ಕೆ.ಟಿ. ಚಹಾ ಇನ್ನು ನೆನಪು ಮಾತ್ರ

ಕಲ್ಲಡ್ಕ ಅ 22 : ರಸ್ತೆ ಅಗಲೀಕರಣ ಹಿನ್ನಲೆಯಲ್ಲಿ ಸಾಕಷ್ಟು ಮಂದಿಯ ಸಂಸಾರ ರಸ್ತೆಗೆ ಬಂದಿರುವುದಂತೂ ನಿಜ.  ಇದೀಗ ಆ ಸಾಲಿಗೆ ಮಂಗಳೂರಿನ ರಾಷ್ಟ್ರ ಮಟ್ಟದಲ್ಲಿ ಸ್ಪೆಷಲ್ ಚಹಾದ ಮೂಲಕವೇ ಪ್ರಸಿದ್ಧಿಯನ್ನು ಪಡೆದಿದ್ದ ಕಲ್ಲಡ್ಕ ಲಕ್ಷ್ಮೀ ನಿವಾಸ ಹೊಟೇಲ್ ಕೂಡಾ ಸೇರಿದೆ. ಕಲ್ಲಡ್ಕದಲ್ಲೇ ಭಾರೀ ಪ್ರಸಿದ್ಧಿಯನ್ನು ಪಡೆದಿದ್ದ ಕಲ್ಲಡ್ಕ ಟೀ ಇನ್ನು ನೆನಪು ಮಾತ್ರ.

107 ವರ್ಷಗಳ ಇತಿಹಾಸವಿದ್ದ ಕಲ್ಲಡ್ಕ ಟೀ ಹೊಟೇಲ್ ಎಂದೇ ಖ್ಯಾತಿಯಾಗಿದ್ದ ಲಕ್ಷ್ಮೀ ನಿವಾಸ ಹೊಟೇಲ್ ಹೆದ್ದಾರಿ ಅಗಲೀಕರಣಕ್ಕಾಗಿ ತೆರವಾಗಿದೆ. ಹಳೆಯ ಹೊಟೇಲ್‌ನಲ್ಲಿ ಸಿಗುತ್ತಿದ್ದ ಕೆ. ಟಿ. ಚಹಾ ಇನ್ನೂ ಹಲವು ತಿಂಗಳ ಕಾಲ ಗ್ರಾಹರಿಗೆ ದೊರೆಯುವುದಿಲ್ಲ.

ಕಲ್ಲಡ್ಕದಲ್ಲಿ ಕೆ. ಟಿ. ಖ್ಯಾತಿಯ ಎರಡು ಹೊಟೇಲ್ ಗಳಿವೆ. ಸಹೋದರರಿಬ್ಬರು ನಡೆಸುವ ಲಕ್ಷ್ಮೀ ನಿವಾಸ ಮತ್ತು ಲಕ್ಷ್ಮೀ ಗಣೇಶ್ ಹೊಟೇಲ್‌ಗೆ ಬರುವ ಪ್ರತಿಯೊಬ್ಬ ಗ್ರಾಹಕರನೂ ಹಾಲಿನ ನೊರೆಯ ಮೇಲೆ ತೇಲುವ ಚಹಾದ ಸ್ವಾದವನ್ನು ಅಸ್ವಾದಿಸಲೇಂದೇ ಬರುತ್ತಿದ್ದರು ಚಹಾದ ಜೊತೆಗೆ ಕರಾವಳಿಯ ಸ್ಪೆಷಲ್ ಗೋಳಿಬಜೆ, ಬಜ್ಜಿ ರುಚಿ ಸವಿಯತ್ತಿದ್ದರು.

ಕಲ್ಲಡ್ಕ ಕೆ. ಟಿ. ಚಹಾ ರಾಷ್ಟ್ರ ಮಟ್ಟದಲ್ಲೇ ಪ್ರಸಿದ್ಧಿಯಾಗಿದೆ. ಕಲ್ಲಡ್ಕ ಟೀ ಯ ಪ್ರಮುಖ ಆಕರ್ಷಣೆಯೇ ಹಾಲಿನ ಮೇಲೆ ತೇಲುವ ಚಹಾದ ರಸ. ಈ ರೀತಿಯಾಗಿಯೂ ಚಹಾ ತಯಾರಿಸಬಹುದು ಅಂತಾ ಜಗತ್ತಿಗೆ ತೋರಿಸಿಕೊಟ್ಟಿದ್ದೇ ಕೆ. ಟಿ. ಹೋಟೆಲ್ ವಿಶೇಷ

ಬಿಸಿನೀರು, ಬಿಸಿ ಹಾಲು, ಬಿಸಿ ಚಹಾದ ರಸ ಇದು ಕಲ್ಲಡ್ಕ ಸೆಷ್ಪಲ್ ಕೆ. ಟಿ. ಚಹಾದ ಗುಟ್ಟು. ಆನಂತರವಾಗಿ ಈ ರೀತಿಯಾಗಿ ಹಲವು ಮಂದಿ ಚಹಾ ತಯಾರಿಸಲು ಯತ್ನಿಸಿದರೂ ಕಲ್ಲಡ್ಕ ಚಹಾದ ಸರಿಸಾಟಿಯಾಗಿ ಯಾವುದೂ ಬಂದಿಲ್ಲ ಅನ್ನೋದು ಕಲ್ಲಡ್ಕ ಟೀ ಪ್ರೀಯರ ಮಾತು.

Exit mobile version