ಗೃಹ ರಕ್ಷಕ ಹುದ್ದೆಗೆ ಅರ್ಜಿ ಆಹ್ವಾನ

ಚಿತ್ರದುರ್ಗ ಜಿಲ್ಲೆಯ ವಿವಿಧ ಕಡೆ 75 ಗೃಹ ರಕ್ಷಕ ಸಿಬ್ಬಂದಿ ಖಾಲಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಅರ್ಜಿಗಳನ್ನು ಭರ್ತಿ ಮಾಡಿ ಸಂಬಂಧಪಟ್ಟ ದಾಖಲೆಗಳೊಂದಿಗೆ ಗೃಹರಕ್ಷಕ ದಳ ಕಚೇರಿ, ಚಿತ್ರದುರ್ಗ ಜಿಲ್ಲೆ, ಚಿತ್ರದುರ್ಗ ಇಲ್ಲಿಗೆ ನಿಗದಿತ ಅವಧಿಯೊಳಗೆ ಸಲ್ಲಿಸಲು ಸೂಚಿಸಿದೆ. ಪುರುಷ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬಹುದಾಗಿರುತ್ತದೆ.

ಚಿತ್ರದುರ್ಗ ಜಿಲ್ಲೆಯಯಲ್ಲಿ ಖಾಲಿ ಇರುವ ಗ್ರಹರಕ್ಷಕ ಹುದ್ದೆಗಳ ವಿವರ

ಹೊಸದಾಗಿ ಪ್ರಾರಂಭವಾಗಿರುವ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕು ಚಿತ್ರಹಳ್ಳಿ ಉಪ ಘಟಕದಲ್ಲಿ 32 ಖಾಲಿ ಸ್ಥಾನಗಳು, ಮೊಳಕಾಲೂರು ತಾಲ್ಲೂಕು ರಾಂಪುರ ಉಪ ಘಟಕದಲ್ಲಿ 09 ಖಾಲಿ ಸ್ಥಾನಗಳು, ಚಳ್ಳಕೆರೆ ತಾಲ್ಲೂಕು ಪರಶುರಾಂಪುರ ಉಪ ಘಟಕದಲ್ಲಿ 10 ಖಾಲಿ ಸ್ಥಾನಗಳು, ಚಿತ್ರದುರ್ಗ ತಾಲೂಕು ಭರಮಸಾಗರ ಉಪ ಘಟಕದಲ್ಲಿ 14 ಖಾಲಿ ಸ್ನಾನಗಳು ಹಾಗೂ ಚಳ್ಳಕೆರೆ ತಾಲ್ಲೂಕು ನಾಯಕನಹಟ್ಟಿ, ಉಪ ಘಟಕದಲ್ಲಿ 10 ಖಾಲಿ ಸ್ಥಾನಗಳು ಸೇರಿದಂತೆ ಒಟ್ಟು 75 ಖಾಲಿ ಸ್ಥಾನಗಳು ಇವೆ.

ಅರ್ಹತಗಳು

ಅರ್ಜಿ ವಿತರಣೆ ಸ್ಥಳ

ಜಿಲ್ಲಾ ಗೃಹರಕ್ಷಕ ದಳ ಕಚೇರಿ, ಮೆದೇಹಳ್ಳಿ ರಸ್ತೆ, ಚಿತ್ರದುರ್ಗ ಇಲ್ಲಿ ಅರ್ಜಿಗಳು ದೊರೆಯಲಿದ್ದು, ನವೆಂಬರ್ 25ರಿಂದ ಡಿಸೆಂಬರ್ 6ರವರೆಗೆ ಅರ್ಜಿಗಳನ್ನು ವಿತರಿಸಲಾಗುವುದು. ಡಿಸೆಂಬರ್ 10 ಸಂಜೆ 5.30 ರೊಳಗೆ ಅರ್ಜಿಗಳನ್ನು ಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗಾಗಿ ಕಚೇರಿ ದೂರವಾಣಿ ಸಂಖ್ಯೆ 08194-231403, 94810 47857., 9481501233  ಸಂಪರ್ಕಿಸಬಹುದು

Exit mobile version