ಹಾಸನದ ರೆಸಾರ್ಟ್‌ನಲ್ಲಿ ಶಾಸಕರ ರಕ್ಷಣೆಗೆ ಕಾರ್ಯತಂತ್ರ: ದಳಪತಿಗಳಿಗೆ ಆಪರೇಷನ್ ಹಸ್ತದ ಭಯ

Bengaluru: ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋತಿರುವ ಜೆಡಿಎಸ್‌ ಇದೀಗ ಅಳಿದುಳಿದುರುವ 19 ಶಾಸಕರನ್ನು (jds Strategy to protect mls) ರಕ್ಷಣೆ ಮಾಡುವುದು ತಲೆನೋವಾಗಿದ್ದು,

ಹಾಸನದ ರೆಸಾರ್ಟ್‌ನಲ್ಲಿ (Resort) ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ (H.D.Kumarswamy) ಅವರು, ಕಾಂಗ್ರೆಸ್ ನಾಯಕತ್ವ ನಡೆಸಲು ಮುಂದಾಗಿರುವ ಆಪರೇಷನ್ ಹಸ್ತದಿಂದ ತಮ್ಮ

ಶಾಸಕರನ್ನು ರಕ್ಷಣೆ ಮಾಡಲು (jds Strategy to protect mls) ಕಾರ್ಯತಂತ್ರ ಮಾಡುತ್ತಿದ್ದಾರೆ.

ಕುಮಾರಸ್ವಾಮಿ ಅವರು ಬಿಜೆಪಿ ಜೊತೆಗೆ ಜೆಡಿಎಸ್‌ (JDS) ಮೈತ್ರಿ ಮಾಡಿಕೊಂಡಿದ್ದು, ಪಕ್ಷವನ್ನು ಉಳಿಸುವ ನಿಟ್ಟಿನಲ್ಲಿ ಈ ಮೈತ್ರಿಯ ಅಗತ್ಯ ಇದೆ ಎಂದು ಸಮರ್ಥನೆಯನ್ನು ನೀಡಿದ್ದರು. ಜೆಡಿಎಸ್ ಶಾಸಕರಲ್ಲೇ

ಈ ಮೈತ್ರಿಗೆ ಭಿನ್ನ ಅಭಿಪ್ರಾಯವಿದ್ದು, ದೇವಗುರ್ಗ ಶಾಸಕಿ ಕರೆಮ್ಮ, ಗುರುಮಠಕಲ್‌ ಜೆಡಿಎಸ್‌ ಶಾಸಕ ಶರಣಗೌಡ ಕಂದಕೂರ ಈಗಾಗಲೇ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.

ಈ ನಡುವೆ ಕಾಂಗ್ರೆಸ್ (Congress) ಅಸಮಾಧಾನಿತ ಜೆಡಿಎಸ್ ಶಾಸಕರಿಗೆ ಬಲೆ ಬೀಸಿದ್ದು, ಇದಕ್ಕೆ ಪೂರಕ ಎಂಬಂತೆ ಹಾಲಿ ಶಾಸಕರೂ ಕಾಂಗ್ರೆಸ್ ಪಕ್ಷಕ್ಕೆ ಬರುತ್ತಾರೆ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆ

ಹಾಗೂ ಡಿಸಿಎಂ ಡಿಕೆ ಶಿವಕುಮಾರ್ (D.K.Shivakumar) ಹೇಳಿಕೆಗಳು ದಳಪತಿಗಳ ತಲೆನೋವಿಗೆ ಕಾರಣವಾಗಿದೆ. ಈ ಮೈತ್ರಿ ಕೆಲವು ಶಾಸಕರಿಗೆ ಇಷ್ಟವಿಲ್ಲದೆ ಇದ್ದರೂ, ವರಿಷ್ಠರ ಮಾತಿಗೆ ಬೆಲೆ ಕೊಟ್ಟು

ಅನಿವಾರ್ಯವಾಗಿ ಮೈತ್ರಿಗೆ ಒಪ್ಪಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಹಾಸನದ ಖಾಸಗಿ ರೆಸಾರ್ಟ್‌ನಲ್ಲಿ ಈ ಎಲ್ಲಾ ಬೆಳವಣಿಗೆಯ ಹಿನ್ನೆಲೆಯಲ್ಲಿ ಜೆಡಿಎಸ್ ಶಾಸಕರ ಸಭೆಯನ್ನು ಎಚ್‌ಡಿ ಕುಮಾರಸ್ವಾಮಿ ನಡೆಸುತ್ತಿದ್ದು, ಸಭೆಗೆ 19 ಶಾಸಕರ ಪೈಕಿ 18 ಶಾಸಕರು ಮಾತ್ರ

ಹಾಜರಾಗಿದ್ದಾರೆ. ಮೈತ್ರಿ ಹಿನ್ನೆಲೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದ ಗುರುಮಠಕಲ್‌ ಜೆಡಿಎಸ್‌ ಶಾಸಕ ಶರಣಗೌಡ ಕಂದಕೂರ ಅವರು ಗೈರಾಗಿದ್ದಾರೆ. ಸಹಜವಾಗಿ ಅವರ ಗೈರು ಕುತೂಹಲಕ್ಕೆ ಕಾರಣವಾಗಿದೆ.

ಇದನ್ನು ಓದಿ: ಸತೀಶ್ ಜಾರಕಿಹೊಳಿ ಜತೆ ಸೀಕ್ರೆಟ್ ಮೀಟಿಂಗ್: ​ಮಾತುಕತೆ ಬಳಿಕ ದೆಹಲಿಗೆ ಡಿಕೆಶಿ

Exit mobile version