ಹಿಮದಲ್ಲಿ ಕ್ರಿಕೆಟ್‌ ! ಕಾಶ್ಮೀರ ಗಡಿಯಲ್ಲೊಂದು ವಿನೂತನ ಪ್ರಯತ್ನ

cricket jammu

ಶ್ರೀನಗರ ಜ 20 :  ದೇಶಾದ್ಯಂತ ಇಗಾಗಲೇ ಚಳಿಗಾಲ ಪ್ರಾರಂಭವಾಗಿದ್ದು, ಸಂಜೆಯಾಗುತ್ತಲೇ ಮನೆ ಸೇರಿಕೊಳ್ಳುವವರ ಸಂಖ್ಯೆ ಹೆಚ್ಚಾಗಿದೆ. ಆದರೆ ಜಮ್ಮು ಮತ್ತು ಕಾಶ್ಮೀರದಲ್ಲಿ ಚಳಿಗಾಲದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸಲು ಮತ್ತು ಈ ನಿಟ್ಟಿನಲ್ಲಿ ಜಮ್ಮು ಮತ್ತು ಕಾಶ್ಮೀರದ ಗಡಿ ಪ್ರದೇಶದಲ್ಲಿ ವಾಸಿಸುವ ಗುರೇಜ್‌ನ ಜನರು ಹೆಪ್ಪುಗಟ್ಟುವ ಹಿಮ ಮೈದಾನದಲ್ಲಿ  ಕ್ರಿಕೆಟ್ ಪಂದ್ಯಾವಳಿಗಳನ್ನು ಆಯೋಜಿಸಿದ್ದಾರೆ.

ಮೈ ಕೊರೆಯುವ ಹಿಮದ ಮಧ್ಯದಲ್ಲೇ ಗುರೆಜ್‌ನ ಗಡಿ ಕಣಿವೆಯ ಮಾರ್ಕೂಟ್, ಅಚುರಾ ಮತ್ತು ಬಾಗ್ಟೋರ್ ಸೇರಿದಂತೆ ತಪ್ಪಲಿನ ಹಳ್ಳಿಗಳ ನಿವಾಸಿಗಳು ಹಿಮದಿಂದ ಆವೃತವಾದ ಮೈದಾನದಲ್ಲಿ ಹಿಮ ಕ್ರಿಕೆಟ್ ಪಂದ್ಯಾವಳಿಗಳನ್ನು ಆಯೋಜಿಸಿದ್ದಾರೆ.

ಹಲವು ವರ್ಷಗಳಿಂದ ಹೆಪ್ಪುಗಟ್ಟಿದ ಮೈದಾನದಲ್ಲಿನ ಕ್ರಿಕೆಟ್ ಆಡುವುದು ಗುರೆಜ್‌ನ ನಿವಾಸಿಗಳ ಜನಪ್ರಿಯ ಕ್ರೀಡೆಯಾಗಿದೆ. ಏಕೆಂದರೆ ಈ ಸ್ಥಳವು ಚಳಿಗಾಲದ ಕ್ರೀಡೆಗಳ ಕೇಂದ್ರವಾಗುವ ಸಾಮರ್ಥ್ಯವನ್ನು ಹೊಂದಿದೆ. ಕಣಿವೆಯ ಇತರ ಭಾಗಗಳಲ್ಲಿ ವಿಭಿನ್ನ ಚಳಿಗಾಲದ ಕ್ರೀಡಾಕೂಟಗಳನ್ನು ಆಯೋಜಿಸಲಾಗುತ್ತದೆ. ಆದರೆ ಗುರೆಜ್‌ನಲ್ಲಿ ಇದೇ ರೀತಿಯ ಕ್ರೀಡೆಗಳನ್ನು  ಆಯೋಜಿಸಲಾಗುತ್ತಿಲ್ಲ, ಹೀಗಾಗು ಆಡಳಿತದ ಗಮನವನ್ನು ಸೆಳೆಯಲು ಜನರು ಕ್ರಿಕೆಟ್‌ ಆಯೋಜಿಸಿದ್ದಾರೆ. ಗುರೆಜ್ ಆಕರ್ಷಣೆಯ ಕೇಂದ್ರವಾಗಿ ಉಳಿಯಬೇಕು ಎಂಬುದು ಇವರ ಉದ್ದೇಶವಾಗಿದೆ.

ಗುರೆಜ್‌ನಲ್ಲಿ ಚಳಿಗಾಲದ ಕ್ರೀಡಾ ಚಟುವಟಿಕೆಗಳಿಗೆ ಸಾಕಷ್ಟು ಸಾಮರ್ಥ್ಯವಿರುವುದರಿಂದ ಈ ಪ್ರದೇಶದತ್ತ ಸರ್ಕಾರದ ಗಮನವನ್ನು ಸೆಳೆಯುವುದು ಈ ಪಂದ್ಯಾವಳಿ ಆಯೋಜನೆಯ ಹಿಂದಿನ ಮುಖ್ಯ ಉದ್ದೇಶ ಎಂದು ನಿವಾಸಿಗಳು ಸ್ಪಷ್ಟಪಡಿಸಿದ್ದಾರೆ.

Exit mobile version