ಎಸ್ ಎಸ್ ಎಲ್ ಸಿ ಪರೀಕ್ಷ ಆರಂಭ, ಪೋಷಕರಲ್ಲಿ ಹೆಚ್ಚಿದ ಆತಂಕ!

ಬೆಂಗಳೂರು: ಕೊರೋನಾದ ಭೀತಿಯ ನಡುವೆಯು ರಾಜ್ಯದ್ಯಾಂತ ಜೂನ್ 25ರಿಂದ ಜುಲೈ 4 ರವರೆಗೂ ಎಸ್ ಎಸ್ ಎಲ್ ಸಿ ಪರೀಕ್ಷೆ ಆರಂಭವಾಗಿದೆ. ಆದರೆ ಕೊರೊನಾ ಭಯ ಪೋಷಕರಲ್ಲಿ ಹಾಗು ವಿದ್ಯಾರ್ಥಿಗಳಲ್ಲಿ ಆತಂಕ ಹೆಚ್ಚಿದೆ.

ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಸರ್ಕಾರ ಕೈಗೊಂಡಿದ್ದು ತಲಾ ಒಬ್ಬ ವಿದ್ಯಾರ್ಥಿಗೆ 3 ಮಾಸ್ಕ್ ಹಾಗೂ ಸ್ಯಾನಿಟೈಸರ್ ಗಳನ್ನು ಸರ್ಕಾರವೇ ನೀಡುತ್ತಿದೆ. ಬೆಳಗ್ಗೆ 10ಗಂಟೆಯಿಂದ ಮಧ್ಯಾಹ್ನ  1 ಗಂಟೆಯವರೆಗೂ  ಪರೀಕ್ಷೆ ನಡೆಯಲಿದ್ದು, ಬೆಳ್ಳಗ್ಗೆ 7:30ರಿಂದ ಕೇಂದ್ರಗಳನ್ನು ತೆರೆದು ಸ್ಯಾನಿಟೈಸರ್‌ ಮಾಡಿದ್ದಾರೆ.

ಜೂನ್ 24ರಂದು ಶಿಕ್ಷಣ ಸಚಿವರಾದ ಸುರೇಶ್ ಕುಮಾರ್ ‘ನಾವು ಶಿಕ್ಷಣ ತಜ್ಞರ ಸಲಹೆ ಪಡೆದೇ ಈ ನಿರ್ಧಾರವನ್ನು ಕೈಗೊಂಡಿದ್ದರಿಂದ ಯಾರೂ ಯಾವುದೇ ಆತಂಕ ಪಡುವ ಅಗತ್ಯವಿಲ್ಲ. ವಿದ್ಯಾರ್ಥಿಗಳು ಕೂಡ ಭಯ ಬಿಟ್ಟು ಪರೀಕ್ಷೆ ಬರೆಯಬಹುದು’ ಎಂದು ಹೇಳಿಕೆ ನೀಡಿದ್ದಾರೆ.

ಈಗಾಗಲೇ ಬೇರೆ ರಾಜ್ಯಗಳಲ್ಲಿ ಕೊರೋನಾ ಹೆಚ್ಚಳ ಹಿನ್ನಲೆಯಲ್ಲಿ ಪರೀಕ್ಷಗಳನ್ನು ರದ್ದುಗೊಳಿಸಿ ಎಲ್ಲಾ ವಿದ್ಯಾರ್ಥಿಗಳನ್ನು ಪಾಸ್ ಮಾಡಿದ್ದರಿಂದ ರಾಜ್ಯದಲ್ಲೂ ಪರೀಕ್ಷೆ ನಡೆಸಬಾರೆದಂದು ಭಾರಿ ಆಕ್ರೋಷ ವ್ಯಕ್ತವಾಗಿತ್ತು. ಇದರ ನಡುವೆಯೂ ಸರ್ಕಾರದ ಈ ತೀರ್ಮಾನ ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತೆ ಎಂದನ್ನು ನೋಡಬೇಕಾಗಿದೆ.

Exit mobile version