ಬೆಂಗಳೂರಿನ ನಿಮ್ಹಾನ್ಸ್​ನಲ್ಲಿದೆ ಉದ್ಯೋಗಾವಕಾಶ : ವೇತನ 25 ಸಾವಿರ ರೂ, ಜುಲೈ 04 ರಂದು ನೇರ ಸಂದರ್ಶನ

NIMHANS Recruitment 2023: ಫೀಲ್ಡ್ ಲೈಸನ್ ಆಫೀಸರ್ ಹುದ್ದೆಗಳಿಗೆ(Field Liecence Officer) ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಮೆಂಟಲ್ ಹೆಲ್ತ್ ಮತ್ತು ನ್ಯೂರೋ ಸೈನ್ಸಸ್ (NIMHANS) ಅರ್ಜಿಗಳನ್ನು ಆಹ್ವಾನಿಸಿದೆ. ಒಟ್ಟು 2 ಹುದ್ದೆಗಳನ್ನು ಈ ನೇಮಕಾತಿ ಅಡಿಯಲ್ಲಿ ಭರ್ತಿ ಮಾಡಲಾಗುತ್ತಿದ್ದು, ಈ ನೇರ ಸಂದರ್ಶನದಲ್ಲಿ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಭಾಗವಹಿಸಬಹುದು. ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಗಿನಂತಿದೆ.

ನೇಮಕಾತಿ ವಿವರಗಳು:
ಸಂಸ್ಥೆಯ ಹೆಸರು : ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಮೆಂಟಲ್ ಹೆಲ್ತ್ ಅಂಡ್ ನ್ಯೂರೋ ಸೈನ್ಸಸ್ (NIMHANS)
ಉದ್ಯೋಗ ಸ್ಥಳ: ಬೆಂಗಳೂರು – ಕರ್ನಾಟಕ
ಹುದ್ದೆಗಳ ಸಂಖ್ಯೆ: 2 ಹುದ್ದೆಗಳು
ಹುದ್ದೆಯ ಹೆಸರು: ಕ್ಷೇತ್ರ ಸಂಪರ್ಕ ಅಧಿಕಾರಿ

ಶೈಕ್ಷಣಿಕ ಅರ್ಹತೆ:
ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾನಿಲಯಗಳಿಂದ MSW, M.Sc ಮನೋವಿಜ್ಞಾನ, PSW ವನ್ನು ನಿಮ್ಹಾನ್ಸ್ ಅಧಿಕೃತ ಅಧಿಸೂಚನೆಯ ಪ್ರಕಾರ ಪೂರ್ಣಗೊಳಿಸಿರಬೇಕು.

ವಯೋಮಿತಿ:
ಅಭ್ಯರ್ಥಿಯ ಗರಿಷ್ಠ ವಯಸ್ಸು 40 ವರ್ಷಗಳನ್ನು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಮೆಂಟಲ್ ಹೆಲ್ತ್ ಅಂಡ್ ನ್ಯೂರೋ ಸೈನ್ಸಸ್ ನೇಮಕಾತಿ ಅಧಿಸೂಚನೆಯ ಪ್ರಕಾರ, ಮೀರಿರಬಾರದು.

ವೇತನ:
ಮಾಸಿಕ ವೇತನವಾಗಿ ರೂ. 25000/- ಅನ್ನು ಈ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ನೀಡಲಾಗುತ್ತದೆ.

ಆಯ್ಕೆ ಪ್ರಕ್ರಿಯೆ:

ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಈ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

ಪ್ರಮುಖ ದಿನಾಂಕ:
ಬೆಳಿಗ್ಗೆ 10:30 ಕ್ಕೆ ಜುಲೈ 04, 2023 ರಂದು ನೇರ ಸಂದರ್ಶನ ನಡೆಯಲಿದೆ.

ನೇರ ಸಂದರ್ಶನ ನಡೆಯುವ ವಿಳಾಸ:
Lecture Hall, 1st Floor, Administrative Block, NIMHANS, Bengaluru-560029.

ರಶ್ಮಿತಾ ಅನೀಶ್

Exit mobile version