಲಾವಾರು ಕೊಡುಗೆ
ಕೊಪ್ಪಳ(Koppal), ಕಾರವಾರ (Karawar)ಮತ್ತು ಕೊಡಗು(Kodagu) ಜಿಲ್ಲೆಗಳ ಜಿಲ್ಲಾ ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಆದರೆ, ಉತ್ತರ ಕನ್ನಡದಲ್ಲಿ (Uttara Kannada) ಸ್ವ
ತಂತ್ರ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳ ಅಗತ್ಯಕ್ಕೆ ಇನ್ನೂ ಮನ್ನಣೆ ಸಿಕ್ಕಿಲ್ಲ. ಮೈಸೂರು, ಬೆಳಗಾವಿ ಮತ್ತು ಕಲಬುರಗಿ ಜಿಲ್ಲೆಗಳಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳನ್ನು ನಿರ್ಮಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಡಿಕೆಶಿ(D.K Shiva Kumar) ಅವರ ತವರು ಕ್ಷೇತ್ರ ಕನಕಪುರ ತಾಲ್ಲೂಕಿನಲ್ಲಿ ಹೊಸ ವೈದ್ಯಕೀಯ ಶಾಲೆ ಸ್ಥಾಪಿಸಲು ತೀರ್ಮಾನ ಕೈಗೊಳ್ಳಲಾಗಿದೆ. ಕಲಬುರಗಿಯಲ್ಲಿ ತಾಯಿ ಮತ್ತು ಮಗುವಿನ ಆಸ್ಪತ್ರೆ
ನಿರ್ಮಾಣಕ್ಕೆ 70 ಕೋಟಿ ರೂ. ಖರ್ಚು ಮಾಡಲು (Budget Top Six Highlights) ಸರಕಾರ ಸಿದ್ಧವಿದೆ.

6 – ಕೃಷಿ – ಖುಷಿ
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಎಪಿಎಂಸಿ(APMC) ಕಾಯ್ದೆ ರಾಜ್ಯದಲ್ಲೂ ಜಾರಿಯಾಗಿದೆ.ರಾಜ್ಯ ಕಾಂಗ್ರೆಸ್ ಸರ್ಕಾರ ಈ ಕಾಯ್ದೆಯನ್ನ ರಾಜ್ಯದಲ್ಲಿ ವಾಪಸ್ ಪಡೆಯಲು ನಿರ್ಧಾರ ಮಾಡಿದೆ.
ರಾಮನಗರ(Ramanagara), ಶಿಡ್ಲಘಟ್ಟದಲ್ಲಿ(Shidla Ghatta) ರೇಷ್ಮೆ ಮಾರುಕಟ್ಟೆ ಸ್ಥಾಪಿಸಲು ನಿರ್ಧರಿಸಲಾಗಿದೆ. “ಕೃಷಿ ಭಾಗ್ಯ ಯೋಜನೆ”ಯನ್ನು ಜಾರಿಗೊಳಿಸಲಾಗಿದೆ ಮತ್ತು ನರೇಗಾ ಅಡಿಯಲ್ಲಿ
1 ಸಾವಿರ ಕೋಟಿ ರೂ. ನಿಧಿ ಸಂಗ್ರಹಿಸಲು ನಿರ್ಧರಿಸಿದೆ.ಇನ್ನು 10 ಕೋಟಿ ರೂ.ರೈತ ಉತ್ಪನ್ನಗಳ ಏಕೀಕೃತ ಬ್ರಾಂಡಿಂಗ್ ವ್ಯವಸ್ಥೆಗೆ ಮೀಸಲು ಇಡಲಾಗಿದೆ. ವೀಳ್ಯದೆಲೆ, ಕಾಫಿ ಟೂರಿಸಂ, ,
ಮೈಸೂರು ಮಲ್ಲಿಗೆಗೆ ಬ್ರಾಂಡಿಂಗ್ ಮಾಡಲು ನಿರ್ಧರಿಸಲಾಗಿದೆ.10 ಸಾವಿರ ರೂ. ಪರಿಹಾರವನ್ನು ಹಸು, ಎತ್ತು, ಎಮ್ಮೆ ಮೃತಪಟ್ಟರೆ ನೀಡುವ ‘ಅನುಗ್ರಹ ಯೋಜನೆ’ ಮರು ಜಾರಿ ಮಾಡಲು ಸರ್ಕಾರ ಮುಂದಾಗಿದೆ.
ರಶ್ಮಿತಾ ಅನೀಶ್