ಉಪ ರಾಷ್ಟ್ರಪತಿಯನ್ನೇ ಅಣುಕಿಸಿದ ಟಿಎಂಸಿ ಸಂಸದ, ಅದನ್ನ ವಿಡಿಯೋ ಮಾಡಿದ ರಾಹುಲ್ ಗಾಂಧಿ: ಛೀಮಾರಿ ಹಾಕಿದ ಉಪ ರಾಷ್ಟ್ರಪತಿ

New Delhi: ಸದನದಲ್ಲಿ ತೀವ್ರ ಗದ್ದಲ ಹಾಗೂ ಗಲಾಟೆ ನಡೆಸಿದ ಆರೋಪದ ಮೇಲೆ ರಾಜ್ಯಸಭೆ ಹಾಗೂ ಲೋಕಸಭೆಯಿಂದ (Kalyan Banerjee Mimics Vice President) ಅಮಾನತುಗೊಂಡ

ವಿಪಕ್ಷಗಳ ಸಂಸದರು ಸಂಸತ್ ಹೊರಗೆ ಪ್ರತಿಭಟನೆ ನಡೆಸುವ ವೇಳೆ ದೇಶದ ಉಪ ರಾಷ್ಟ್ರಪತಿಗಳನ್ನೇ ಅಣಕವಾಡಿ, ಅವಮಾನಿಸಿರುವ ಘಟನೆ ನಡೆದಿದೆ.

ನೂತನ ಸಂಸತ್ತಿನ ‘ಮಕರ ದ್ವಾರ’ದ ಬಳಿ ಸಂಸದರು ಪ್ರತಿಭಟನೆ ನಡೆಸುತ್ತಿದ್ದ ವೇಳೆ ಟಿಎಂಸಿ ಸಂಸದ ಕಲ್ಯಾಣ್ ಬ್ಯಾನರ್ಜಿ (Kalyan Banerjee) ಅವರು ಉಪ ರಾಷ್ಟ್ರಪತಿ ಜಗದೀಪ್ ಧನಕರ್

ಅವರನ್ನು ಅಣಕಿಸುತ್ತಾ, ಅವರ ದೈಹಿಕ ಶೈಲಿಯನ್ನೇ ಅಣುಕಿಸಿ, ಅವಮಾನಿಸುತ್ತಿರುವಾಗ ಇದನ್ನು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರು ವಿಡಿಯೋ ಚಿತ್ರೀಕರಿಸಿದ್ದಾರೆ.

ಈ ಘಟನೆಯ ಕುರಿತು ತೀವ್ರ ಖೇದ ವ್ಯಕ್ತಪಡಿಸಿರುವ ಉಪ ರಾಷ್ಟ್ರಪತಿ ಜಗದೀಪ್ ಧನಕರ್ (Jagdeep Dhankar) ಅವರು “ಒಬ್ಬ ಸಂಸದ ಉಪ ರಾಷ್ಟ್ರಪತಿಗಳನ್ನೇ ಅಣಕಿಸುತ್ತಿರುವುದು, ಅದನ್ನು

ಮತ್ತೊಬ್ಬ ಸಂಸದ ವಿಡಿಯೋ ಚಿತ್ರೀಕರಿಸುತ್ತಿರುವುದು ನಾಚಿಕೆಗೇಡು, ಅಪಹಾಸ್ಯಕರ ಮತ್ತು ಒಪ್ಪುವಂತಹದ್ದಲ್ಲ” ಎಂದಿದ್ದಾರೆ. ಈ ಕುರಿತು ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ಅಧ್ಯಕ್ಷರ ಕಚೇರಿ,

ರಾಜ್ಯಸಭೆ ಮತ್ತು ಸ್ಪೀಕರ್ ಕಚೇರಿ ನಡುವೆ (Kalyan Banerjee Mimics Vice President) ಬಹಳ ವ್ಯತ್ಯಾಸವಿದೆ.

ರಾಜಕೀಯ ಪಕ್ಷಗಳು ತಮ್ಮದೇ ನೀತಿ ನಿಲುವುಗಳನ್ನು ಹೊಂದಿರುತ್ತವೆ. ಅವುಗಳ ನಡುವೆ ಮಾತಿನ ವಾಗ್ವಾದ ನಡೆಯುತ್ತವೆ. ಆದರೆ ಪಕ್ಷದ ಹಿರಿಯ ನಾಯಕರೊಬ್ಬರು ಮತ್ತೊಂದು ಪಕ್ಷದ ಸದಸ್ಯನ

ವಿಡಿಯೋ ಮಾಡುವುದನ್ನು ಕಲ್ಪಿಸಿಕೊಳ್ಳಿ. ಅದನ್ನು ಎಂದಿಗೂ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ರಾಜ್ಯಸಭಾ ಅಧ್ಯಕ್ಷರ ಅಣಕು, ಸ್ಪೀಕರ್ರ ಅಣಕು. ಎಷ್ಟು ಅವಮಾನಕರ, ಅಪಹಾಸ್ಯಕರ, ಎಷ್ಟು ನಾಚಿಕೆಗೇಡು

ಎಂದು ಹೇಳಿದರು.

ಇನ್ನು ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಬಿಜೆಪಿ (BJP), ಉಪ ರಾಷ್ಟ್ರಪತಿ ಅವರನ್ನು ಅವಮಾನಿಸಿದ್ದಕ್ಕಾಗಿ ಮಮತಾ ಬ್ಯಾನರ್ಜಿ, ಸಂಸದ ಕಲ್ಯಾಣ್ ಬ್ಯಾನರ್ಜಿ

ಮತ್ತು ರಾಹುಲ್ ಗಾಂಧಿ (Rahul Gandhi) ಅವರನ್ನು ಟೀಕಿಸಿದ್ದು, “ವಿಪಕ್ಷಗಳ ಸಂಸದರನ್ನು ಸದನದಿಂದ ಏಕೆ ಅಮಾನತು ಮಾಡಲಾಗಿದೆ ಎಂದು ದೇಶ ಅಚ್ಚರಿ ಪಡುತ್ತಿದ್ದರೆ, ಅದಕ್ಕೆ ಇಲ್ಲಿದೆ ಕಾರಣ…

ದೇಶದ ಉಪ ರಾಷ್ಟ್ರಪತಿ ಅವರನ್ನೇ ಟಿಎಂಸಿ ಸಂಸದ ಕಲ್ಯಾಣ್ ಬ್ಯಾನರ್ಜಿ ಅಣಕಿಸಿ, ಅವಮಾನಿಸಿದರೆ, ಅದನ್ನ ಮಾನ್ಯ ರಾಹುಲ್ ಗಾಂಧಿ ಜೋರಾಗಿ ಹುರಿದುಂಬಿಸಿದ್ದಾರೆ. ಅವರು ಸದನದಲ್ಲಿ ಎಷ್ಟು

ಅಜಾಗರೂಕ ಎಂಬುದನ್ನು ನೀವೇ ಊಹಿಸಬಹುದು” ಎಂದು ಬಿಜೆಪಿ ಟ್ವೀಟ್ ಮಾಡಿದೆ.

ಇದನ್ನು ಓದಿ: ಮೇಕೆದಾಟುಗೆ ಬೇಗ ಅನುಮತಿ ಕೊಡಿಸುವಂತೆ ಮೋದಿ ಅವರನ್ನು ಒತ್ತಾಯಿಸಿದ್ದೇನೆ: ಸಿಎಂ ಸಿದ್ದರಾಮಯ್ಯ

Exit mobile version