ಕರಾವಳಿ ಭಾಗದ ಭರ್ಜರಿ ಕಂಬಳದ ಕ್ಷಣಗಣನೆ ; ಕೋಣ ಓಟದ ಕುತೂಹಲಕರ ಮಾಹಿತಿ ಇಲ್ಲಿದೆ

Karnataka : ಕಂಬಳವು ಕರಾವಳಿ ಕರ್ನಾಟಕದ (karavali kambala) ಒಂದು ವಿಶೇಷವಾದ ಜನಪದ ಕ್ರೀಡೆ. ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಈಗಾಗಲೇ ಡಿಸೆಂಬರ್ ತಿಂಗಳ ಕಾರ್ಯಕ್ರಮಗಳ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ.

ರೈತರು ತಮ್ಮ ಭತ್ತದ ಮೊದಲ ಕೊಯ್ಲು ಮಾಡುವ ತಿಂಗಳುಗಳಲ್ಲಿ ನಡೆಯುವ ಸ್ಪರ್ಧೆಯೇ ಕಂಬಳ (karavali kambala).

ಜಾನಪದದೊಂದಿಗೆ ಹಾಸು ಹೊಕ್ಕಿರುವ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಈ ಕ್ರೀಡೆ ಬಹಳ ವಿಶೇಷವಾಗಿ ನಡೆಸುತ್ತಾರೆ.

ಕಂಬಳ ಕರಾವಳಿ ಭಾಗದ ಗ್ರಾಮಸ್ಥರಿಗೆ ಮನರಂಜನಾ ಕಾರ್ಯಕ್ರಮವಾಗಿದ್ದು ಮತ್ತು ಅದ್ಭುತ ಸ್ಪರ್ಧೆಯು ಆಗಿದೆ. ಕಂಬಳದ ಕೋಣವನ್ನು ಸಾಕುವುದೆಂದರೆ ಸಾಮಾನ್ಯವಾದ ಕೆಲಸವಂತು ಅಲ್ಲ. ಕೋಣವನ್ನು ದಷ್ಟ ಪುಷ್ಟವಾಗಿ ಬೆಳೆಸಿ,

ಅವುಗಳ ಬಗ್ಗೆ ಮುತುವರ್ಜಿ ವಹಿಸಿ, ಉತ್ತಮ ಎಣ್ಣೆ ಬಳಸಿ ಅವುಗಳಿಗೆ ಮಾಲಿಶ್ ಮಾಡಿ ಜೊತೆಗೆ ಉತ್ತಮ ರೀತಿಯ ಆಹಾರ ಪದ್ಧತಿಯನ್ನು ಅನುಸರಿಸಿಕೊಂಡು ಕೋಣಗಳನ್ನು ಪೋಷಿಸಲಾಗುತ್ತದೆ.

ಅದಾದ ನಂತರ ಕೊಯ್ಲು ಮಾಡಿರುವ ಭತ್ತದ ಗದ್ದೆಯ ಮಣ್ಣನ್ನು ಹದ ಮಾಡಿ ಕೆರಸು ಗದ್ದೆಯನ್ನಾಗಿ ಪರಿವರ್ತಿಸಿ ಕಂಬಳದ ಓಟಕ್ಕೆ ಸಿದ್ಧಪಡಿಸಲಾಗುತ್ತದೆ.

ಇದನ್ನೂ ಓದಿ : https://vijayatimes.com/state-government-transfer-issue/

ಅದರೊಂದಿಗೆ ಕೋಣವನ್ನು ಸ್ಪರ್ಧೆಗಿಳಿಸಲು ಕಟುಮಸ್ತಾದ ಓಟಗಾರನಿಗೆ ತರಬೇತಿ ನೀಡಲಾಗುತ್ತದೆ. ಕಂಬಳವನ್ನು ಎರಡು ಸಮಾನಾಂತರ ರೇಸ್ ಟ್ರ್ಯಾಕ್‌ಗಳಲ್ಲಿ ನಡೆಸಲಾಗುತ್ತದೆ, ಇದು ಕೆಸರಿನಿಂದ ತುಂಬಿರುತ್ತದೆ.

ಈ ಓಟಗಾರನು ಮರದ ಹಲಗೆಯ ಮೇಲೆ ನಿಂತು 2 ಕೋಣಗಳನ್ನು ನೇಗಿಲಿಗೆ ಕಟ್ಟಿ ಅವುಗಳನ್ನು ಚಾಟಿಯಿಂದ ಹೊಡೆದು ರೊಚ್ಚಿಗೆಬ್ಬಿಸಿ ಓಡಲು ಶುರು ಮಾಡುತ್ತಾನೆ.

https://youtu.be/rO_lBpBf5sg

ಓಟದ ಸಮಯದಲ್ಲಿ ಕೆಸರು ನೀರನ್ನು ಎಷ್ಟು ಸಾಧ್ಯವೋ ಅಷ್ಟು ಮೇಲಕ್ಕೆ ಚಿಮ್ಮಿಸುತ್ತಾನೆ. ಹೀಗೆ ಆರಂಭವಾದ ಸ್ಪರ್ಧೆಯು ಅಲ್ಲಿಯ ನೋಡುಗಾರರಿಗೆ ಇನ್ನಷ್ಟು ಕುತೂಲಕ್ಕೆ ಎಡೆಮಾಡಿ ಕೊಡುತ್ತದೆ.

ಹಿಂದೆ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಉಳುಮೆ ಮಾಡಲು ಕೋಣವನ್ನು (Buffalo) ಬಳಸುತ್ತಿದ್ದರು.

ಆ ದಿನಗಳಲ್ಲಿ ಅಲ್ಲಿಯ ರಾಜ ಮನೆತನದ ಬೆಂಬಲ ಹಾಗೂ ಅವರ ಪ್ರೋತ್ಸಾಹದಿಂದ ಈ ಕ್ರೀಡೆ ಏರ್ಪಡುತ್ತಿತ್ತು.

ನವೆಂಬರ್‌- ಡಿಸೆಂಬರ್‌ ತಿಂಗಳಲ್ಲಿ ಆರಂಭವಾಗುವ ಈ ಕ್ರೀಡೆಯು ಚಳಿಗಾಲದಂದು ಶುರುವಾಗಿ ಬಿಸಿಲ ಬೇಗೆ ಬರುವ ಮೊದಲೇ ಈ ಕಂಬಳ ಓಟ ಕೊನೆಗೊಳ್ಳುತ್ತದೆ.
Exit mobile version