ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಇನ್ನೂ ಯಾಕೆ ಬಿಡುಗಡೆಯಾಗುತ್ತಿಲ್ಲ?

Karnataka : ರಾಜ್ಯ ವಿಧಾನಸಭಾ ಚುನಾವಣೆಗೆ (Assembly election) ದಿನಗಣನೆ ಶುರುವಾಗಿದೆ. ಕಾಂಗ್ರೆಸ್‌ ಈಗಾಗಲೇ ಮೊದಲ ಪಟ್ಟಿಯಲ್ಲಿ 124 ಮತ್ತು ಎರಡನೇಯ ಪಟ್ಟಿಯಲ್ಲಿ 45 ಅಭ್ಯರ್ಥಿಗಳ ಹೆಸರುಗಳನ್ನು (Karnataka assembly election) ಬಿಡುಗಡೆ ಮಾಡಿದೆ. ಇದಕ್ಕೂ ಮುನ್ನವೇ ಜೆಡಿಎಸ್‌ 93 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಇದೀಗ ಎರಡನೇಯ ಪಟ್ಟಿಯನ್ನು ಕೂಡಾ ಬಿಡುಗಡೆ ಮಾಡಲು ಸಿದ್ದತೆ ನಡೆಸಿದೆ.

ಆದರೆ ಬಿಜೆಪಿ ಮಾತ್ರ ಇದುವರೆಗೂ ಮೊದಲ ಪಟ್ಟಿಯನ್ನೇ ಬಿಡುಗಡೆ ಮಾಡಿಲ್ಲ. ಕಾಂಗ್ರೆಸ್ (Congress) -ಜೆಡಿಎಸ್‌ (JDS) ಅಭ್ಯರ್ಥಿಗಳು ಕಣದಲ್ಲಿ ಪ್ರಚಾರಕಾರ್ಯ ಆರಂಭಿಸಿದ್ದರೆ,

ಬಿಜೆಪಿಯಲ್ಲಿ (BJP) ಮಾತ್ರ ಟಿಕೆಟ್‌ ಹಂಚಿಕೆಯ ಗೊಂದಲ ತಲೆದೋರಿದೆ. ಬಿಜೆಪಿಯಲ್ಲಿ ಟಿಕೆಟ್‌ ಹಂಚಿಕೆ ಗಜಪ್ರಹಸವಾಗಿ ಮಾರ್ಪಟ್ಟಿದ್ದು, ಯಾರಿಗೆ ಟಿಕೆಟ್‌ (Karnataka assembly election) ನೀಡಬೇಕು, ಯಾರಿಗೆ ಕೊಕ್‌ ನೀಡಬೇಕು,

ಯಾವೆಲ್ಲಾ ಮಾನದಂಡಗಳನ್ನು ಅನುಸರಿಸಬೇಕೆಂಬ ಗೊಂದಲದಲ್ಲಿ ಬಿಜೆಪಿ ಸಿಲುಕಿದೆ.

ಬಿಜೆಪಿ ತನ್ನ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲು ಯಾಕಿಷ್ಟು ವಿಳಂಬ ಮಾಡುತ್ತಿದೆ ಎಂಬುದಕ್ಕೆ ಬಿಜೆಪಿ ಆಂತರಿಕ ವಲಯದಲ್ಲಿ ಕೇಳಿ ಬರುತ್ತಿರುವ ಮಾತುಗಳೆಂದರೆ,

ಇದನ್ನೂ ಓದಿ : https://vijayatimes.com/shruti-haasan-appeals-producers/

• ಬಿಜೆಪಿಯಲ್ಲಿ ಟಿಕೆಟ್‌ ಹಂಚಿಕೆಗೆ ನಿರ್ದಿಷ್ಟವಾದ ಸೂತ್ರವನ್ನು ಅನುಸರಿಸಲಾಗುತ್ತಿಲ್ಲ.
• ಗುಜರಾತ್‌ (Gujarat) ಮಾದರಿಯಲ್ಲಿ ಹೊಸ ಮುಖಗಳಿಗೆ ಟಿಕೆಟ್‌ ನೀಡುವ ಕುರಿತು ಚರ್ಚೆ ನಡೆಯುತ್ತಿದೆಯಾದರೂ, ಒಮ್ಮತದ ಅಭಿಪ್ರಾಯಕ್ಕೆ ಬರಲು ಸಾಧ್ಯವಾಗುತ್ತಿಲ್ಲ.
• ಕುಟುಂಬ ರಾಜಕೀಯಕ್ಕೆ ಕಡಿವಾಣ ಹಾಕುವ ಕಾರಣದಿಂದ ಮಕ್ಕಳಿಗೆ ಟಿಕೆಟ್‌ ಕೇಳುತ್ತಿರುವ ನಾಯಕರನ್ನು ಸಮಾಧಾನಪಡಿಸುವ ಮತ್ತು ಬಂಡಾಯಕ್ಕೆ ಶಮನ ಹಾಕುವ ತಂತ್ರಗಾರಿಕೆ.

