ಭಾರತೀಯ ರಿಸರ್ವ್ ಬ್ಯಾಂಕ್’ನ ಬೆಂಗಳೂರು ಹುದ್ದೆಗಳಿಗೆ ಅರ್ಜಿ ಆಹ್ವಾನ ;ಇಂದೇ ಅರ್ಜಿ ಸಲ್ಲಿಸಿ

ಭಾರತೀಯ ರಿಸರ್ವ್ ಬ್ಯಾಂಕ್ (Reserve Bank of India) ಬೆಂಗಳೂರಿನಲ್ಲಿರುವ ಹುದ್ದೆಗಳ (Job Vacancy in RBI) ನೇಮಕಾತಿಗೆ ಅಧಿಕೃತ ಅಧಿಸೂಚನೆ ಹೊರಡಿಸಿದೆ. ಅಧಿಸೂಚನೆಯ ಪ್ರಕಾರ,

ಗುತ್ತಿಗೆ ಆಧಾರದ ಮೇಲೆ ಬ್ಯಾಂಕ್ನ ವೈದ್ಯಕೀಯ ಸಲಹೆಗಾರರ ಹುದ್ದೆಗೆ ನೇಮಕಾತಿ ಮಾಡಿಕೊಳ್ಳಲು ಆಸಕ್ತರಿಂದ ಅರ್ಜಿ ಆಹ್ವಾನಿಸಿದೆ. ಈ ಕುರಿತ ವಿವರ ಇಲ್ಲಿದೆ.

ಕೆಳಕಂಡಂತೆ ಔಷಧಾಲಯಗಳಲ್ಲಿ ವೈದ್ಯಕೀಯ ಸಲಹೆಗಾರರಾಗಿ ಕಾರ್ಯ ನಿರ್ವಹಿಸಲು (Job Vacancy in RBI) ಆಸಕ್ತಿ ಇರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ.

ಔಷಧಾಲಯದ ಹೆಸರು ಮತ್ತು ಖಾಲಿ ಹುದ್ದೆಗಳ ವಿವರ
RBI ಮುಖ್ಯ ಕಚೇರಿ, ಔಷಧಾಲಯ, ನೃಪತುಂಗ ರಸ್ತೆ, ಬೆಂಗಳೂರು (Bengaluru) : 2
RBI ಅಧಿಕಾರಿಗಳ ಕ್ವಾರ್ಟಸ್, ಕನ್ನಿಂಗ್ ಹ್ಯಾಮ್ ಕ್ರೆಸೆಂಟ್, ಬೆಂಗಳೂರು: 1
RBI ಅಧಿಕಾರಿಗಳ ಕ್ವಾರ್ಟಸ್, ಕನ್ನಿಂಗ್ ಹ್ಯಾಮ್ ರಸ್ತೆ, ಬೆಂಗಳೂರು : 1

RBI ಸಿಬ್ಬಂದಿ ಕ್ವಾರ್ಟಸ್, ನಂದಿನಿ ಬಡಾವಣೆ (Nandini Layout), ಬೆಂಗಳೂರು: 1
RBI ಸಿಬ್ಬಂದಿ ಕ್ವಾರ್ಟಸ್, ಒಸ್ಟೋರ್ನ್ ರಸ್ತೆ, ಬೆಂಗಳೂರು : 1
RBI ಅಧಿಕಾರಿಗಳ ಕ್ವಾರ್ಟಸ್, ಕೋರಮಂಗಲ, ಬೆಂಗಳೂರು: 1

ಶೈಕ್ಷಣಿಕ ವಿದ್ಯಾರ್ಹತೆ : MBBS, MD, BDS, ವೈದ್ಯಕೀಯ ಕ್ಷೇತ್ರದ ಅರ್ಹತೆಗಳನ್ನು ಹೊಂದಿರಬೇಕು.

ಸೂಚನೆ : ಅರ್ಜಿ ಸಲ್ಲಿಸಲು SSLC ಅಂಕಪಟ್ಟಿ, ಜನ್ಮ ದಾಖಲೆ, ಶೈಕ್ಷಣಿಕ ಅರ್ಹತೆ ದಾಖಲೆ, ಆಧಾರ್ ಕಾರ್ಡ್, ಇತರೆ ಮಾಹಿತಿಗಳು ಅಗತ್ಯವಾಗಿರುತ್ತವೆ. ಸಂದರ್ಶನ ಮತ್ತು ಲಿಖಿತ

ಪರೀಕ್ಷೆ ಮೂಲಕ ಆಯ್ಕೆ ಮಾಡಲಾಗುತ್ತದೆ. GM ಕೆಟಗರಿಯವರಿಗೆ 4, SC 1, OBC ಅಭ್ಯರ್ಥಿಗಳಿಗೆ 2 ಹುದ್ದೆಗಳು ಮೀಸಲಿವೆ.

ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕ : 25-01-2024
ಅರ್ಜಿ ಸಲ್ಲಿಸಲು ಅಧಿಕೃತ ವೆಬ್ ವಿಳಾಸ : opportunities.rbi.org.in

ಇದನ್ನು ಓದಿ: ಲೋಕಸಮರ – 2024 ; ವಿಜಯೇಂದ್ರ ನೇತೃತ್ವದಲ್ಲಿ ನಡೆದ ಸಭೆಯ ಇನ್ ಸೈಡ್ ಸ್ಟೋರಿ ವಿವರ

Exit mobile version