ಎಲ್ಲೆಲ್ಲೂ ಕಾಂತಾರ ಅಬ್ಬರ ; 35 ದಿನ 305 ಕೋಟಿ ಗಳಿಕೆ!

Karnataka : ಕರಾವಳಿ ಮಣ್ಣಿನ ಸೊಗಡು, ಕಥೆಯನ್ನು ನಮ್ಮವರಿಗೆ ಮಾತ್ರ ಸಾರದೆ, ದೇಶದ ಮೂಲೆ ಮೂಲೆಗೂ ಪಸರಿಸಿದ ಈ ಕೀರ್ತಿ ಕಾಂತಾರ(kantara box office movie) ಚಿತ್ರಕ್ಕೆ ಸಲ್ಲುತ್ತದೆ. ಕಾಂತಾರ ಚಿತ್ರವೂ ದಿನೇ ದಿನೇ ಬಾಕ್ಸ್ ಆಫೀಸ್ ನಲ್ಲಿ(box office) ಸದ್ದು ಮಾಡುತ್ತಿದ್ದು,

ಇದೀಗ ಬಿಡುಗಡೆಯಾಗಿ 35 ದಿನಗಳಲ್ಲಿ 305 ಕೋಟಿ ಗಳಿಕೆ ಕಂಡಿರುವುದು ಕಾಂತಾರ ಚಿತ್ರ ಹಾಗೂ ಚಿತ್ರತಂಡಕ್ಕೆ ಮತ್ತಷ್ಟು ಸಂತಸವನ್ನು ತಂದೊಡ್ಡಿದೆ.

ಸದ್ಯ ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಮುಂದೆ ಓದಿ… ಈಗಂತೂ ಸಿನಿ ಪ್ರಿಯರ ಬಾಯಲ್ಲಿ ‘ಕಾಂತಾರ’ ಸಿನಿಮಾ ಬಗ್ಗೆಯೇ ಮಾತು.

ಒಂದು ಸಲ ಸಿನಿಮಾ ನೋಡಿದ ಹೆಚ್ಚಿನ ಪ್ರೇಕ್ಷಕರು ಮತ್ತೊಮ್ಮೆ ಚಿತ್ರ ನೋಡಲು ಮುಗಿಬೀಳುತ್ತಿದ್ದಾರೆ. ನಮ್ಮ ಕನ್ನಡ ಚಿತ್ರರಂಗದವರು ಮಾತ್ರವಲ್ಲದೇ ಅನ್ಯ ಭಾಷೆಯ ಕಲಾವಿದರು ಹಾಡಿ ಹೊಗಳುತ್ತಿದ್ದಾರೆ.

ಇದಕ್ಕೆ ಉದಾಹರಣೆ ಎಂಬಂತೆ, ತಮಿಳು ನಟ ಕಾರ್ತಿ, ನಿರ್ದೇಶಕ ರಾಮ್ ಗೋಪಾಲ್ ವರ್ಮ(Ram Gopal Verma), ಬಾಲಿವುಡ್ ನಟಿ ಕಂಗನಾ ರಣಾವತ್(kangana ranaut) ಶಿಲ್ಪಾ ಶೆಟ್ಟಿ, ಅನುಷ್ಕಾ ಶರ್ಮ ಸೇರಿದಂತೆ ಅನೇಕ ಪರಭಾಷಾ ಕಲಾವಿದರು ಕಾಂತಾರ ಚಿತ್ರ ನೋಡಿ ಮೆಚ್ಚುಗೆ ಸೂಚಿಸಿದ್ದಾರೆ.

https://youtu.be/AOZCDXADxBQ ಒಂದೇ ಕುಟುಂಬದಿಂದ 7 ಯುವ ಕೃಷಿಕರು.

ಈ ಚಿತ್ರದ ಯಶಸ್ಸಿನ ನಂತರ, ರಿಷಬ್ ಅವರಿಗೆ ಪರಭಾಷೆಯಿಂದಲೂ ಬಹಳಷ್ಟು ಆಫರ್ ಬರುತ್ತಿವೆ. ಆದರೆ ಮುಂದಿನ ಪ್ರಾಜೆಕ್ಟ್‌ ಯಾವುದು ಎಂದು ದೇವರಿಗೆ ಗೊತ್ತಿದೆ ಎಂದು ರಿಷಬ್(Rishab shetty) ಇತ್ತೀಚಿನ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ಕಾಂತಾರ ಸಿನಿಮಾ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿರುವ ಈ ಸಂದರ್ಭದಲ್ಲಿ, ಬಹುತೇಕ ಪಾಸಿಟಿವ್ ಪ್ರತಿಕ್ರಿಯೆಗಳೇ ಕೇಳಿಬರುತ್ತಿವೆ.

