ಜೆಇಇ ಫಲಿತಾಂಶ ಪ್ರಕಟ 18 ಮಂದಿಗೆ ಟಾಪ್‌ ರ್ಯಾಂಕ್

ನವದೆಹಲಿ ಸೆ 15 : 2021ನೇ ಸಾಲಿನ ಜೆಇಇ ಫಲಿತಾಂಶ ಪ್ರಕಟವಾಗಿದ್ದು 18 ಮಂದಿ ಟಾಪ್ ರ್ಯಾಂಕ್ ಪಡೆದಿದ್ದು,44 ಅಭ್ಯರ್ಥಿಗಳು ಶೇ.100 ಅಂಕಗಳನ್ನು ಗಳಿಸಿದ್ದಾರೆ.
ಈ ಪರೀಕ್ಷೆಯನ್ನು ಒಟ್ಟು 13 ಭಾಷೆಗಳಲ್ಲಿ ನಡೆಸಲಾಯಿತು. ಇಂಗ್ಲಿಷ್, ಹಿಂದಿ, ಗುಜರಾತಿ, ಅಸ್ಸಾಮೆ, ಬೆಂಗಾಲಿ,ಕನ್ನಡ, ಮಲಯಾಳಂ, ಮರಾಠಿ, ಒಡಿಯಾ, ಪಂಜಾಬಿ, ತಮಿಳು, ತೆಲುಗು ಹಾಗೂ ಉರ್ದುವಿನಲ್ಲಿ ಪರೀಕ್ಷೆ ನಡೆಯಿತು.ಈ ವರ್ಷ ಜೆಇಇ ಮೇನ್‌ 2021 ಪರೀಕ್ಷೆಯನ್ನು ನಾಲ್ಕು ಬಾರಿ ನಡೆಸಲಾಗಿದ್ದು, ಅಭ್ಯರ್ಥಿಗಳಿಗೆ ನಾಲ್ಕು ಬಾರಿ ಅಥವಾ ಅವರು ಇಚ್ಛಿಸಿದಷ್ಟು ಅವಕಾಶಗಳಿಗೆ ಭಾಗವಹಿಸುವ ಅವಕಾಶ ನೀಡಲಾಗಿತ್ತು. ಈ ವರ್ಷ ಸುಮಾರು 9.34 ಲಕ್ಷ ವಿದ್ಯಾರ್ಥಿಗಳು ವಿವಿಧ ಸೆಷನ್‌ನಲ್ಲಿ ಜೆಇಇ ಮುಖ್ಯ ಪರೀಕ್ಷೆ ಬರೆದಿದ್ದರು.

ಈ ಪರೀಕ್ಷೆಯಲ್ಲಿ ಕರ್ನಾಟಕದ ಗೌರವ್ ದಾಸ್,ಬಿಹಾರದ ವೈಭವ್ ವಿಶಾಲ್, ಆಂಧ್ರಪ್ರದೇಶದ ದುಗ್ಗಿನೇನಿ ವೆಂಕಟ ಪನೀಶ್, ರಾಜಸ್ಥಾನದ ಸಿದ್ಧಾಂತ್ ಮುಖರ್ಜಿ, ಅಂಶುಲ್ ವರ್ಮಾ ಹಾಗೂ ಮೃದುಲ್ ಅಗರ್ವಾಲ್, ದೆಹಲಿಯ ರುಚಿರ್ ಬನ್ಸಾಲ್ ಹಾಗೂ ಕಾವ್ಯಾ ಚೋಪ್ರಾ, ಉತ್ತರ ಪ್ರದೇಶದ ಅಮಯ್ಯ ಸಿಂಘಾಲ್ ಹಾಗೂ ಪಾಲ್ ಅಗರ್ವಾಲ್, ತೆಲಂಗಾಣದ ಕೊಮ್ಮಾ ಶರಣ್ಯ ಮತ್ತು ಜೋಯ್ಸುಲಾ ವೆಂಕಟ ಆದಿತ್ಯ, ಆಂಧ್ರಪ್ರದೇಶದ ಪಸಾಲ ವೀರ ಶಿವ, ಕರ್ಣಂ ಲೋಕೇಶ್ ಹಾಗೂ ಕಾಂಚನಪಲ್ಲಿ ರಾಹುಲ್ ನಾಯ್ಡು, ಪಂಜಾಬ್‌ನ ಪುಲ್ಕಿತ್ ಗೋಯಲ್, ಚಂಡೀಗಢದ ಗುರಮೃತ್ ಸಿಂಗ್ ಮೊದಲ ಸ್ಥಾನ ಪಡೆದಿದ್ದಾರೆ.
ಫಲಿತಾಂಶವನ್ನು jeemain.nta.nic.in ವೆಬ್‌ಸೈಟ್‌ನಲ್ಲಿ ನೋಡಬಹುದಾಗಿದೆ.

Exit mobile version