ಇದನ್ನೂ ಓದಿ : https://vijayatimes.com/shocking-statement-of-revanna/


• ಕೆಲ ನಾಯಕರು ಮಕ್ಕಳಿಗೆ ಟಿಕೆಟ್‌ಬೇಕೆಂದು ಬಂಡಾಯವೇಳುವ ಸಾಧ್ಯತೆ.
• ಸರ್ವೇ ವರದಿಗಳಲ್ಲಿ ಸಾಕಷ್ಟು ಗೊಂದಲ ಉಂಟಾಗಿದ್ದು, ಯಾವ ಸರ್ವೇಯನ್ನು ಟಿಕೆಟ್‌ ನೀಡುವುದಕ್ಕೆ ಪರಿಗಣಿಸಬೇಕೆಂಬ ಗೊಂದಲ.
• ಕರಾವಳಿ ಭಾಗದ ಜಿಲ್ಲೆಗಳಲ್ಲಿ ಆರ್‌ಎಸ್‌ಎಸ್‌ (RSS) ಸೂಚಿಸುವ ಅಭ್ಯರ್ಥಿಗಳಿಗೆ ಮಣೆ ಹಾಕುವ ದೃಷ್ಟಿಯಿಂದ ಹಾಲಿ ಶಾಸಕರಿಗೆ ಬಂಡಾಯವೇಳಲು ಸಮಯ ಸಿಗದಂತೆ ಮಾಡುವುದು.
• ಜಾತಿ ಲೆಕ್ಕಾಚಾರ ಈ ಬಾರಿ ಹೇಗೆ ಪ್ರಭಾವ ಬೀರುತ್ತದೆ ಎಂಬ ಗೊಂದಲ.


• ಅಭ್ಯರ್ಥಿಗಳ ಆಯ್ಕೆಯಲ್ಲಿ ರಾಜ್ಯ ಬಿಜೆಪಿ ಮತ್ತು ಹೈಕಮಾಂಡ್‌ (High Command) ಮಧ್ಯೆ ಸಾಕಷ್ಟು ಭಿನ್ನಾಭಿಪ್ರಾಯ.
• ರಾಜ್ಯ ಬಿಜೆಪಿಯಿಂದ ಒಂದು ಕ್ಷೇತ್ರಕ್ಕೆ ಮೂವರು ಅಭ್ಯರ್ಥಿಗಳ ಹೆಸರನ್ನು ಸೂಚಿಸಲಾಗಿದ್ದು, ಇದು ಹೈಕಮಾಂಡ್‌ಗೆ ದೊಡ್ಡ ತಲೆನೋವು ತಂದಿದ್ದು, 60 ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಮೂವರು ಸಮಾನ ಶಕ್ತಿ ಹೊಂದಿದ್ದಾರೆ.
• ಟಿಕೆಟ್‌ ಹಂಚಿಕೆಯ ನಂತರ ದೊಡ್ಡ ಪ್ರಮಾಣದಲ್ಲಿ ಬಂಡಾಯ ಉಂಟಾಗುವ ಸಾಧ್ಯತೆಯಿದ್ದು, ತಡವಾಗಿ ಪಟ್ಟಿ ಬಿಡುಗಡೆ ಮಾಡಿದರೆ ಒಳ್ಳೆಯದು ಎಂಬ ತಂತ್ರಗಾರಿಕೆ.
• ಕೊನೆ ಘಳಿಗೆಯಲ್ಲಿ ನರೇಂದ್ರ ಮೋದಿ (Narendra Modi) ಅವರು ಕೆಲವು ಬದಲಾವಣೆಗಳನ್ನು ಮಾಡುವಂತೆ ಸೂಚನೆ ನೀಡಿದ್ದಾರೆ.

Exit mobile version