ಸಂಸ್ಕೃತ ರಾಷ್ಟ್ರಭಾಷೆಯಾಗಲಿ ; ನಟಿ ಕಂಗನಾ ಹೇಳಿಕೆಗೆ ಕೆಂಡಮಂಡಲವಾದ ನೆಟ್ಟಿಗರು!

actress

ವಿವಾದಗಳ(Controversy) ಮೂಲಕ ಸದಾ ಸುದ್ದಿಯಲ್ಲಿರುವ ಬಾಲಿವುಡ್ ನಟಿ(Bollywood Actress) ಮತ್ತು ರಾಷ್ಟ್ರ ಪ್ರಶಸ್ತಿ(National Awardee) ವಿಜೇತೆ ಕಂಗನಾ ರಣಾವತ್(Kangana Ranaut) ಇದೀಗ ‘ರಾಷ್ಟ್ರಭಾಷೆ’ ವಿವಾದಕ್ಕೆ ಸಂಬಂಧಿಸಿದಂತೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುವ ಮೂಲಕ ಮತ್ತೆ ವಿವಾದಕ್ಕೆ ಕಾರಣರಾಗಿದ್ದಾರೆ.

ಹಿಂದಿ ನಮ್ಮ ರಾಷ್ಟ್ರಭಾಷೆ ಎಂದು ಹೇಳಿ ದೇಶಾದ್ಯಂತ ವಿವಾದ ಎಬ್ಬಿಸಿದ್ದ ಬಾಲಿವುಡ್ ನಟ ಅಜಯ್ ದೇವಗನ್‍ಗೆ ಬೆಂಬಲ ಸೂಚಿಸುವ ಮೂಲಕ ಕಂಗನಾ ರಣಾವತ್ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಹಿಂದಿ ರಾಷ್ಟ್ರಭಾಷೆ ಎನ್ನುವುದರಲ್ಲಿ ಯಾವುದೇ ಅನುಮಾನ ಬೇಡ. ಆದರೆ ಸಂಸ್ಕೃತ ಜಗತ್ತಿನ ಅನೇಕ ಭಾಷೆಗಳ ತಾಯಿ ಭಾಷೆ. ಹೀಗಾಗಿ ನಮ್ಮ ಮಕ್ಕಳಿಗೆ ಶಾಲೆಗಳಲ್ಲಿ ಸಂಸ್ಕೃತ ಭಾಷೆಯನ್ನು ಕಡ್ಡಾಯವಾಗಿ ಕಲಿಸಬೇಕು. ರಾಷ್ಟ್ರಭಾಷೆ ಎಂದು ಹಿಂದಿಯ ಬದಲಾಗಿ ಸಂಸ್ಕೃತ ಭಾಷೆಯನ್ನು ಘೋಷಿಸಬೇಕೆಂಬುದು ನನ್ನ ಅಭಿಪ್ರಾಯವಾಗಿದೆ ಎಂದು ಕಂಗನಾ ಹೇಳಿದ್ದಾರೆ.

ಇನ್ನು ಇಂಗ್ಲಿಷ್ ಭಾಷೆಯನ್ನು ಸಂಪರ್ಕ ಭಾಷೆಯನ್ನಾಗಿ ಬಳಸಬೇಕೆಂದು ಹೇಳುತ್ತಾರೆ. ಆದರೆ ಅದರ ಅಗತ್ಯವಿಲ್ಲ. ಪ್ರಾದೇಶಿಕ ಭಾಷೆಗಳನ್ನೇ ಸಂಪರ್ಕ ಭಾಷೆಯನ್ನಾಗಿ ಬಳಸಬೇಕು. ಆದರೆ ರಾಷ್ಟ್ರೀಯ ಭಾಷೆಯನ್ನಾಗಿ ನಾವು ಸಂಸ್ಕೃತ ಭಾಷೆಯನ್ನು ಬಳಸಬೇಕು. ಸಂಸ್ಕೃತ ಭಾಷೆಗೆ ನಮ್ಮ ಪರಂಪರೆಯಲ್ಲಿ ಅತ್ಯುನ್ನತ ಸ್ಥಾನವಿದೆ. ಸಾವಿರಾರೂ ವರ್ಷಗಳಿಂದ ಸಂಸ್ಕೃತ ಭಾಷೆ ಅನೇಕ ಭಾಷೆಗಳ ಮೂಲವಾಗಿದೆ. ಹೀಗಾಗಿ ಸಂಸ್ಕೃತ ಭಾಷೆಯನ್ನು ನಾವು ಹೆಚ್ಚಾಗಿ ಬಳಸಬೇಕೆಂದರು.

ಇನ್ನು ಕೆಲವು ದಿನಗಳ ಹಿಂದೆ ಬಾಲಿವುಡ್ ನಟ ಅಜಯ್ ದೇವಗನ್ ‘ಹಿಂದಿ ನಮ್ಮ ಮಾತೃಭಾಷೆ ಮತ್ತು ರಾಷ್ಟ್ರ ಭಾಷೆ’ ಎಂದು ಟ್ವೀಟ್ ಮಾಡಿದ್ದರು. ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸ್ಯಾಂಡಲ್‍ವುಡ್ ನಟ ಕಿಚ್ಚ ಸುದೀಪ್ ‘ಹಿಂದಿ ರಾಷ್ಟ್ರಭಾಷೆಯಲ್ಲ ಎಂಬುದನ್ನು ನೀವು ತಿಳಿದುಕೊಳ್ಳಬೇಕಿದೆ’ ಎಂದು ಟ್ವೀಟ್ ಮಾಡಿದ್ದರು. ಇಬ್ಬರ ನಟರ ನಡುವಿನ ಟ್ವೀಟ್‍ವಾರ್ ಇಡೀ ದೇಶಾದ್ಯಂತ ಸುದ್ದಿಯಾಗಿತ್ತು. ದಕ್ಷಿಣಭಾರತದ ಎಲ್ಲ ನಟರು ಹಿಂದಿ ರಾಷ್ಟ್ರಭಾಷೆಯಲ್ಲ ಎಂದು ಕಿಚ್ಚ ಸುದೀಪ್ ಬೆಂಬಲಕ್ಕೆ ನಿಂತಿದ್ದರು.

Exit mobile version