ಸದ್ಯ ಕಾಂತಾರ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ತನ್ನ ನಾಗಾಲೋಟ ಮುಂದುವರಿಸಿದ್ದು, 35 ದಿನಗಳ ಅವಧಿಯಲ್ಲಿ 305 ಕೋಟಿಗೂ ಹೆಚ್ಚು ಹಣ ಗಳಿಸಿ,

ನಮ್ಮ ಕನ್ನಡ ಸಿನಿಮಾವೇ ಆದ ‘ಕೆ.ಜಿ.ಎಫ್ ೧’(KGF) ಚಿತ್ರದ ದಾಖಲೆಯನ್ನು ಮುರಿದು ಮುನ್ನುಗ್ಗಿದೆ. ತೆಲುಗು ಭಾಷೆಯಲ್ಲಿ 50 ಕೋಟಿ ರೂ. ಕಬಳಿಸಿಕೊಂಡಿದ್ದು,

ತೆಲುಗು ಭಾಷೆಗೆ ಡಬ್ ಆಗಿ ಬಿಡುಗಡೆಗೊಂಡು ಯಶಸ್ವಿಯಾದ ಆರನೇ ಚಿತ್ರ ಎಂಬ ಹೆಗ್ಗಳಿಕೆಗೆ ಕಾಂತಾರ ಪಾತ್ರವಾಗಿದೆ. ಇದೇ ರೀತಿ ಹಿಂದಿ ಭಾಷೆಯಲ್ಲೂ ಸಹ ಮೂರನೇ ವಾರಾಂತ್ಯಕ್ಕೆ 50 ಕೋಟಿ ಗಳಿಕೆ ಮಾಡಿದೆ.

ಮೊದಲ ಎರಡು ವಾರವನ್ನು ಹೋಲಿಸಿದರೆ ಮೂರನೇ ವಾರವೇ ಅತೀ ಹೆಚ್ಚು ಕಲೆಕ್ಷನ್ ಕಂಡಿರುವುದು ಮತ್ತಷ್ಟು ವಿಶೇಷ!

ನಮ್ಮ ಭಾಷೆಯೊಂದರಲ್ಲೇ 160 ಕೋಟಿ ರೂ. ಗಳಿಕೆ ಮಾಡುವ ಮೂಲಕ ಹೊಸ ದಾಖಲೆಯನ್ನು ನಿರ್ಮಿಸಿದೆ.

ಕಾಂತಾರ ಬಿಡುಗಡೆಯಾಗಿ ಒಂದು ತಿಂಗಳು ಕಳೆದರೂ ಅದರ ಕಂಪು ಇನ್ನೂ ಮಾಸಿಲ್ಲ! ಹೆಚ್ಚೆಚ್ಚು ಚಿತ್ರಮಂದಿರಗಳಲ್ಲಿ ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಕುಳಿತು ಸಿನಿಮಾ ವೀಕ್ಷಿಸುತ್ತಿದ್ದಾರೆ.

ಇದನ್ನೂ ಓದಿ : https://vijayatimes.com/diamond-rain-on-uranus-and-neptune/

ಕನ್ನಡದ ಕಾಂತಾರ ಒಂದೇ ಇತ್ತೀಚಿಗೆ ಬಿಡುಗಡೆಗೊಂಡಿರುವ ಅನ್ಯ ಭಾಷೆಯ ಸಿನಿಮಾಗಳನ್ನು ಹಿಂದಿಕ್ಕಿ ಮುನ್ನುಗ್ಗುತ್ತಿದೆ ಎಂಬುದು ಕನ್ನಡಿಗರಿಗೆ, ಕನ್ನಡ ಚಿತ್ರರಂಗಕ್ಕೆ ಹೆಮ್ಮೆಯ ಸಂಗತಿ ಎಂದೆ ಹೇಳಬಹುದು.

Exit mobile version