ಜುಲೈ 3ರಿಂದ ಜಿಯೋ ಅನ್ಲಿಮಿಟೆಡ್ ಪ್ಲ್ಯಾನ್ಗಳ ದರ ಹೆಚ್ಚಳ: ಯಾವ ಪ್ಲ್ಯಾನ್ ಎಷ್ಟು ಹೆಚ್ಚಾಗತ್ತೇ.?

Mumbai: ಭಾರತದಲ್ಲಿ ಅತಿಹೆಚ್ಚು ಬಳಕೆದಾರರನ್ನು ಹೊಂದಿರುವ ಟೆಲಿಕಾಂ ಆಪರೇಟರ್ ರಿಲಯನ್ಸ್ ಜಿಯೋ ಮೊಬೈಲ್ ಅನ್ಲಿಮಿಟೆಡ್ ಪ್ಲ್ಯಾನ್ಗಳ (Telecom Operator Reliance Jio Mobile Unlimited Plans) ದರದಲ್ಲಿ ಶೇಕಡಾ 12-27 ಹೆಚ್ಚಳವನ್ನು ಘೋಷಿದೆ. ಎರಡೂವರೆ ವರ್ಷಗಳಲ್ಲಿ ಇದೆ ಮೊದಲ ಬಾರಿಗೆ ಜಿಯೋ ದರ ಹೆಚ್ಚಳ ಮಾಡಿದ್ದು, ವೊಡಾಫೋನ್, ಬಾರ್ತಿ ಏರಟೆಲ್, ಐಡಿಯಾ (Vodafone, Bharti Airtel, Idea) ದಂತಹ ಇತರ ಆಪರೇಟರ್ಗಳು ಕೂಡಾ ಶೀಘ್ರದಲ್ಲೇ ದರ ಹೆಚ್ಚಳ ಮಾಡುವ ಸಾಧ್ಯತೆ ಇದೆ.

Mobile

ಇನ್ನು ಜಿಯೋ ಕಂಪನಿಯು ಗ್ರಾಹಕರಿಗೆ ಅನಿಯಮಿತ ಉಚಿತ 5G ಸೇವೆಗಳ ಪ್ರವೇಶವನ್ನು ನಿರ್ಬಂಧಿಸಿದೆ. 5ಜಿ ಸ್ಪೆಕ್ಟ್ರಮ್ (Spectrum) ಹರಾಜಿನ ನಂತರ ದರ ಹೆಚ್ಚಳವು ತಕ್ಷಣವೇ ಜಾರಿಗೆ ಬರುತ್ತದೆ. ಹೊಸ ಯೋಜನೆಗಳ ಪರಿಚಯವು ಉದ್ಯಮದ ನಾವೀನ್ಯತೆಯನ್ನು ಹೆಚ್ಚಿಸುವ ದಿಕ್ಕಿನಲ್ಲಿ ಒಂದು ಹೆಜ್ಜೆಯಾಗಿದೆ 5G ಮತ್ತು AI ತಂತ್ರಜ್ಞಾನದಲ್ಲಿ ಹೂಡಿಕೆಯ ಮೂಲಕ ಸುಸ್ಥಿರ ಬೆಳವಣಿಗೆಗೆ ಚಾಲನೆ ನೀಡುತ್ತದೆ ಎಂದು ರಿಲಯನ್ಸ್ ಜಿಯೋ ಇನ್ಫೋಕಾಮ್ ಅಧ್ಯಕ್ಷ ಆಕಾಶ್ ಎಂ ಅಂಬಾನಿ (Akash M Ambani) ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕಂಪನಿಯು ಬಹುತೇಕ ಎಲ್ಲಾ ಯೋಜನೆಗಳಲ್ಲಿ ಮೊಬೈಲ್ ಸೇವಾ ದರಗಳನ್ನು ಹೆಚ್ಚಿಸಿದೆ. ಕಡಿಮೆ ರೀಚಾರ್ಜ್ನ ಬೆಲೆಯನ್ನು 19 ರೂ.ಗೆ ಏರಿಸಲಾಗುತ್ತಿದೆ, 1 GB ಡೇಟಾ ಆಡ್-ಆನ್-ಪ್ಯಾಕ್ಗೆ 15 ರೂ.ಗಿಂತ ಸುಮಾರು 27 ಪ್ರತಿಶತ ಅಧಿಕವಾಗಿದೆ. 75 GB ಪೋಸ್ಟ್ಪೇಯ್ಡ್ ಡೇಟಾ ಯೋಜನೆಯು ಈಗ 399 ರೂಪಾಯಿಗಳ ಬದಲಿಗೆ 449 ರೂ.ಗೆ ಹೆಚ್ಚಳವಾಗಲಿದೆ. 84 ದಿನಗಳ ವ್ಯಾಲಿಡಿಟಿ ಹೊಂದಿರುವ ಜನಪ್ರಿಯ ರೂ 666 ಅನಿಯಮಿತ ಯೋಜನೆಯ ಬೆಲೆಯನ್ನು ರೂ 799 ಕ್ಕೆ ಏರಿಸಿದೆ. ವಾರ್ಷಿಕ ರೀಚಾರ್ಜ್ ಯೋಜನೆಗಳ ಬೆಲೆಗಳು 20-21 ಶೇಕಡಾದಿಂದ 1,559 ರಿಂದ 1,899 ಕ್ಕೆ ಮತ್ತು 2,999 ರಿಂದ 3,599 ಕ್ಕೆ ಹೆಚ್ಚಿಸಲ್ಪಡುತ್ತವೆ.

ಈಗಿನಂತೆ, ರೂ 239 ಕ್ಕಿಂತ ಹೆಚ್ಚಿನ ಬೆಲೆಯ ಪ್ಲ್ಯಾನ್ಗಳನ್ನು ಪಡೆಯುವ ಚಂದಾದಾರರು ಅನಿಯಮಿತ ಉಚಿತ 5G ಸೇವೆಯನ್ನು ಪ್ರವೇಶಿಸಬಹುದು ಮತ್ತು ಉಳಿದ ಗ್ರಾಹಕರು ಅನಿಯಮಿತ 5G ಸೇವೆಯನ್ನು ಪಡೆಯಲು ರೂ 61 ವೋಚರ್ನೊಂದಿಗೆ ತಮ್ಮ ಯೋಜನೆಯನ್ನು ಟಾಪ್ ಅಪ್ ಮಾಡಬೇಕು. ಈ ಹಿಂದೆ, ಜಿಯೋ ಡಿಸೆಂಬರ್ (December) 2021 ರಲ್ಲಿ ಭಾರ್ತಿ ಏರ್ಟೆಲ್ ಮತ್ತು ವೊಡಾಫೋನ್ ಐಡಿಯಾ ಜೊತೆಗೆ ಮೊಬೈಲ್ (Mobile) ಸೇವಾ ದರಗಳನ್ನು ಹೆಚ್ಚಿಸಿತ್ತು.

Exit mobile version