Jailer: ಜೈಲರ್’ ಸಿನಿಮಾವು ಬಾಕ್ಸ್ ಆಫೀಸ್‌ನಲ್ಲಿ (Box Office) ಭರ್ಜರಿ ಕಮಾಲು ಮಾಡಿದ್ದು, ರಜನಿಕಾಂತ್ (jailer first day collection), ಶಿವರಾಜ್‌ಕುಮಾರ್, ತಮನ್ನಾ
(Tamanna), ರಮ್ಯಾಕೃಷ್ಣ, ಮೋಹನ್‌ಲಾಲ್ (Mohanlal), ಜಾಕಿಶ್ರಾಫ್ ಹಾಗೂ ವಸಂತ್ ರವಿ ಮುಂತಾದವರು ನಟಿಸಿದ್ದಾರೆ. ಈ ಸಿನಿಮಾವು ಕರ್ನಾಟಕದಲ್ಲೂ ದಾಖಲೆ
ಪ್ರಮಾಣದ ಗಳಿಕೆ (jailer first day collection) ಗಳಿಸಿದೆ.

ಆಗಸ್ಟ್ (August) 10ರಂದು ವಿಶ್ವಾದ್ಯಂತ ಸೂಪರ್ ಸ್ಟಾರ್ (Super Star) ರಜನಿಕಾಂತ್ ಅಭಿನಯದ ಜೈಲರ್ (Jailer) ಸಿನಿಮಾವು ಭರ್ಜರಿತೆರೆಕಂಡಿತ್ತು. ಈ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ
ಸಿಕ್ಕರೂ ಅಭಿಮಾನಿಗಳು ಸಂಭ್ರಮದಿಂದ ವೀಕ್ಷಣೆ ಮಾಡುತ್ತಿದ್ದಾರೆ. ಎಲ್ಲರ ಕಣ್ಣು ಈ ಸಿನಿಮಾ ಮೊದಲ ದಿನ ಎಷ್ಟು ಕಲೆಕ್ಷನ್ (Collection) ಮಾಡಲಿದೆ ಎಂಬುದರ ಮೇಲಿತ್ತು. ಇದೀಗ ಕೆಲವು ಮೂಲಗಳ
ಪ್ರಕಾರ ಜೈಲರ್ ಸಿನಿಮಾವು ದಾಖಲೆ ಪ್ರಮಾಣದ (jailer first day collection) ಕಲೆಕ್ಷನ್ ಮಾಡಿದೆ .
ತಮಿಳುನಾಡಿನಲ್ಲಿ ಭರ್ಜರಿ ಕಲೆಕ್ಷನ್
ವಿಶ್ವದಾದ್ಯಂತ ಜೈಲರ್ ಸಿನಿಮಾವು ಬಹುತೇಕ ಕಡೆ ಹೌಸ್‌ಫುಲ್ (Houseful) ಪ್ರದರ್ಶನ ಕಂಡಿದ್ದು, ತಮಿಳು ಜೊತೆಗೆ ತೆಲುಗು, ಕನ್ನಡ, ಹಿಂದಿ ಭಾಷೆಗಳಿಗೆ ಡಬ್ (Dub) ಆಗಿ ತೆರೆ ಮೇಲೆ ಬಂದಿದೆ.
ಆದರೆ ಬಹುತೇಕ ಕಡೆ ತಮಿಳು ವರ್ಷನ್ನೇ ಜಾಸ್ತಿ ರಿಲೀಸ್ (Release) ಆಗಿದ್ದು, ಈ ಸಿನಿಮಾವು ಮೊದಲ ದಿನ ತಮಿಳುನಾಡಿನಲ್ಲಿ ಬರೋಬ್ಬರಿ 24 ಕೋಟಿ ರೂ. ಕಲೆಕ್ಷನ್ ಮಾಡಿದೆ. ಕರ್ನಾಟಕ, ತೆಲುಗು
ರಾಜ್ಯಗಳು ಮತ್ತು ಕೇರಳದಿಂದ (Kerala) 26 ಕೋಟಿ ರೂ. ಕಲೆಕ್ಷನ್ ಆಗಿದೆ. ಇನ್ನುಳಿದಂತೆ ಭಾರತದ ಇತರೆ ಭಾಗಗಳು ಮತ್ತು ವಿದೇಶದಿಂದ 22 ಕೋಟಿ ರೂ. ಹರಿದುಬಂದಿದೆ. ಒಟ್ಟು 72 ಕೋಟಿ ರೂ.ಗಳಿಗೂ
ಅಧಿಕ ಕಲೆಕ್ಷನ್ ಮೊದಲದಿನವೇ ದೊರಕಿದೆ.

