ಯಾವುದೇ ಪರೀಕ್ಷೆ ಬರೆಯದೆ ಬಿಎಂಟಿಸಿಯಲ್ಲಿ ಉದ್ಯೋಗ ಗಿಟ್ಟಿಸಿ

Bangalore: ಕೆಲಸ ಹುಡುಕುತ್ತಿರುವ ನಮ್ಮ ಬೆಂಗಳೂರಿನ ಉದ್ಯೋಗಕಾಂಕ್ಷಿಗಳಿಗೆ ಸಿಹಿಸುದ್ದಿಯೊಂದಿದೆ. ಕಡಿಮೆ ವಿದ್ಯಾರ್ಹತೆ ಹೊಂದಿರುವ ಅರ್ಭರ್ಥಿಗಳೂ ಕೂಡ (job vacancy in bmtc) ಈ ಅವಕಾಶವನ್ನು ತಮ್ಮದಾಗಿಸಿಕೊಳ್ಳಬಹುದು.


ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಬಿಎಂಟಿಸಿಯಲ್ಲಿ (BMTC) 636 ಹುದ್ದೆಗಳು ಖಾಲಿ ಇದ್ದು, ಯಾವುದೇ ತರಹದ ಪರೀಕ್ಷೆಗಳು ಇಲ್ಲದೆ ಈ ಹುದ್ದೆ ತಮ್ಮದಾಗಿಸಿಕೊಳ್ಳಬಹುದು. ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮಾರ್ಚ್ 15, 2023 ರಂದು ಬೆಳಿಗ್ಗೆ 10.30 ಗಂಟೆಯಿಂದ 5.00 ಗಂಟೆಯೊಳಗಾಗಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ಅನೆಕ್ಸ್ ಬಿಲ್ಡಿಂಗ್, ಆಡಳಿತ ಇಲಾಖೆ , ೫ನೇ ಮಹಡಿ, ಶಾಂತಿನಗರ ಬಸ್ ನಿಲ್ದಾಣದ ಪಕ್ಕ, ಬೆಂಗಳೂರು-560027

ಒಟ್ಟು 636 ಹುದ್ದೆಗಳು ಖಾಲಿ ಇದ್ದು, ಈ ಹುದ್ದೆಗಳಿಗೆ ಡಿಪ್ಲೋಮಾ (Dipolma), ಎಸ್‌ಎಸ್‌ಎಲ್‌ಸಿ, ಐಟಿಐ(ITI) ಪಾಸಾಗಿರುವಂತಹ (job vacancy in bmtc) ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಇದನ್ನು ಓದಿ: ಅಡುಗೆ ಇಂಧನ ಬೆಲೆ 50 ಏರಿಕೆ: ಅಚ್ಚೇ ದಿನ್‌ಗೆ ಕಂಗಾಲಾದ ಜನತೆ !

ಅಭ್ಯರ್ಥಿಗಳು ಅರ್ಜಿಯನ್ನು ಆಫ್ಲೈನ್ ಅಥವಾ ಪೋಸ್ಟ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಸೂಚನೆಗಳು:-
1) ಅಭ್ಯರ್ಥಿಗಳು ಈಗಾಗಲೇ ಶಿಶಿಕ್ಷು ಕಾಯ್ದೆ ೧೯೬೧ ರನ್ವಯ ಶಿಶಿಕ್ಷು ತರಬೇತಿ ಪಡೆದಿರುವವರು ಪುನಃ ಅರ್ಜಿ ಸಲ್ಲಿಸಲು ಅರ್ಹರಲ್ಲ.

2) ಶಿಶಿಕ್ಷು ತರಬೇತಿ ಪಡೆಯುವ ಅಭ್ಯರ್ಥಿಗಳು ತಮ್ಮ ತರಬೇತಿ ಪೂರ್ಣಗೊಳಿಸಿದ ನಂತರ ಸಂಸ್ಥೆಯಲ್ಲಿ ಅವರಿಗೆ ಯಾವುದೇ ರೀತಿಯ ನೇಮಕಾತಿ ಮಾಡಿಕೊಳ್ಳುವ ಒಪ್ಪಂದಕ್ಕೆ ಒಳಪಟ್ಟಿರುವುದಿಲ್ಲ ಮತ್ತು ತರಬೇತಿ ಪಡೆಯಲು

ಅರ್ಹತೆ ಪಡೆದವರು ಶಿಶಿಕ್ಷು ಕಾಯ್ದೆ ೧೯೬೧ರ ನಿಯಮಗಳು, ನಿಬಂಧನೆ ಮತ್ತು ಷರತ್ತುಗಳಿಗೆ ಒಳಪಟ್ಟಿರುತ್ತಾರೆ.

3) ತಾಂತ್ರಿಕ ಶಿಶಿಕ್ಷು ತರಬೇತಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಉತ್ತಮ ದೇಹದಾರ್ಡ್ಯತೆ ಹೊಂದಿರಬೇಕು.

4) ಒಂದಕ್ಕಿಂತ ಹೆಚ್ಚಿನ ವೃತ್ತಿಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಪ್ರತಿಯೊಂದು ವೃತ್ತಿಗೂ ಪ್ರತ್ಯೇಕ ಅರ್ಜಿ ಸಲ್ಲಿಸಬೇಕು. ಆಯ್ಕೆಗೆ ಸಂಭಂದಿಸಿದ ಯಾವುದೇ ಪತ್ರ ವ್ಯವಹಾರಕ್ಕೆ ಅವಕಾಶವಿರುವುದಿಲ್ಲ.

5) ಹೆಚ್ಚಿನ ಮಾಹಿತಿಯನ್ನು ಸಂಸ್ಥೆಯ ವೆಬ್‌ಸೈಟ್ https://mybmtc.karnataka.gov.in/page/Recruitment/en ನಲ್ಲಿ ಪಡೆಯಬಹುದಾಗಿರುತ್ತದೆ.

ತಡಮಾಡದೆ ಈ ಅವಕಾಶವನ್ನು ಉಪಯೋಗಿಸಿಕೊಳ್ಳಿ. ಇನ್ನು ವಯೋಮಿತಿ ಬಗ್ಗೆ ಹೇಳುವುದಾದರೆ, ವಯಸ್ಸು ಕನಿಷ್ಠ ೧೬ವರ್ಷ ಮತ್ತು ಗರಿಷ್ಠ ೩೦ ವರ್ಷ ಮೀರಿರಬಾರದು ಇನ್ನಷ್ಟು ಮಾಹಿತಿಗಳನ್ನು ತಿಳಿದುಕೊಳ್ಳಲು ಅಭ್ಯರ್ಥಿಗಳು ಅಧಿಕೃತ ಜಾಲತಾಣ ಅನ್ನು ವೀಕ್ಷಿಸಬಹುದು

ಹೆಚ್ಚಿನ ಮಾಹಿತಿಗಾಗಿ ಇದನ್ನು ಓದಿ: https://mybmtc.karnataka.gov.in/storage/pdf-files/Apprentice%20Notification.pdf

Exit mobile version