ಯಾವುದೇ ದೇವರು ಬ್ರಾಹ್ಮಣನಲ್ಲ, ಶಿವ ಪರಿಶಿಷ್ಟ ಜಾತಿಯವನು : ಜೆಎನ್‍ಯು ಉಪಕುಲಪತಿ

ನವದೆಹಲಿ : ದೇಶವು ಜಾತಿ-ಸಂಬಂಧಿತ ಹಿಂಸಾಚಾರಕ್ಕೆ(Voilence) ಸಾಕ್ಷಿಯಾಗಿರುವ ಸಮಯದಲ್ಲಿ, ಜೆಎನ್‍ಯು ಉಪಕುಲಪತಿ(JNU Vice-Chancellor) ಶಾಂತಿಶ್ರೀ ಧೂಳಿಪುಡಿ ಪಂಡಿತ್ ಅವರು ಮಾನವಶಾಸ್ತ್ರದ ಯಾವ ದೇವರುಗಳು ಕೂಡಾ ಮೇಲ್ಜಾತಿಗೆ ಸೇರಿದವರಲ್ಲ.

ಶಿವನು ಸಹ ಪರಿಶಿಷ್ಟ ಜಾತಿ ಅಥವಾ ಬುಡಕಟ್ಟಿನವನಾಗಿರಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ. ಲಿಂಗ ನ್ಯಾಯದ ಕುರಿತು ಡಾ ಬಿ.ಆರ್.ಅಂಬೇಡ್ಕರ್(Dr. B.R Ambedkar) ಅವರ ಚಿಂತನೆಗಳು ಎಂಬ ಶೀರ್ಷಿಕೆಯಡಿ ಡಾ ಬಿ.ಆರ್.ಅಂಬೇಡ್ಕರ್ ಉಪನ್ಯಾಸ ಸರಣಿಯನ್ನು ನೀಡಿದ ಅವರು, ಮನುಸ್ಮೃತಿಯ ಪ್ರಕಾರ ಎಲ್ಲಾ ಸ್ತ್ರೀಯರು ಶೂದ್ರರು.

ಇದನ್ನೂ ಓದಿ : https://vijayatimes.com/actor-aniruddha-salary-revealed/

ಮದುವೆಯ ಮೂಲಕ ಮಾತ್ರ ಮಹಿಳೆ ತನ್ನ ಗಂಡ ಅಥವಾ ತಂದೆಯ ಜಾತಿಯನ್ನು ಪಡೆಯುತ್ತಾಳೆ. ಆದರೆ ಅಂಬೇಡ್ಕರ್‌ ಅವರು ನೀಡಿದ ಸಂವಿಧಾನನ ಏಕರೂಪ ನಾಗರಿಕ ಸಂಹಿತೆ ಮಹಿಳೆಯರಿಗೆ ಅತ್ಯುತ್ತಮ ಸ್ಥಾನಮಾನಗಳನ್ನು ನೀಡಿದೆ. ನಾವು ಬಾಬಾಸಾಹೇಬರ ಚಿಂತನೆಗಳನ್ನು ಮರುಚಿಂತನೆ ಮಾಡುವುದು ಮತ್ತು ಪುನರ್ನಿರ್ಮಾಣ ಮಾಡುವುದು ಬಹಳ ಮುಖ್ಯ.

ಅಂತಹ ಶ್ರೇಷ್ಠ ಚಿಂತಕರಾಗಿದ್ದ ಆಧುನಿಕ ಭಾರತದ ಯಾವ ನಾಯಕರೂ ನಮ್ಮಲ್ಲಿ ಇಲ್ಲ. ಹಿಂದುತ್ವ ಎನ್ನುವುದು ಧರ್ಮವಲ್ಲ, ಅದೊಂದು ಜೀವನ ವಿಧಾನ, ಅದು ಜೀವನ ವಿಧಾನವಾಗಿದ್ದರೆ ಟೀಕೆಗೆ ನಾವೇಕೆ ಹೆದರುತ್ತೇವೆ? ಎಂದು ಪ್ರಶ್ನಿಸಿದರು. ಇತ್ತೀಚಿನ ಜಾತಿ ಹಿಂಸಾಚಾರದ ಬಗ್ಗೆ ಮಾತನಾಡಿದ ಅವರು, “ಯಾವುದೇ ದೇವರು ಮೇಲ್ಜಾತಿಗೆ ಸೇರಿದವನಲ್ಲ.

ನಮ್ಮ ದೇವರುಗಳ ಮೂಲವನ್ನು ಮಾನವಶಾಸ್ತ್ರೀಯವಾಗಿ ತಿಳಿದಿರಬೇಕು. ಯಾವುದೇ ದೇವರು ಬ್ರಾಹ್ಮಣನಲ್ಲ, ಅತ್ಯುನ್ನತ ಕ್ಷತ್ರಿಯ ದೈವನಾದ ಶಿವನು ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡವಾಗಿರಬೇಕು. ಏಕೆಂದರೆ ಅವನು ಹಾವಿನೊಂದಿಗೆ ಸ್ಮಶಾನದಲ್ಲಿ ಕುಳಿತುಕೊಳ್ಳುತ್ತಾನೆ ಮತ್ತು ಧರಿಸಲು ಕೆಲವೇ ಬಟ್ಟೆಗಳನ್ನು ಹೊಂದಿದ್ದಾನೆ.

ಇದನ್ನೂ ಓದಿ : https://vijayatimes.com/homeremedies-for-tanning-skin/

ಅನಾಧಿ ಕಾಲದಿಂದಲೂ ಬ್ರಾಹ್ಮಣರು ಸ್ಮಶಾನದಲ್ಲಿ ಕುಳಿತುಕೊಳ್ಳಬಹುದು ಎಂದು ನಾನು ಭಾವಿಸುವುದಿಲ್ಲ,” ಎಂದು ಶಾಂತಿಶ್ರೀ ಧೂಳಿಪುಡಿ ಪಂಡಿತ್ ಅವರು ಹೇಳಿದ್ದಾರೆ.

Source : India Today

Exit mobile version