ಜಿಯೋ ಮೊಬೈಲ್, ಸಿಮ್ ತಿರಸ್ಕರಿಸುವಂತೆ ಕರೆಕೊಟ್ಟ ರೈತರು

ನವದೆಹಲಿ, ಡಿ. 10: ನೂತನ ಕೃಷಿ ಕಾಯ್ದೆಗೆ ವ್ಯಾಪಕ ವಿರೋಧ ವ್ಯಕ್ತಪಡಿಸಿ ರೈತರ ಪ್ರತಿಭಟನೆಯ ಹಿನ್ನಲೆ ಇಂದು ಮೋದಿ ಸಕಾರ  ಹೊಸ ಕಾನೂನಿನಲ್ಲಿ ಕೆಲವೊಂದಿಷ್ಟು ಮಾರ್ಪಾಡು ಮಾಡುವ ಪ್ರಸ್ತಾವನೆಯನ್ನು ರೈತರ ಮುಂದಿಟ್ಟಿತ್ತು. ಈ ಪ್ರಸ್ತಾವನೆಯನ್ನು ತಿರಸ್ಕರಿಸಿರುವ ರೈತರು, ಮತ್ತೆ ದೇಶಾದ್ಯಂತ ಪ್ರತಿಭಟನೆಯ ಎಚ್ಚರಿಕೆಯನ್ನು ನೀಡಿದ್ದಾರೆ.  ಅಲ್ಲದೇ ರಿಲಾಯನ್ಸ್‌ ಹಾಗೂ ಅದಾನಿ ಸಂಸ್ಥೆಗಳಿಗೆ ಬಿಗ್‌ ಶಾಕ್‌ ಕೂಡ ಕೊಟ್ಟಿದ್ದಾರೆ.

ಈಗಾಗಲೇ ಜಿಯೋ ಸಿಮ್‌ ಹಾಗೂ ಜಿಯೋ ಪ್ರಡಕ್ಟ್‌ಗಳು ಸೇರಿದಂತೆ ಅದಾನಿ ಮತ್ತು ರಿಲಯಾನ್ಸ್‌ ಕಂಪೆನಿಯ ಎಲ್ಲಾ ಮಾದರಿಯ ವಸ್ತುಗಳನ್ನು ತ್ಯಜಿಸುವುದಾಗಿ ಕರೆ ನೀಡಿದ್ದಾರೆ. ನಮಗೆ ಕೇಂದ್ರ ಸರ್ಕಾರ ಕನಿಷ್ಠ ಬೆಂಬಲ ಬೆಲೆ ನೀಡುವ ಬಗ್ಗೆ ಆಫರ್‌ ಮಾಡಿದೆ. ಆದರೆ ಕೃಷಿ ಕಾಯ್ದೆಯನ್ನು ವಾಪಸ್‌ ಪಡೆಯುವ ಬಗ್ಗೆ ಯಾವುದೇ ಪ್ರಸ್ತಾವನೆಯನ್ನು ಸಲ್ಲಿಸಿರಲಿಲ್ಲ. ಹೀಗಾಗಿ ದೇಶಾದ್ಯಂತ ಅದಾನಿ ಲಿಮಿಟೆಡ್‌ ಮತ್ತು ರಿಲಯಾನ್ಸ್‌ ಇಂಡಸ್ಟ್ರೀಸ್‌ ಲಿಮಿಟೆಡ್‌ನ ವಸ್ತುಗಳು ಹಾಗೂ ಜಿಯೋ ಮೊಬೈಲ್‌, ಜಿಯೋ ಸಿಮ್‌ಗಳನ್ನು ಬಳಸದೇ ಇರುವಂತೆ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.

ಡಿಸೆಂಬರ್‌ 12ರಂದು ದೆಹಲಿ ಜೋಧಪುರ ಹೆದ್ದಾರಿಯನ್ನು ತಡೆದು ಬೃಹತ್‌ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನು ರೈತ ಮಾಯಕರು ನೀಡಿದ್ದಾರೆ. ಅಲ್ಲದೇ ಡಿಸೆಂಬರ್‌ ೧೪ರಂದು ಬಿಜೆಪಿ ಕಚೇರಿಗೆ ಮತ್ತಿಗೆ ಹಾಕುವುದಾಗಿ ಎಚ್ಚರಿಸಿದ್ದಾರೆ.

Exit mobile version