ಇಂಡಿಯನ್ ಏರ್ಪೋರ್ಟ್ ಅಥಾರಿಟಿಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ದೇಶದ ಪ್ರತಿಷ್ಠಿತ ಇಂಡಿಯನ್ ಏರ್ಪೋರ್ಟ್ ಅಥಾರಿಟಿಯಲ್ಲಿ (Indian Airport Authority) ವಿವಿಧ ಹುದ್ದೆಗಳಿಗೆ ಅರ್ಜಿ (job vacancy in AAI) ಆಹ್ವಾನಿಸಲಾಗಿದ್ದು, ಆಸಕ್ತ ಮತ್ತು

ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಒಟ್ಟು 496 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಅದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ನೇಮಕಾತಿ ಪ್ರಾಧಿಕಾರ : ಏರ್ಪೋರ್ಟ್ ಅಥಾರಿಟಿ ಆಫ್ ಇಂಡಿಯಾ
ಹುದ್ದೆಗಳ ಹೆಸರು :AAI ಜೂನಿಯರ್ ಎಕ್ಸಿಕ್ಯೂಟಿವ್(Junior Executive)
ವೇತನ : 40,000- 1,40,000ರೂ.ಗಳು
ನೇಮಕಾತಿ ವಿಧಾನ : ಲಿಖಿತ ಪರೀಕ್ಷೆ

ಜಾತಿವಾರು ಮೀಸಲಾತಿ ಹಂಚಿಕೆ :
ಸಾಮಾನ್ಯ – 199
OBC -140
EWS – 49
ಪರಿಶಿಷ್ಟ ಜಾತಿ – 75
ಪರಿಶಿಷ್ಟ ಪಂಗಡ
ಒಟ್ಟು ಹುದ್ದೆಗಳ ಸಂಖ್ಯೆ : 496

ಶೈಕ್ಷಣಿಕ ಅರ್ಹತೆಗಳು :
ಭೌತಶಾಸ್ತ್ರ ದಲ್ಲಿ ಪದವಿ ಅಥವಾ ಗಣಿತ/ ಭೌತಶಾಸ್ತ್ರ ವಿಷಯ BE ಪಾಸ್ ಮಾಡಿರಬೇಕು.
ಗರಿಷ್ಠ 27 ವರ್ಷ ವಯಸ್ಸು ಮೀರಿರಬಾರದು. OBC ಅಭ್ಯರ್ಥಿಗಳಿಗೆ 30 ವರ್ಷ, SC/ ST/ ವಿಕಲಚೇತನ ಅಭ್ಯರ್ಥಿಗಳಿಗೆ 32 ವರ್ಷದವರೆಗೆ (job vacancy in AAI) ಅರ್ಜಿ ಸಲ್ಲಿಸಲು ವಯೋಮಿತಿ ಸಡಿಲಿಕೆ ಇರುತ್ತದೆ.

ಅರ್ಜಿ ಶುಲ್ಕ :
ಸಾಮಾನ್ಯ ಮತ್ತು OBC ಅಭ್ಯರ್ಥಿಗಳಿಗೆ ರೂ.1000.
SC, ST ಮತ್ತು ಪಿಡಬ್ಲ್ಯೂಡಿ (PWD) / ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ಇರುತ್ತದೆ.

ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭಿಕ ದಿನಾಂಕ : 01-11-2023
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 30-11-2023
ಶುಲ್ಕ ಪಾವತಿಸಲು ಕೊನೆ ದಿನಾಂಕ: 30-11-2023

ಹೆಚ್ಚಿನ ಮಾಹಿತಿಗಾಗಿ ಭೇಟಿ ನೀಡಿ : https://www.aai.aero/

ಇದನ್ನು ಓದಿ: ಎಲ್ಲಾ ಒತ್ತೆಯಾಳುಗಳನ್ನು ಬಿಡುಗಡೆ ಮಾಡುತ್ತೇವೆ ; ಇಸ್ರೇಲ್ ಎದುರು ಮಂಡಿಯೂರಿದ ಹಮಾಸ್ ಉಗ್ರರು

Exit mobile version