ಕನ್ನಡದಲ್ಲಿ ಕೊರೋನಾ ಜಾಗೃತಿ ಮೂಡಿಸಿದ್ದ ಜೂ. ಎನ್ ಟಿಆರ್ ಗೆ ಕೊರೋನಾ ದೃಢ

ಇತ್ತೀಚೆಗೆ ಕೊರೊನಾ ವೈರಸ್​ ಕುರಿತು ಜಾಗೃತಿ ಮೂಡಿಸುವ ವಿಡಿಯೋವೊಂದರಲ್ಲಿ ಕನ್ನಡದಲ್ಲಿ ಮಾತನಾಡಿ, ‘ಮಾತೃ’ಭಾಷಾ ಪ್ರೇಮ ಮೆರೆದು, ಕನ್ನಡಿಗರ ಬಗ್ಗೆ ಕಾಳಜಿ ವ್ಯಕ್ತಪಡಿಸಿದ್ದ ತೆಲುಗು ಖ್ಯಾತ ನಟ ಜೂ. ಎನ್​ಟಿಆರ್ ಅವರಿಗೂ ಈಗ ಕೊರೊನಾ ಸೋಂಕು ತಗುಲಿದೆ.

ಈ ಬಗ್ಗೆ ಟ್ವೀಟ್​ ಮಾಡಿ ತಿಳಿಸಿರುವ ಜೂ. ಎನ್​ಟಿಆರ್ ನನಗೂ ಕೊರೊನಾ ಬಂದಿದೆ. ಆದರೆ ಅಭಿಮಾನಿಗಳೂ ಅತಂಕಪಡುವುದು ಬೇಡ. ನಾನು ಆರೋಗ್ಯವಾಗಿದ್ದೇನೆ. ನಾನೂ ಮತ್ತು ನನ್ನ ಕುಟುಂಬಸ್ಥರು ಮನೆಯಲ್ಲೇ ಕ್ವಾರೆಂಟೈನ್​ ಆಗಿದ್ದೇವೆ. ವೈದ್ಯರ ನಿಗಾದಲ್ಲಿ ನಾವೆಲ್ಲ ಸಮರ್ಪಕವಾಗಿ ಚಿಕಿತ್ಸೆ ಪಡೆಯುತ್ತಿದ್ದೇವೆ. ಇತ್ತೀಚೆಗೆ ನಮ್ಮ ಸಂಪರ್ಕಕ್ಕೆ ಬಂದವರು ಟೆಸ್ಟ್ ಮಾಡಿಸಿಕೊಳ್ಳಿ ಮತ್ತು ಜಾಗ್ರತೆ ವಹಿಸಿ ಎಂದು ತಿಳಿಸಿದ್ದಾರೆ. ​

ಅಕ್ಟೋಬರ್​ 13ರಂದು ಆರ್​ಆರ್​ಆರ್​ ಚಿತ್ರ ತೆರೆಗೆ ತರುವುದಾಗಿ ರಾಜಮೌಳಿ ಘೋಷಣೆ ಮಾಡಿದ್ದರು. ಈ ವಿಚಾರ ಕೇಳಿ ಅಭಿಮಾನಿಗಳು ಕೂಡ ಸಖತ್​ ಖುಷಿಯಾಗಿದ್ದರು. ಆದರೆ, ಈಗ ಅಭಿಮಾನಿಗಳಿಗೆ ಬ್ಯಾಡ್​ನ್ಯೂಸ್ ಒಂದು ಸಿಕ್ಕಿದೆ. ಆರ್​ಆರ್​ಆರ್​ ಸಿನಿಮಾ ರಿಲೀಸ್​ ದಿನಾಂಕ 2022ಕ್ಕೆ ಮುಂದೂಡಲ್ಪಟ್ಟಿದೆಯಂತೆ. ಬಾಹುಬಲಿ ಖ್ಯಾತಿಯ ರಾಜಮೌಳಿಯ ಅವರ ಈ ಚಿತ್ರದ ಬಗ್ಗೆ ಭಾರೀ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಆದರೆ, ಪದೇಪದೇ ಸಿನಿಮಾ ರಿಲೀಸ್​ ದಿನಾಂಕ ಮುಂದೂಡಲ್ಪಡುತ್ತಿರುವುದು ಅಭಿಮಾನಿಗಳಿಗೆ ಬೇಸರ ಉಂಟಾಗುತ್ತಿದೆ.

Exit mobile version