ಚುನಾವಣಾ ಬಾಂಡ್ಗಳಿಂದ ಜೆಡಿಎಸ್ಗೆ 90 ಕೋಟಿ ದೇಣಿಗೆ: ಯಾವ ಕಂಪನಿಯಿಂದ ಎಷ್ಟು ದೇಣಿಗೆ..?

Bengaluru: ಸುಪ್ರೀಂಕೋರ್ಟ್ (Supreme Court) ಸೂಚನೆಯಂತೆ ಚುನಾವಣಾ ಬಾಂಡ್ಗಳ ಮಾಹಿತಿ ಹೊರಬಿದ್ದಿದ್ದು, ರಾಜ್ಯದ ಪ್ರಮುಖ ಪ್ರಾದೇಶಿಕ ಪಕ್ಷವಾಗಿರುವ ಜೆಡಿಎಸ್ ಚುನಾವಣಾ ಬಾಂಡ್ಗಳ ಮೂಲಕ 90 ಕೋಟಿ ರೂಪಾಯಿ ದೇಣಿಗೆ ಪಡೆದಿದೆ ಎಂದು ಮಾಹಿತಿ ಹೊರಬಿದ್ದಿದೆ. ಮೆಗಾ ಇಂಜಿನಿಯರಿಂಗ್ ಗ್ರೂಫ್ (Mega Engineering Group), ಆದಿತ್ಯ ಬಿರ್ಲಾ ಗ್ರೂಪ್, ಇನ್ಫೋಸಿಸ್, ಜೆಎಸ್ಡಬ್ಲ್ಯೂ, ಎಂಬಸ್ಸಿ ಗ್ರೂಪ್ ಜೆಡಿಎಸ್ಗೆ ಚುನಾವಣಾ ಬಾಂಡ್ ಖರೀದಿಸಿ ದೇಣಿಗೆ ನೀಡಿವೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ಇದ್ದಾಗ ಈ ಚುನಾವಣಾ ಬಾಂಡ್ಗಳನ್ನು ಖರೀದಿಸಲಾಗಿದೆ ಎನ್ನಲಾಗಿದೆ.

ಇನ್ನು ಚುನಾವಣಾ ಬಾಂಡ್ಗಳ ಮೂಲಕ ಜೆಡಿಎಸ್ಗೆ (JDS) ದೇಣಿಗೆ ನೀಡಿದ ಕಂಪನಿಗಳ ಪಟ್ಟಿಯಲ್ಲಿ ಮೆಗಾ ಇಂಜಿನಿಯರಿಂಗ್ ಗ್ರೂಪ್ ಮೊದಲ ಸ್ಥಾನದಲ್ಲಿದೆ. ಈ ಕಂಪನಿಯೊಂದೆ ಜೆಡಿಎಸ್ಗೆ 50 ಕೋಟಿ ರೂ. ದೇಣಿಗೆ ನೀಡಿದೆ. ಇನ್ನು 40 ಕೋಟಿ ರೂಪಾಯಿಯನ್ನು ಆದಿತ್ಯ ಬಿರ್ಲಾ ಗ್ರೂಪ್, ಇನ್ಫೋಸಿಸ್, ಜೆಎಸ್ಡಬ್ಲ್ಯೂ ಹಾಗೂ ಎಂಬಸ್ಸಿ ಗ್ರೂಪ್ಗಳು ನೀಡಿವೆ ಎಂದು ಚುನಾವಣಾ ಆಯೋಗ ಪ್ರಕಟಿಸಿದೆ.

ಬಿಜೆಪಿಗೆ ಹೆಚ್ಚಿನ ದೇಣಿಗೆ :
ಕೇಂದ್ರದಲ್ಲಿ ಅಧಿಕಾರದಲ್ಲಿರುವ ಹಾಗೂ ದೇಶದ ಅನೇಕ ರಾಜ್ಯಗಳಲ್ಲಿ ಅಧಿಕಾರದಲ್ಲಿರುವ ಬಿಜೆಪಿ (BJP) ಹೆಚ್ಚಿನ ದೇಣಿಗೆಯನ್ನು ಪಡೆದುಕೊಂಡಿದೆ. ಬಿಜೆಪಿಯು ಚುನಾವಣಾ ಬಾಂಡ್ಗಳ ಮೂಲಕ 6,986.5 ಕೋಟಿ ರೂಪಾಯಿ ದೇಣಿಗೆಯನ್ನು ಪಡೆದುಕೊಂಡಿದೆ. ತೃಣಮೂಲ ಕಾಂಗ್ರೆಸ್ ಪಕ್ಷವು 2ನೇ ಸ್ಥಾನದಲ್ಲಿದ್ದು, 1,397 ಕೋಟಿ ರೂ. ದೇಣಿಗೆ ಪಡೆದುಕೊಂಡಿದೆ. ಇನ್ನು ಕಾಂಗ್ರೆಸ್ ಪಕ್ಷವು , 1,334.35 ಕೋಟಿ ರೂ. ದೇಣಿಗೆ ಪಡೆಯುವ ಮೂಲಕ ಮೂರನೇ ಸ್ಥಾನದಲ್ಲಿದೆ.

ದೇಣಿಗೆ ಪಡೆದ ಪಕ್ಷಗಳ ವಿವರ :
ಬಿಜೆಪಿ – 6,986.5 ಕೋಟಿ
ಟಿಎಂಸಿ – 1,397 ಕೋಟಿ
ಕಾಂಗ್ರೆಸ್ – 1,334.35 ಕೋಟಿ
ಬಿಆರ್ಎಸ್ (BRS)1,322 ಕೋಟಿ
ಬಿಜೆಡಿ – 944.5 ಕೋಟಿ
ಪ್ರಾದೇಶಿಕ ಪಕ್ಷಗಳ ವಿವರ :
ವೈಎಸ್ಸಾರ್ ಕಾಂಗ್ರೆಸ್ – 442.8 ಕೋಟಿ ರೂ.
ಟಿಡಿಪಿ- 181.35 ಕೋಟಿ ರೂ.
ಜೆಡಿಎಸ್ – 89.50 ಕೋಟಿ ರೂ.
ಶಿವಸೇನೆ – 60.4 ಕೋಟಿ ರೂ.
ಆರ್ಜೆಡಿ (RJD)56 ಕೋಟಿ ರೂ.
ಎಸ್ಪಿ – 14.05 ಕೋಟಿ ರೂ.
ಅಕಾಲಿದಳ – 7.26 ಕೋಟಿ ರೂ.

Exit mobile version