ಭಾರತೀಯ ಚಿತ್ರರಂಗದ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ ಹಾಲಿವುಡ್‌ ನಿರ್ದೇಶಕ ಜೇಮ್ಸ್‌ ಕ್ಯಾಮರೂನ್‌

USA : ಭಾರತೀಯ ಚಿತ್ರಗಳು ಕುಟುಂಬ, ಸ್ನೇಹ ಮತ್ತು ವೈಯಕ್ತಿಕ ಕರ್ತವ್ಯಗಳನ್ನು ಆಧಾರಿಸಿ, ಚಿತ್ರಿಸುವ ರೀತಿ ನಿಜಕ್ಕೂ ಅದ್ಭುತ ಎಂದು ಹಾಲಿವುಡ್‌(Hollywood) ಚಿತ್ರರಂಗದ ಹೆಸರಾಂತ ನಿರ್ದೇಶಕ ಜೇಮ್ಸ್‌ ಕ್ಯಾಮರೂನ್‌(James Cameron) ಅವರು ಭಾರತೀಯ ಚಿತ್ರರಂಗದ ಬಗ್ಗೆ ಮೆಚ್ಚುಗೆಯನ್ನು(JamesCameron Appreciated Indian Film) ವ್ಯಕ್ತಪಡಿಸಿದ್ದಾರೆ.

ಭಾರತ ಚಿತ್ರಗಳು ಮತ್ತು ನಮ್ಮ ಚಲನಚಿತ್ರಗಳಲ್ಲಿ ಕಂಡುಬರುವುದು ಒಂದೇ ವ್ಯತ್ಯಾಸ ಅದು ಏನಂದರೆ ನಮ್ಮ ಚಿತ್ರಗಳಲ್ಲಿ ಹಾಡು ಮತ್ತು ಡ್ಯಾನ್ಸ್‌ ಇರುವುದಿಲ್ಲ,

ಅವರಲ್ಲಿ ಇರುತ್ತದೆ ಎಂದು ಹೇಳುವ ಮುಖೇನ ಭಾರತೀಯ ಚಿತ್ರಗಳ ಮೇಲೆ ತಮಗಿರುವ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ ನಿರ್ದೇಶಕ ಜೇಮ್ಸ್ ಕ್ಯಾಮರೂನ್.

ಹಾಲಿವುಡ್ ಚಲನಚಿತ್ರ ನಿರ್ಮಾಪಕ ಜೇಮ್ಸ್ ಕ್ಯಾಮರೂನ್ ಅವರು ಭಾರತೀಯ ಚಲನಚಿತ್ರಗಳು ಕುಟುಂಬ, ಸ್ನೇಹಿತರು ಮತ್ತು ಸುತ್ತಮುತ್ತಲಿನ ಜನರ ವೈಯಕ್ತಿಕ ಕರ್ತವ್ಯವನ್ನು(JamesCameron Appreciated Indian Film) ಹೇಗೆ ಕೇಂದ್ರೀಕರಿಸುತ್ತವೆ ಎಂಬುದನ್ನು ನಾನು ನೋಡಿ ಆನಂದಿಸುತ್ತೇನೆ ಎಂದು ಹೇಳಿದರು.

ಈ ಮಧ್ಯೆ ಭಾರತೀಯ ಚಿತ್ರರಂಗ ಕಂಡ ಅದ್ಭುತ ನಿರ್ದೇಶಕ ಎಸ್‌.ಎಸ್ ರಾಜಮೌಳಿ(S S Rajamauli) ಅವರೊಂದಿಗಿನ ಸಂಭಾಷಣೆ ಹಾಗೂ ಸಮಯವನ್ನು ನೆನಪಿಸಿಕೊಂಡು,

ಮಾತನಾಡಿದ ಅವರು, ಆರ್‌ಆರ್‌ಆರ್(RRR) ಚಿತ್ರವನ್ನು ನಾನು ವೀಕ್ಷಿಸಿದೆ, ಆ ಬಳಿಕ ಭಾರತೀಯ ಚಲನಚಿತ್ರಗಳ ಬಗ್ಗೆ ನನಗಿದ್ದ ಅಭಿರುಚಿ ಬಗ್ಗೆ ಹೆಚ್ಚು ವಿಶ್ಲೇಷಿಸುವಂತೆ ಮಾಡಿತು ಎಂದು ಹೇಳಿಕೊಂಡರು.