ಕರ್ನಾಟಕದಲ್ಲಿ ಜೈಲರ್ ಗಳಿಕೆ
ಕರ್ನಾಟಕದಲ್ಲಿ (Karnataka) ಜೈಲರ್ ಚಿತ್ರವು ದಾಖಲೆ ಮಾಡಿದ್ದು, ಮೊದಲ ದಿನವೇ 11.85 ಕೋಟಿ ರೂ. ಕಲೆಕ್ಷನ್ ಆಗಿದೆ. ಇದು ಕರ್ನಾಟಕದಲ್ಲಿ ತೆರೆಕಂಡ ಈವರೆಗಿನ ತಮಿಳು ಸಿನಿಮಾಗಳಲ್ಲೇ
ಅಧಿಕ ಗಳಿಕೆ ಆಗಿದೆ. ಈ ಹಿಂದೆ ತೆರೆಕಂಡಿದ್ದ ರಜನಿಕಾಂತ್ ಅವರ ‘ಕಬಾಲಿ‘ (Kabaali) ಸಿನಿಮಾವು ಮೊದಲ ದಿನ ಕರ್ನಾಟಕದಲ್ಲಿ 10.77 ಕೋಟಿ ರೂಪಾಯಿ ಗಳಿಸಿತ್ತು. ಅದು ಇಲ್ಲಿಯವರೆಗಿನ ದಾಖಲೆ
ಆಗಿದ್ದು, ಇದೀಗ ಆ ರೆಕಾರ್ಡ್ (Record) ಅನ್ನು ರಜನಿಕಾಂತ್ ಅವರೇ ಬ್ರೇಕ್ ಮಾಡಿದ್ದಾರೆ. ಬೆಂಗಳೂರಿನಲ್ಲಿ (Bengaluru) 1000+ ಶೋಗಳು ಮೊದಲ ದಿನವೇ ಜೈಲರ್ ಸಿನಿಮಾಗೆ ದಾಖಲೆ ಸಿಕ್ಕಿದೆ.
2023ರಲ್ಲಿ ತಮಿಳುನಾಡಿನಲ್ಲಿ (Tamilnadu) ಭರ್ಜರಿ ಓಪನಿಂಗ್ ಪಡೆದ ಸಿನಿಮಾಗಳಲ್ಲಿ ‘ಜೈಲರ್’ಗೆ ಮೊದಲ ಸ್ಥಾನ ದೊರಕಿದೆ. ಇನ್ನು ಮೊದಲ ದಿನ ಅತೀ ಹೆಚ್ಚು ಗಳಿಕೆ ಮಾಡಿದ ಸಿನಿಮಾಗಳ ಪಟ್ಟಿಯಲ್ಲಿ
ಜೈಲರ್ ಗೆ ತಮಿಳುನಾಡಿನಲ್ಲಿ ಮೂರನೇ ಸ್ಥಾನಬಂದಿದೆ. ವಿದೇಶದಲ್ಲಿ ಅದ್ಧೂರಿ ಓಪನಿಂಗ್ (Opening) ಪಡೆದ ಸಿನಿಮಾಗಳ ಸಾಲಿನಲ್ಲಿ ಜೈಲರ್‌ಗೆ 2023ರಲ್ಲಿ ಮೊದಲ ಸ್ಥಾನ ಪಡೆದಿದೆ. ಇನ್ನು ಹೊರ
ರಾಜ್ಯಗಳಲ್ಲೂ ದೊಡ್ಡ ಮಟ್ಟದಲ್ಲಿ ಓಪನಿಂಗ್ ಪಡೆಡಿರುವ ಜೈಲರ್ ಸಿನಿಮಾ (jailer first day collection) ಎಂದು ಹೇಳಲಾಗಿದೆ.
ಭವ್ಯಶ್ರೀ ಆರ್.ಜೆ