ಕರ್ನಾಟಕ ಉದ್ಯೋಗ ನೀತಿ 2022-25 ಕ್ಕೆ ರಾಜ್ಯ ಸಚಿವ ಸಂಪುಟ ಅನುಮೋದನೆ

State Govt

ರಾಜ್ಯದಲ್ಲಿ ಹೆಚ್ಚೆಚ್ಚು ಹೊಸ ಉದ್ಯೋಗ(Job) ಸೃಷ್ಟಿಸಲು ಹೂಡಿಕೆದಾರರಿಗೆ ವಿಶೇಷ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ “ಕರ್ನಾಟಕ ಉದ್ಯೋಗ ನೀತಿ 2022-2025” ಜಾರಿಗೊಳಿಸಲು ಸರಕಾರ ಮುಂದಾಗಿದೆ. ಆ ಮೂಲಕ ಮೂರು ವರ್ಷಗಳಲ್ಲಿ 7.50 ಲಕ್ಷ ಉದ್ಯೋಗ ಸೃಷ್ಟಿ ಗುರಿ ಹೊಂದಿದೆ. ಈ ಸಂಬಂಧ ನೂತನ ಉದ್ಯೋಗ ನೀತಿ ಜಾರಿಗೆ ಸಚಿವ ಸಂಪುಟ ಸಭೆ ಶುಕ್ರವಾರ ಅನುಮೋದನೆ ನೀಡಿದೆ. ಹೊಸ ಹೂಡಿಕೆಗಿಂತಲೂ, ಈಗಾಗಲೇ ಕಾರ್ಯಾಚರಣೆಯಲ್ಲಿರುವ ಉದ್ದಿಮೆಗಳಲ್ಲಿ ಹೊಸ ಉದ್ಯೋಗ ಸೃಷ್ಟಿಗೆ ನೂತನ ನೀತಿಯಲ್ಲಿ ಆದ್ಯತೆ ನೀಡಲಾಗಿದೆ.

ಇದಕ್ಕೆ ಪೂರಕವಾದ ವಿಸ್ತರಣಾ ಹೂಡಿಕೆ ಆಧರಿಸಿ, ಹೆಚ್ಚುವರಿ ವಹಿವಾಟಿಗೆ ಅನುಗುಣವಾಗಿ ಸಬ್ಸಿಡಿ(Subsidy) ಅಥವಾ ಪ್ರೋತ್ಸಾಹ ಧನ ನೀಡಲು ಸರಕಾರ ನಿರ್ಧರಿಸಿದೆ. ಒಟ್ಟಾರೆ, ಕೈಗಾರಿಕಾ ನೀತಿ ಮೂಲಕ ಮೂರು ವರ್ಷಗಳಲ್ಲಿ 3.50 ಲಕ್ಷ ಉದ್ಯೋಗ ಹಾಗೂ ‘ಜವಳಿ ಮತ್ತು ಗಾರ್ಮೆಂಟ್‌ ನೀತಿ’ಯಡಿ ಎರಡು ವರ್ಷಗಳಲ್ಲಿ 4 ಲಕ್ಷ ಉದ್ಯೋಗ ಸೃಷ್ಟಿಸುವ ಮೂಲಕ ಒಟ್ಟು 7.50 ಲಕ್ಷ ಉದ್ಯೋಗಾವಕಾಶ ಸೃಷ್ಟಿಸುವ ನಿರೀಕ್ಷೆಯನ್ನಿಟ್ಟುಕೊಂಡಿದೆ. ಶುಕ್ರವಾರ ಸಿಎಂ(CM) ಬಸವರಾಜ ಬೊಮ್ಮಾಯಿ(Basavaraj Bommai) ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಹೊಸ ಕರ್ನಾಟಕ ಉದ್ಯೋಗ ನೀತಿ 2022-25 ಕ್ಕೆ ಅನುಮೋದನೆ ನೀಡಲಾಗಿದ್ದು,

ಹೊಸ ಕರ್ನಾಟಕ ಉದ್ಯೋಗ ನೀತಿ 2022-25ರ ಪ್ರಕಾರ, ಹೂಡಿಕೆದಾರರು ರಾಜ್ಯದಲ್ಲಿ ತಮ್ಮ ಘಟಕಗಳನ್ನು ವಿಸ್ತರಿಸುವುದು ಅಥವಾ ಹೊಸದನ್ನು ಸ್ಥಾಪಿಸಿದರೆ ಅವರು ಒದಗಿಸುವ ಉದ್ಯೋಗಗಳ ಸಂಖ್ಯೆಯನ್ನು ಹೆಚ್ಚಿಸಬೇಕಾಗುತ್ತದೆ. ಈ ಕುರಿತು ಮಾಹಿತಿ ನೀಡಿರುವ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ(JC Madhuswamy), ಉದ್ಯೋಗಾವಕಾಶಗಳು ಕ್ಷೀಣಿಸುತ್ತಿರುವುದರಿಂದ ರಾಜ್ಯದಲ್ಲಿ ಹೆಚ್ಚಿನ ಉದ್ಯೋಗಗಳನ್ನು ಸೃಷ್ಟಿಸುವ ಗುರಿಯನ್ನು ಈ ನೀತಿ ಹೊಂದಿದೆ ಎಂದು ಹೇಳಿದರು.
“ವಿವಿಧ ಘಟಕಗಳು ಉದ್ಯೋಗವನ್ನು ಹೇಗೆ ಒದಗಿಸಬೇಕು ಎಂಬುದರ ಬಗ್ಗೆ ಕೂಡ ಹೊಸ ನೀತಿಯಡಿ ನಿರ್ದಿಷ್ಟ ಮಾರ್ಗಸೂಚಿಗಳಿವೆ.

ಉದ್ಯೋಗಗಳ ಸಂಖ್ಯೆಯನ್ನು ಹೆಚ್ಚಿಸಬೇಕು ಮತ್ತು ಸ್ಥಳೀಯರನ್ನು ನೇಮಿಸಿಕೊಳ್ಳಬೇಕು” ಎಂದು ಹೇಳಿದರು. ಉದ್ಯೋಗಗಳ ಸಂಖ್ಯೆಯಲ್ಲಿನ ಹೆಚ್ಚಳವು ಉದ್ಯಮವನ್ನು ಹೇಗೆ ವರ್ಗೀಕರಿಸಲಾಗಿದೆ ಎಂಬುದರ ಆಧಾರದ ಮೇಲೆ ಬದಲಾಗುತ್ತದೆ. ಕಂಪನಿಗಳು ಹೆಚ್ಚುವರಿಯಾಗಿ ಹೂಡಿಕೆ ಮಾಡಬೇಕಾದರೆ, ಅವರು ನೀತಿಯಲ್ಲಿ ವಿವರಿಸಿದ ಮಾನದಂಡಗಳ ಆಧಾರದ ಮೇಲೆ ಹೆಚ್ಚುವರಿ ಉದ್ಯೋಗಗಳನ್ನು ಸೃಷ್ಟಿಸಬೇಕಾಗುತ್ತದೆ ಎಂದು ಸಚಿವ ಮಾಧುಸ್ವಾಮಿ ಸ್ಪಷ್ಟಪಡಿಸಿದರು.

Exit mobile version