ಜೇಮ್ಸ್‌ ಕ್ಯಾಮರೂನ್‌ ಅವರ ಐಕಾನಿಕ್ ರೋಮ್ಯಾಂಟಿಕ್ ಚಿತ್ರ ಟೈಟಾನಿಕ್(Titanic) ಬಿಡುಗಡೆಗೊಂಡು 25 ವರ್ಷಗಳನ್ನು ಪೊರೈಸಿತು. ಈ ಸಂತಸವನ್ನು ಆಚರಿಸಿದ ಚಿತ್ರತಂಡ, ಟೈಟಾನಿಕ್‌ ಚಿತ್ರವನ್ನು

ಇದೀಗ ವಿಶ್ವಾದ್ಯಂತ ಮರು-ಬಿಡುಗಡೆ ಮಾಡಿದ ಮತ್ತು ಭಾರತದ ಹಲವಾರು ಚಿತ್ರಮಂದಿರಗಳು ಮರು-ಬಿಡುಗಡೆಗೊಳಿಸಿದೆ.

ಟೈಟಾನಿಕ್‌ ಚಿತ್ರ ಭಾರತದ ಹಲವು ಚಿತ್ರಮಂದಿರಗಳಲ್ಲಿ ಮರು ಬಿಡುಗಡೆಯಾಗಿದ್ದು, ಉತ್ತಮ ಪ್ರದರ್ಶನವನ್ನು ಕಾಣುತ್ತಿದೆ ಎಂದು ಹೇಳಲಾಗಿದೆ.

ತಮ್ಮ ಚಲನಚಿತ್ರಗಳು ಮತ್ತು ಭಾರತದಲ್ಲಿ ತಯಾರಾದ ಚಿತ್ರಗಳ ನಡುವಿನ ಸಾಮ್ಯತೆಯ ಬಗ್ಗೆ ಪ್ರಶ್ನೆಯನ್ನು ಕೇಳಿದಾಗ, ಜೇಮ್ಸ್ ಅವರು ಈ ರೀತಿ ಉತ್ತರಿಸಿದ್ದಾರೆ.

ಒಂದೇ ವ್ಯತ್ಯಾಸವೆಂದರೆ ಅವರ ಚಲನಚಿತ್ರಗಳ(Cinema) ಕೊನೆಯಲ್ಲಿ ಹಾಡು ಮತ್ತು ನೃತ್ಯಗಳು ಇರುತ್ತದೆ. ಆದ್ರೆ, ನಮ್ಮ ಚಿತ್ರಗಳಲ್ಲಿ ಅದು ಇರುವುದಿಲ್ಲ.

ನಂತರ ವಿಮರ್ಶಕರ ಆಯ್ಕೆಯ ಪ್ರಶಸ್ತಿ ಸಮಾರಂಭದಲ್ಲಿ ಎಸ್‌.ಎಸ್ ರಾಜಮೌಳಿ ಅವರೊಂದಿಗೆ ಮಾತನಾಡಿದ್ದನ್ನು ನೆನಪಿಸಿಕೊಂಡ ಅವರು,

ರಾಜಮೌಳಿ ಅವರ ಚಿತ್ರದಲ್ಲಿ ರಚಿಸಿದ ಭೌತಿಕ ನಿರ್ಮಾಣ, ಸೌಂದರ್ಯ ಮತ್ತು ಚಮತ್ಕಾರವನ್ನು ನಾನು ಎಷ್ಟು ಆನಂದಿಸಿದೆ,

ಆದರೆ ಉದ್ವೇಗ, ಆಕ್ಷನ್ ಮತ್ತು ಎಲ್ಲಾ ವಿಷಯಗಳನ್ನು ನಾನು ಇಷ್ಟಪಟ್ಟಿದ್ದೇನೆ. ಆ ಚಿತ್ರವು ಭಾರತೀಯ ಚಲನಚಿತ್ರೋದ್ಯಮದ ಬಗ್ಗೆ ದೊಡ್ಡ ಮಟ್ಟದಲ್ಲಿ

ಯೋಚಿಸುವಂತೆ ಮಾಡಿತು ಮತ್ತು ಆ ಕಾರಣಗಳಿಗಾಗಿ ನಾನು ಭಾರತೀಯ ಚಲನಚಿತ್ರಗಳನ್ನು ತುಂಬ ಆನಂದಿಸುತ್ತೇನೆ.

ಭಾರತೀಯ ಚಿತ್ರಗಳು ಕುಟುಂಬ, ಸ್ನೇಹ, ನಿಮ್ಮ ಸುತ್ತಲಿನ ಜನರ ಕಡೆಗೆ ವೈಯಕ್ತಿಕ ಕರ್ತವ್ಯ ಮತ್ತು ಎಲ್ಲಾ ವಿಷಯಗಳ ಮೇಲೆ ಒತ್ತು ನೀಡಿ ಚಿತ್ರಿಸುವ ಪರಿ ಅದ್ಭುತ ಎಂದು ಹೇಳಿದ್ದಾರೆ.

Exit mobile version