ಕಾನ್ಪುರದಲ್ಲಿ ನಡೆದ ಭಾರಿ ಬಸ್ ದುರಂತಕ್ಕೆ ಅನುಮಾನ ವ್ಯಕ್ತಪಡಿಸಿದ ಪೊಲೀಸರು!

ಕಾನ್ಪುರದಲ್ಲಿ ಎಲೆಕ್ಟ್ರಿಕ್ ಬಸ್ ಚಾಲಕನ ನಿಯಂತ್ರಣ ತಪ್ಪಿ ಮೂರು ಕಾರುಗಳು, ಹಲವು ಬೈಕ್ಗಳಿಗೆ ಡಿಕ್ಕಿ ಹೊಡೆದ ಪರಿಣಾಮ 5 ಮಂದಿ ಸಾವನಪ್ಪಿದ್ದು, 15ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯಗಾಳಾಗಿವೆ. ಈ ದುರ್ಘಟನೆ ಕಾನ್ಪುರದ ಥಾಟ್ ಸ್ಟೀಲ್ ಮುಖ್ಯರಸ್ತೆಯಲ್ಲಿ ಸಂಭವಿಸಿದೆ ಎನ್ನಲಾಗಿದೆ. ಈ ಕುರಿತು ಸ್ಥಳೀಯ ಪೊಲೀಸರು ಈ ಪ್ರಕರಣವನ್ನು ಶೀಘ್ರವೇ ದಾಖಲಿಸಿಕೊಂಡಿದ್ದು, ಎಲೆಕ್ಟ್ರಿಕ್ ಬಸ್ ಚಾಲಕ ನಾಪತ್ತೆಯಾಗಿದ್ದಾನೆ. ಅಪಘಾತ ನಡೆದ ಸ್ಥಳದಿಂದ ಶೀಘ್ರವೇ ಪರಾರಿಯಾಗಿದ್ದು, ಯಾರ ಸುಳಿವಿಗೂ ಸಿಕ್ಕಿಲ್ಲ ಎಂದು ತಿಳಿಸಿದ್ದಾರೆ. ಈ ಅಪಘಾತ ಪ್ರಕರಣದಲ್ಲಿ ಬಸ್ ಚಾಲಕ ನಾಪತ್ತೆಯಾಗಿರುವುದು ಪೊಲೀಸರಿಗೆ ಅನುಮಾನ ತಂದಿದೆ. ಅಪಘಾತದ ಸಂಪೂರ್ಣ ಚಿತ್ರಣವನ್ನು ಪರಿಶೀಲಿಸಿ ನೋಡಿದಾಗ, ಮೇಲಿನ ಸ್ಥಿತಿಯಲ್ಲಿ ಈ ಒಂದು ಪ್ರಕರಣ ಅಪಘಾತ ಎಂದು ಕಂಡರೆ, ಮತ್ತೊಂದು ಸ್ಥಿತಿಯಲ್ಲಿ ಪೋಲಿಸರಿಗೆ ಇದು ಉದ್ದೇಶಪೂರ್ವಕವಾಗಿ ಮಾಡಿರುವ ಅಪಘಾತ ಎಂಬ ಶಂಕೆ ವ್ಯಕ್ತವಾಗಿದೆ.

ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡವರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಡಿಸಿಪಿ ಪ್ರಮೋದ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ. ಈ ಬಗ್ಗೆ ಮಾಧ್ಯಮಗಳಿಗೆ ಮಾತನಾಡಿದ ಡಿಸಿಪಿ ಪ್ರಮೋದ್ ಕುಮಾರ್ ಈ ಅಪಘಾತಕ್ಕೆ ಸಂಬಂಧಿಸಿದಂತೆ ಈಗಾಗಲೇ ತನಿಖೆಗಳು ಆರಂಭಗೊಂಡಿವೆ. ಇದರ ಬಗ್ಗೆ ಸಂಕ್ಷಿಪ್ತವಾಗಿ ಮುಂದಿನ ದಿನಗಳಲ್ಲಿ ಮಾಹಿತಿ ನೀಡಲಿದ್ದೇವೆ. ಅಪಘಾತದಲ್ಲಿ ಮೃತಪಟ್ಟ ದುರ್ದೈವಿಗಳಿಗೆ ನಾವು ಸಾಂತ್ವನ ತಿಳಿಸಲು ಇಚ್ಛಿಸುತ್ತೇವೆ ಎಂದು ಹೇಳಿದರು. ಈ ಘಟನೆ ಕುರಿತು ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ, ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ “ಅಪಘಾತದಲ್ಲಿ ಮೃತಪಟ್ಟ ಜೀವಗಳ ಕುಟುಂಬಕ್ಕೆ ಭಗವಂತ ದುಃಖ ಭರಿಸುವ ಶಕ್ತಿ ನೀಡಲಿ” ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಈ ರೀತಿಯ ಅಪಘಾತ ಈ ಹಿಂದೆ ಬೆಂಗಳೂರಿನಲ್ಲು ನಡೆದಿತ್ತು ಮತ್ತು ಹಲವು ಅನುಮಾನಗಳ ಹುತ್ತ ಬೆಳೆದುಕೊಂಡಿತ್ತು. ಒಟ್ಟಾರೆ ಕಾನ್ಪುರ್ ನಲ್ಲಿ ನಡೆದ ಎಲೆಕ್ಟ್ರಿಕ್ ಬಸ್ ದುರಂತದಲ್ಲಿ ಸಾವಿಗೀಡಾದ ಜೀವಗಳಿಗೆ ಅನೇಕರು ಕಂಬನಿ ಮಿಡಿದಿದ್ದಾರೆ.

ಭಾನುವಾರ ಕಾನ್ಪುರದಲ್ಲಿ ಟಾಟ್ ಮಿಲ್ ಕ್ರಾಸ್‌ರೋಡ್ ಬಳಿ ಎಲೆಕ್ಟ್ರಿಕ್ ಬಸ್‌ನ ನಿಯಂತ್ರಣ ತಪ್ಪಿ ಹಲವಾರು ಮಂದಿಯನ್ನು ಹೊಡೆದುರುಳಿಸಿದ್ದರಿಂದ ಕನಿಷ್ಠ ಐವರು ಸಾವನ್ನಪ್ಪಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ. ಅಪಘಾತದಲ್ಲಿ ಮೂರು ಕಾರುಗಳು ಹಾಗೂ ಹಲವು ಬೈಕ್‌ಗಳು ಬಸ್‌ನಿಂದ ಧ್ವಂಸವಾಗಿವೆ. ಬಸ್ಸಿನ ಚಾಲಕ ಪರಾರಿಯಾಗಿದ್ದಾನೆ, ನಾವು ಅವನನ್ನು ಹುಡುಕುತ್ತಿದ್ದೇವೆ ಎಂದು ಪೂರ್ವ ಕಾನ್ಪುರದ ಉಪ ಪೊಲೀಸ್ ಆಯುಕ್ತ ಪ್ರಮೋದ್ ಕುಮಾರ್ ತಿಳಿಸಿದ್ದಾರೆ.

ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ರವಾನಿಸಲಾಗಿದ್ದು, ಪ್ರಕರಣದ ತನಿಖೆಯನ್ನು ಆರಂಭಿಸಲಾಗಿದೆ ಎಂದು ಡಿಸಿಪಿ ತಿಳಿಸಿದ್ದಾರೆ. ಏತನ್ಮಧ್ಯೆ, ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ರಸ್ತೆ ಅಪಘಾತದಲ್ಲಿ ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸಲು ಟ್ವಿಟರ್‌ಗೆ ಕರೆದೊಯ್ದಿದ್ದಾರೆ. “ಕಾನ್ಪುರದಲ್ಲಿ ರಸ್ತೆ ಅಪಘಾತದ ದುರದೃಷ್ಟಕರ ಸುದ್ದಿಯನ್ನು ಸ್ವೀಕರಿಸಲಾಗಿದೆ. ಮೃತರ ಕುಟುಂಬಗಳಿಗೆ ನನ್ನ ಆಳವಾದ ಸಂತಾಪಗಳು. ಅಪಘಾತದಲ್ಲಿ ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲು ನಾನು ದೇವರನ್ನು ಪ್ರಾರ್ಥಿಸುತ್ತೇನೆ” ಎಂದು ಪ್ರಿಯಾಂಕಾ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

Exit mobile version